ಮೇನಾಲ: ಕುಸಿದ ಕಂದಾಯ ಇಲಾಖೆ ಕಟ್ಟಡಕ್ಕೆಬೇಕು ರಕ್ಷಣೆ
Team Udayavani, Jul 9, 2018, 10:42 AM IST
ಈಶ್ವರಮಂಗಲ: ಸಾರ್ವಜನಿಕರು ಹಲವು ಬಗೆಯ ತೆರಿಗೆ ಪಾವತಿಸುತ್ತಾರೆ. ತೆರಿಗೆಯ ಹಣ ಸರಕಾರದ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತದೆ. ಸರಕಾರ ನಿರ್ಮಿಸಿದ ಕಟ್ಟಡ ಸಾರ್ವಜನಿಕರ ಸೊತ್ತು. ಅದಕ್ಕೆ ಹಾನಿ ಮಾಡಿದರೆ ಆಯಾ ಇಲಾಖೆಯೇ ಕ್ರಮ ಕೈಗೊಳ್ಳುತ್ತದೆ. ಆದರೆ, ಪುತ್ತೂರು ತಾಲೂಕಿನ ನೆಟ್ಟಣಿಗೆಮುಟ್ನೂರು ಗ್ರಾಮದ ಮೇನಾಲ ಎಂಬಲ್ಲಿ ಕಂದಾಯ ಇಲಾಖೆಯ ಕಟ್ಟಡವು ಸಮರ್ಪಕವಾದ ನಿರ್ವಹಣೆ ಇಲ್ಲದೆ ಕುಸಿದು ಬಿದ್ದರೂ ಕೇಳುವವರಿಲ್ಲ!
ಮೇನಾಲ ಎಂಬಲ್ಲಿ ರಸ್ತೆಯ ಬದಿಯಲ್ಲಿ ಹಲವು ವರ್ಷಗಳ ಹಿಂದೆ ಅಕ್ಕಿಯ ಕಳ್ಳಸಾಗಣೆ ತಡೆಯಲು ಕಂದಾಯ ಇಲಾಖೆಯಿಂದ ಚೆಕ್ ಪೋಸ್ಟ್ ನಿರ್ಮಿಸಲಾಗಿತ್ತು. ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಅಧಿಕಾರಿಗಳು ಇರುತ್ತಿದ್ದರು. ವಾಸ್ತವ್ಯ ಹೂಡಲು ಒಂದು ಕೊಠಡಿಯೂ ಇತ್ತು. ಆಮೇಲೆ ಈ ವ್ಯವಸ್ಥೆ ಮುಂದುವರಿಯದ ಕಾರಣ, ಈ ಚೆಕ್‌ಪೋಸ್ಟ್ ಬಳಿಕ ಪ್ರಯಾಣಿಕರ ತಂಗುದಾಣವಾಗಿ ಪರಿವರ್ತನೆಯಾಯಿತು. ಹಳೆಯ ಕಟ್ಟಡವಾಗಿರುವುದರಿಂದ ಛಾವಣಿ ಕುಸಿದು ಬಿದ್ದಿದೆ. ಹಂಚುಗಳು ಪುಡಿಯಾಗಿ ನೆಲ ಕಂಡಿವೆ. ಕೊಠಡಿಯ ಬಾಗಿಲು ಮುರಿದು ಹೋಗಿದೆ. ಕೊಠಡಿಯೊಳಗೆ ಮಳೆ ನೀರು ತುಂಬಿದೆ. ಕಟ್ಟಡದ ಒಂದು ಭಾಗದಲ್ಲಿ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆಯಿಲ್ಲದೆ ನೀರು ಅಲ್ಲಿಯೇ ಶೇಖರಣೆಯಾಗುತ್ತಿದೆ. ಕಸ, ಕಡ್ಡಿಗಳು ತುಂಬಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹುಟ್ಟಿಸಿದೆ. ಕಟ್ಟಡ ಹಾಗೂ ಛಾವಣಿ ಬೀಳುವ ಹಂತದಲ್ಲಿದೆ. ಕಟ್ಟಡದ ಸುತ್ತ ಪೊದೆಗಳೂ ಬೆಳೆದುನಿಂತಿವೆ.
ರಸ್ತೆ ಬದಿ ಕಾಯಬೇಕು
ಕಟ್ಟಡದಲ್ಲಿ ಅಕ್ಕಿ ಸಾಗಾಟ ತಪಾಸಣೆ ಬಂದ್ ಆದ ಮೇಲೆ ಬಸ್ಸಿಗಾಗಿ ಕಾಯುವ ಅನೇಕರು ಕುಳಿತುಕೊಳ್ಳಲು ಆರಂಭಿಸಿದರು. ಕ್ರಮೇಣ ಇದು ಪ್ರಯಾಣಿಕರ ತಂಗುದಾಣವಾಗಿ ಪರಿವರ್ತನೆಯಾಯಿತು. ಸೂಕ್ತ ನಿರ್ವಹಣೆ ಇಲ್ಲದೆ ಕಟ್ಟಡದ ಛಾವಣಿ ಕುಸಿದು ಬಿದ್ದಿರುವುದರಿಂದ ಪ್ರಯಾಣಿಕರು ಈಗ ರಸ್ತೆ ಬದಿಯಲ್ಲೇ ಬಸ್ಸಿಗಾಗಿ ಕಾಯುತ್ತ ನಿಲ್ಲಬೇಕು ಅಥವಾ ಅಂಗಡಿ ಮಳಿಗೆ ಸಮೀಪ ನಿಲ್ಲುವ ಪರಿಸ್ಥಿತಿ ಇದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಕಟ್ಟಡವನ್ನು ದುರಸ್ತಿಗೊಳಿಸಬೇಕು ಅಥವಾ ಹೊಸ ಕಟ್ಟಡವನ್ನು ನಿರ್ಮಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಮೇನಾಲದ ನಿವಾಸಿ ವೀರಪ್ಪ ನಾಯ್ಕ ಆಗ್ರಹಿಸಿದ್ದಾರೆ.
ಕ್ರಮ ಕೈಗೊಳ್ಳುತ್ತೇವೆ
ನನ್ನ ಗಮನಕ್ಕೆ ಬಂದಿದೆ. ಪರಿಶೀಲನೆ ನಡೆಸಲಾಗಿದೆ. ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುತ್ತೇನೆ. ಮುಂದಿನ ಕ್ರಮ ಕೈಗೊಳ್ಳುತ್ತಾರೆ.
– ರಾಧಾಕೃಷ್ಣ,
ನೆಟ್ಟಣಿಗೆಮುಟ್ನೂರು ಗ್ರಾಮ ಲೆಕ್ಕಾಧಿಕಾರಿ
ಮಾಧವ ನಾಯಕ್.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.