ಬೊರಿವಲಿ-ದಹಿಸರ್ ಬಿಲ್ಲವರ ಅಸೋಸಿಯೇಶನ್: ಶೈಕ್ಷಣಿಕ ನೆರವು ವಿತರಣೆ
Team Udayavani, Jul 8, 2018, 5:08 PM IST
ಮುಂಬಯಿ: ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರು ಮಕ್ಕಳೊಂದಿಗೆ ವೈಯಕ್ತಿಕವಾಗಿ ಸ್ಪಂದಿಸುವ ಮೂಲಕ ಮಕ್ಕಳ ಶಿಕ್ಷಣದ ಆಂತರಿಕ ಸಂವೇದನಶೀಲತೆಯನ್ನು ಅರ್ಥೈಸಿಕೊಳ್ಳಬೇಕು. ಮಕ್ಕಳು ಕಲಿಯುವ ಮಾಧ್ಯಮ ಯಾವುದೇ ಇರಲಿ, ಮಕ್ಕಳ ಶಿಕ್ಷಣದಲ್ಲಿ ಪಾಲಕರು ಧೈರ್ಯ ತುಂಬುವ ಕೆಲಸ ಮಾಡಬೇಕು. ಶಿಕ್ಷಣದ ಸಂಘರ್ಷದ ಹಾದಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಜಯಶಾಲಿ ಯಾಗಬೇಕು. ಮಕ್ಕಳು ಬದುಕಿನಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡು ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ಬಿಲ್ಲವರ ಅಸೋಸಿಯೇಶನ್ ವಿದ್ಯಾ ಉಪಸಮಿತಿಯ ಗೌ. ಕಾರ್ಯದರ್ಶಿ ವಿಶ್ವನಾಥ ತೋನ್ಸೆ ನುಡಿದರು.
ಜು. 5ರಂದು ಬಿಲ್ಲವರ ಅಸೋಸಿಯೇಶನ್ ಬೊರಿವಲಿ-ದಹಿಸರ್ ಸ್ಥಳೀಯ ಸಮಿತಿಯ ವತಿಯಿಂದ ಬೊರಿವಲಿಯ ಗೋರೈಯಲ್ಲಿರುವ ಗುರುಸನ್ನಿಧಿಯಲ್ಲಿ ಜರಗಿದ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ವಿದ್ಯಾರ್ಥಿ ಗಳಿಗೆ ಶುಭಹಾರೈಸಿದರು.
ಒಬಿಸಿ ಉಪಸಮಿತಿಯ ಕಾರ್ಯಾಧ್ಯಕ್ಷ ಎಂ. ಆನಂದ ಪೂಜಾರಿ ಇವರು ಮಾತನಾಡಿ, ವಿದ್ಯಾ ವಿಕಸದಕ್ಕಾಗಿ ಬಿಲ್ಲವರ ಅಸೋಸಿಯೇಶನ್ ದಾನಿಗಳಿಂದ ಹಣವನ್ನು ಸಂಗ್ರಹಿಸಿ, ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುವ ಮೂಲಕ ಶ್ರೀ ನಾರಾಯಣ ಗುರುಗಳ ತತ್ವಕ್ಕೆ ಬದ್ಧವಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸಾಧನೆಯ ಪ್ರಸಾದ ಎಂದು ಸ್ವೀಕರಿಸಬೇಕು. ಗುರುತ್ವತದ ಚಿಂತನೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ದಾನಿಗಳ ಸಹಾಯ ಮಹತ್ವದ್ದಾಗಿದೆ. ಅಸೋಸಿಯೇಶನ್‌ನ ಅಧ್ಯಕ್ಷ ಜಯ ಸಿ. ಸುವರ್ಣರ
ಮಾರ್ಗದರ್ಶನದಲ್ಲಿ ವಿದ್ಯೆಯಿಂದ ವಂಚಿತ ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಿದೆ. ಸ್ಥಳೀಯ ಕಚೇರಿಗಳ ಈ ಒಂದು ಕಾರ್ಯ ಸ್ತುತ್ಯರ್ಹ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಪೂಜಾರಿ ಇವರು ಮಾತನಾಡಿ, ಧನ ಸಹಾಯ ಪಡೆದ ವಿದ್ಯಾರ್ಥಿಗಳು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ, ಮುಂದೆ ಸಮಾಜದ ಪ್ರತಿಷ್ಠಿತ ನಾಗರಿಕರಾಗಿ ಅಸೋಸಿಯೇಶನ್ ಮತ್ತು ಸಮಾಜ ಬಾಂಧವರಿಗೆ ಸಹಾಯಕರಾಗಿದ್ದು, ಸಮುದಾಯಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾರತ್ ಬ್ಯಾಂಕ್‌ನ ನಿರ್ದೇಶಕ, ಉದ್ಯಮಿ ದಾಮೋದರ ಸಿ. ಕುಂದರ್, ಕೇಶವ ಕೋಟ್ಯಾನ್, ಅಕ್ಷಯದ ಸಹಾಯಕ ಸಂಪಾದಕ ಹರೀಶ್ ಕೆ. ಹೆಜ್ಮಾಡಿ, ಕೇಂದ್ರ ಕಚೇರಿಯ ಜತೆ ಕಾರ್ಯದರ್ಶಿ ಧನಂಜಯ ಕೋಟ್ಯಾನ್ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಶುಭಹಾರೈಸಿದರು.
ಗೌರವ ಕಾರ್ಯದರ್ಶಿ ಮೋಹನ್ ಬಿ. ಅಮೀನ್ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಶ್ರೀಧರ ಬಂಗೇರ ಸಹಾಯ ಧನ ಪಡೆದ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಉಪಕಾರ್ಯಾಧ್ಯಕ್ಷ ಕೃಷ್ಣರಾಜ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಬೆಳಗ್ಗೆ 8 ರಿಂದ ಕಚೇರಿಯಲ್ಲಿ ಗುರುಮೂರ್ತಿಯ ವಾರ್ಷಿಕ ಪ್ರತಿಷ್ಠಾಪನೆಯ ಅಂಗವಾಗಿ ವಿವಿಧ ರೀತಿಯ ಪೂಜೆ, ಅಭಿಷೇಕ ನಡೆಯಿತು. ಧನಂಜಯ ಶಾಂತಿ ಅವರು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಕೇಂದ್ರ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿ ಅಶೋಕ್ ಸಾಲ್ಯಾನ್, ಜತೆ ಕೋಶಾಧಿಕಾರಿ ಸುರೇಶ್ ಸನಿಲ್, ಕಾರ್ಯಕಾರಿ ಸಮಿತಿಯ ದಯಾನಂದ ಪೂಜಾರಿ, ಆರ್. ಎಸ್. ಕೋಟ್ಯಾನ್, ವತ್ಸಲಾ ಪೂಜಾರಿ, ಚಂದ್ರಹಾಸ್ ಸುವರ್ಣ, ಪಿ. ಎ. ಪೂಜಾರಿ, ಭಾರತಿ ಅಮೀನ್, ರಾಘು ಪೂಜಾರಿ, ರತ್ನಾ ಪೂಜಾರಿ, ಚಂದ್ರಶೇಖರ ಬಿ. ಎನ್., ವಿಶೇಷ ಆಮಂತ್ರಿತ ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಳಾ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.