ರಾಜ್ಯದ 113 ಅಮರನಾಥ ಯಾತ್ರಿಕರು ಸುರಕ್ಷಿತ
Team Udayavani, Jul 7, 2018, 5:11 PM IST
ಹುಬ್ಬಳ್ಳಿ: ಅಮರನಾಥ ಯಾತ್ರೆಗೆಂದು ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಇನ್ನಿತರೆ ಭಾಗಗಳಿಂದ ತೆರಳಿದ್ದ ಎಲ್ಲ 113 ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದು, ಶುಕ್ರವಾರ ಎಲ್ಲರೂ ಪಹಲ್ಗಾಮ್ಗೆ ಬಂದು ಸೇರಿಕೊಂಡಿದ್ದಾರೆ. ಖಾಸಗಿ ಟ್ರಾವೆಲ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಅಮರನಾಥ ಯಾತ್ರೆಗೆ ಹುಬ್ಬಳ್ಳಿ-ಧಾರವಾಡ, ಬ್ಯಾಡಗಿ, ಸಂಶಿ, ಗದಗ, ದಾವಣಗೆರೆ, ಸುರೇಬಾನ, ಲಕ್ಷ್ಮೇಶ್ವರ, ಚಿತ್ರದುರ್ಗ, ಮುಂಡಗೋಡ, ಕೊಪ್ಪಳ, ವಿಜಯಪುರ ಸೇರಿದಂತೆ ಇನ್ನಿತರೆ ಭಾಗಗಳಿಂದ ಸುಮಾರು 113 ಯಾತ್ರಾರ್ಥಿಗಳು ಜೂ.26ರಂದು ಹುಬ್ಬಳ್ಳಿಯಿಂದ ತೆರಳಿದ್ದರು. ಇವರಲ್ಲಿ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ 3, ಕೇಶ್ವಾಪುರದ 9, ಉಣಕಲ್ಲದ 6, ಗಾಮನಗಟ್ಟಿಯ 6, ಹಳೇಹುಬ್ಬಳ್ಳಿಯ 5, ಬಮ್ಮಾಪುರದ ಒಬ್ಬರು ಸೇರಿ 31 ಜನರು ಹಾಗೂ ಧಾರವಾಡ ತಾಲೂಕಿನ 10, ಕುಂದಗೋಳ ತಾಲೂಕಿನ 6 ಸೇರಿ ಧಾರವಾಡ ಜಿಲ್ಲೆಯಿಂದ ಒಟ್ಟು 46 ಜನರು ಹಾಗೂ ಇನ್ನುಳಿದ ಜಿಲ್ಲೆಗಳಿಂದ 67 ಯಾತ್ರಾರ್ಥಿಗಳು ಇದ್ದಾರೆ. ಇವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಹಶೀಲ್ದಾರ್ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.
ಬಾಲ್ತಾಲ್ನಲ್ಲಿ ಸುರಕ್ಷಿತವಾಗಿದ್ದ 58 ಯಾತ್ರಾರ್ಥಿಗಳೆಲ್ಲ ಶುಕ್ರವಾರ ಬೆಳಗ್ಗೆ ಬಸ್ ಮೂಲಕ ಪಹಲ್ಗಾಮ್ಗೆ ತೆರಳಿದೆವು. ಗುಫಾದಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿದ್ದವರು ಕೂಡ ಶುಕ್ರವಾರ ನಮ್ಮನ್ನು ಕೂಡಿಕೊಂಡಿದ್ದಾರೆ. ಎಲ್ಲ 113 ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದೇವೆ. ಶನಿವಾರ ಬೆಳಗ್ಗೆ ವೈಷ್ಣೋದೇವಿಗೆ ತೆರಳಲಿದ್ದೇವೆ ಎಂದು ನವನಗರದ ನಿವಾಸಿ ರಾಘವೇಂದ್ರ ಶಿರಹಟ್ಟಿ ‘ಉದಯವಾಣಿ’ಗೆ ತಿಳಿಸಿದ್ದಾರೆ. ಗುಫಾದಲ್ಲಿ ಸಿಲುಕಿದ್ದ 3-4 ಯಾತ್ರಾರ್ಥಿಗಳು ಹೆಲಿಕಾಪ್ಟರ್ ಮೂಲಕ ಬಾಲ್ತಾಲ್ ಬಳಿಯ ಹೆಲಿಪ್ಯಾಡ್ಗೆ ಆಗಮಿಸಿದ್ದರು. ನಂತರ ಅವರು ಕೂಡ ಕಾರಿನಲ್ಲಿ ಪಹಲ್ಗಾಮ್ಗೆ ಆಗಮಿಸಿದರು. ಹುಬ್ಬಳ್ಳಿಯಿಂದ ಅಮರನಾಥ ಯಾತ್ರೆಗೆ ಆಗಮಿಸಿದ್ದ ಎಲ್ಲ 113 ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಟ್ರಾವೆಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುನೀಲ ತೊಗರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.