ಭಾರತಕ್ಕೆ ಸೋಲು; ಇಂದು ಸರಣಿ ಇತ್ಯರ್ಥ
Team Udayavani, Jul 8, 2018, 10:57 AM IST
ಕಾರ್ಡಿಫ್: ಇಲ್ಲಿನ “ಸೋಫಿಯಾ ಗಾರ್ಡನ್’ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್ ಸೋಲುಣಿಸಿದ ಆತಿಥೇಯ ಇಂಗ್ಲೆಂಡ್ ಸರಣಿಯನ್ನು 1-1 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. 3ನೇ ಹಾಗೂ ಅಂತಿಮ ಪಂದ್ಯ ರವಿವಾರ ಬ್ರಿಸ್ಟಲ್ನಲ್ಲಿ ನಡೆ ಯಲಿದ್ದು, ಸರಣಿ ವಿಜೇತರನ್ನು ನಿರ್ಧರಿಸಲಿದೆ. ಮ್ಯಾಂಚೆಸ್ಟರ್ನಲ್ಲಿ ಅಮೋಘ ಪ್ರದರ್ಶನ ನೀಡಿ ಅಧಿಕಾರಯುತವಾಗಿ ಗೆದ್ದ ಟೀಮ್ ಇಂಡಿಯಾ, ಶುಕ್ರವಾರ ರಾತ್ರಿ ಕಾರ್ಡಿಫ್ನಲ್ಲಿ ಇದೇ ಜೋಶ್ ತೋರುವಲ್ಲಿ ವಿಫಲವಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗಿಗೆ ಇಳಿದ ಭಾರತ 5 ವಿಕೆಟಿಗೆ 148 ರನ್ ಗಳಿಸಿದರೆ, ಇಂಗ್ಲೆಂಡ್ 19.4 ಓವರ್ಗಳಲ್ಲಿ 5 ವಿಕೆಟಿಗೆ 149 ರನ್ ಪೇರಿಸಿ ಸಮಬಲ ಸಾಧನೆಗೈದಿತು.
ಅಂತಿಮ ಓವರ್, 12 ರನ್
ಅಂತಿಮ ಓವರಿನಲ್ಲಿ ಭುವನೇಶ್ವರ್ ಕುಮಾರ್ ಹಿಂದಿನಂತೆ ಬಿಗಿ ದಾಳಿ ಸಂಘಟಿಸಿದ್ದೇ ಆದರೆ ಭಾರತಕ್ಕೆ ಗೆಲುವು ಅಸಾಧ್ಯವೇನೂ ಆಗಿರಲಿಲ್ಲ. ಮೊದಲ 3 ಓವರ್ಗಳಲ್ಲಿ ಕೇವಲ 7 ರನ್ ನೀಡಿದ್ದ ಭುವಿ, ಪಂದ್ಯದ 20ನೇ ಓವರಿ ನಲ್ಲಿ ದುಬಾರಿಯಾದರು. ಈ ಓವರಿನಲ್ಲಿ ಇಂಗ್ಲೆಂಡ್ ಜಯಕ್ಕೆ 12 ರನ್ ಅಗತ್ಯವಿತ್ತು. ಅಲೆಕ್ಸ್ ಹೇಲ್ಸ್ ಮೊದಲೆರಡು ಎಸೆತಗಳಲ್ಲಿ 10 ರನ್ ದೋಚಿದರು (6, 4). ಮುಂದಿನೆರಡು ಎಸೆತಗಳಲ್ಲಿ ಒಂದೊಂದು ರನ್ ಬಂತು. ಮಾರ್ಗನ್ ಪಡೆ ವಿಜಯೋತ್ಸವ ಆಚರಿಸಿತು. 4ನೇ ಕ್ರಮಾಂಕದಲ್ಲಿ ಆಡಲಿಳಿದ ಹೇಲ್ಸ್ ಅಜೇಯ 58 ರನ್ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು (41 ಎಸೆತ, 4 ಬೌಂಡರಿ, 3 ಸಿಕ್ಸರ್).
ಕಳೆದ ಪಂದ್ಯದ ಬೌಲಿಂಗ್ ಹೀರೋ ಕುಲದೀಪ್ ಯಾದವ್ ಇಲ್ಲಿ ವಿಕೆಟ್ ಉರುಳಿ ಸಲು ವಿಫಲರಾದರು.
ಸಂಕ್ಷಿಪ್ತ ಸ್ಕೋರ್: ಭಾರತ-5 ವಿಕೆಟಿಗೆ 148 (ಕೊಹ್ಲಿ 47, ಧೋನಿ ಔಟಾಗದೆ 32, ರೈನಾ 27, ಪ್ಲಂಕೆಟ್ 17ಕ್ಕೆ 1, ವಿಲ್ಲಿ 18ಕ್ಕೆ 1). ಇಂಗ್ಲೆಂಡ್-19.4 ಓವರ್ಗಳಲ್ಲಿ 5 ವಿಕೆಟಿಗೆ 149 (ಹೇಲ್ಸ್ ಔಟಾಗದೆ 58, ಬೇರ್ಸ್ಟೊ 28, ಮಾರ್ಗನ್ 17, ಉಮೇಶ್ ಯಾದವ್ 36ಕ್ಕೆ 2). ಪಂದ್ಯಶ್ರೇಷ್ಠ: ಅಲೆಕ್ಸ್ ಹೇಲ್ಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.