ಮಾನವೀಯ ಮೌಲ್ಯ ಮತ್ತೆ ಕಟ್ಟಿ ಕೊಡಬೇಕಾಗಿದೆ
Team Udayavani, Jul 8, 2018, 6:45 AM IST
ಧಾರವಾಡ: ಜೀವನ ಮೌಲ್ಯಗಳೇ ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತೆ ಸಮಾಜಕ್ಕೆ ಕಟ್ಟಿ ಕೊಡಬೇಕಾದ ಅಗತ್ಯತೆ ಕಾಣುತ್ತಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಹೇಳಿದರು.
ಇಲ್ಲಿನ ಹೈಕೋರ್ಟ್ ಪೀಠದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದು ಬಡ್ಡಿ ದರ ಇಳಿಯತ್ತಿದೆ, ಸಾಲ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಾಮಾಣಿಕ ಕರ್ತವ್ಯಗಳನ್ನು ನಿರ್ಲಕ್ಷಿಸಿ ಮನ ಬಂದಂತೆ ವರ್ತಿಸುವ ಮನಸ್ಸುಗಳು ಹೆಚ್ಚಾಗುತ್ತಿದ್ದು, ಸಮಾಜದ ಸ್ವಾಸ್ಥÂವನ್ನು ಕೆಡಿಸುತ್ತಿವೆ. ಇಂತಹ ಸಂದರ್ಭದಲ್ಲಿಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಂಡು ಸಮಾಜ ಕಟ್ಟುವ ಕಾರ್ಯ ಮಾಡಬೇಕಿದೆ ಅದಕ್ಕೆ ಯುವ ವಕೀಲರು ಸಾಥ್ ನೀಡಬೇಕಿದೆ ಎಂದರು.
ಇಂದು ಮಕ್ಕಳು ಉತ್ತಮ ಹುದ್ದೆಗಳಿಗೆ ಹೋಗಿದ್ದರೂ ತಮ್ಮ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಕುಟುಂಬ ವಾಜ್ಯಗಳು ಹೆಚ್ಚುತ್ತಿದ್ದು, ಇನ್ನಷ್ಟು ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆಗೆ ಬೇಡಿಕೆ ಬರುತ್ತಿದೆ. ಫೈಸ್ಟಾರ್ ವೃದ್ಧಾಶ್ರಮಗಳು ಹುಟ್ಟಿಕೊಳ್ಳುತ್ತಿವೆ. ನಾವು ನಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ನಮ್ಮ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇದನ್ನು ಅರಿತು ಎಲ್ಲರೂ ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಬೇಕು ಎಂದರು.
ನ್ಯಾಯವಾದಿಗಳಿಗೆ ನ್ಯಾಯಾಧೀಶರು ಮತ್ತು ಕಕ್ಷಿದಾರರ ಬಗ್ಗೆ ಗೌರವ ಇರುವುದು ಮುಖ್ಯ.ಅಹಂ ಇಟ್ಟುಕೊಂಡು ಯಾರು ಕೂಡಬೆಳೆಯಲಾರರು. ಬೆಳೆದಂತೆಲ್ಲ ಅಹಂ ಕಡಿಮೆಯಾಗಬೇಕೆಂದು ಯುವ ವಕೀಲರಿಗೆ ಸಲಹೆ ನೀಡಿದರು.
ಹೈಕೋರ್ಟ್ ಪೀಠದಲ್ಲಿ ಶ್ಲಾಘನೀಯ ಕಾರ್ಯ ಮಾಡಿದ ಹೈರ್ಕೋಟ್ ನ್ಯಾಯಮೂರ್ತಿಗಳಾದ ಆರ್.ಬಿ.ಬೂದಿಹಾಳ, ವಿಶ್ರಾಂತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ, ನ್ಯಾ.ಬಿ.ಶ್ರೀನಿವಾಸಗೌಡ, ಮತ್ತು ನ್ಯಾ.ರತ್ನಕಲಾ ದಂಪತಿಯನ್ನು ಸನ್ಮಾನಿಸಲಾಯಿತು.
ಬಿ.ಡಿ.ಹಿರೇಮಠ ಅನುಪಸ್ಥಿತಿ: ಧಾರವಾಡ ಹೈಕೋರ್ಟ್ ಪೀಠ ಎಂದರೆ ಮೊದಲು ಕಣ್ಮುಂದೆ ಬರುವುದು ಹಿರಿಯ ವಕೀಲ, ಹೋರಾಟಗಾರರಾದ ಬಿ.ಡಿ.ಹಿರೇಮಠ. ಆದರೆ, ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಿ.ಡಿ.ಹಿರೇಮಠ ಕಾಣಿಸಿಕೊಳ್ಳಲಿಲ್ಲ. ಈ ಸಂದರ್ಭದಲ್ಲಿ ಹೈಕೋರ್ಟ್‌ಗಾಗಿ ಹೋರಾಟಮಾಡಿದ ಯಾರನ್ನೂ ಸನ್ಮಾನಿಸದೇ ಇರುವ ಬಗ್ಗೆ ಅನೇಕರು ತಮ್ಮ ತಮ್ಮಲ್ಲಿ ಮಾತನಾಡಿ ಕೊಳ್ಳುವ ದೃಶ್ಯ ಕಂಡು ಬಂತು.
ಧಾರವಾಡ ಹೈಕೋರ್ಟ್ ಪೀಠದ ಕಾರ್ಯವೈಖರಿ ಶ್ಲಾಘಿಸುವಂತಿದೆ. ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿ ಸಾಕಷ್ಟು ಕೆಲಸವಾಗಿದೆ. ಶಿಸ್ತು ಮತ್ತು ಪ್ರಕರಣಗಳ ಇತ್ಯರ್ಥದ ದೃಷ್ಟಿಯಿಂದ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿದೆ.
– ನ್ಯಾ.ದಿನೇಶ ಮಹೇಶ್ವರಿ,
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
10 ವರ್ಷಗಳ ಹಿಂದೆ ಹೈಕೋರ್ಟ್ ಪೀಠ
ಸ್ಥಾಪನೆಯಾಗುವಾಗಲೂ ನಾನು ರಾಜ್ಯದ ಅಡ್ವೋಕೇಟ್ ಜನರಲ್ ಆಗಿದ್ದೆ. ಅದೇ ರೀತಿ ಇಂದು ಕೂಡ ಅದೇ ಹುದ್ದೆಯಲ್ಲಿದ್ದೇನೆ. ಇಂದು ಸಾಕಷ್ಟು ಬೆಳವಣಿಗೆಯಾಗಿದೆ. ಈ ಪೀಠ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತದೆ ಎನ್ನುವ ಭರವಸೆ ಇದೆ.
– ಉದಯ ಹೊಳ್ಳ,
ರಾಜ್ಯ ಸರ್ಕಾರದ ಅಡ್ವೋಕೆಟ್ ಜನರಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.