ಈ ವಾರ ತೆರೆಗೆ ಐದು
Team Udayavani, Jul 9, 2018, 11:22 AM IST
ಕಳೆದ ವಾರ ಬರೋಬ್ಬರಿ ಎಂಟು ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ಎಂಟರಲ್ಲಿ ಯಾವ ಸಿನಿಮಾಕ್ಕೆ ಪ್ರೇಕ್ಷಕ ಜೈ ಎಂದಿದ್ದಾನೆ ಎಂದರೆ ಉತ್ತರ ಹೇಳ್ಳೋದು ಕಷ್ಟ. ಅದೇನೇ ಆದರೂ ಈ ವಾರ ಮತ್ತೆ ಐದು ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. “ಡಬಲ್ ಇಂಜಿನ್’, “ಅಥರ್ವ’, “ಆ ಕರಾಳ ರಾತ್ರಿ’, “ಎಂಎಂಸಿಎಚ್’ ಹಾಗೂ “ಲವ್ ಯು 2′ ಚಿತ್ರಗಳು ಈ ವಾರ ಬಿಡುಗಡೆಯಾಗಲಿವೆ.
ಬಿಡುಗಡೆಗೆ ಇನ್ನೂ ಕೆಲವು ದಿನಗಳು ಬಾಕಿ ಇರುವುದರಿಂದ ಇದಕ್ಕೆ ಮತ್ತೂಂದಿಷ್ಟು ಚಿತ್ರಗಳು ಸೇರಿಕೊಂಡರೂ ಅಚ್ಚರಿಯಿಲ್ಲ. ವಿಶೇಷವೆಂದರೆ ಈ ಎಲ್ಲಾ ಚಿತ್ರಗಳು ಕೆ.ಜಿ.ರಸ್ತೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ. ಕಳೆದ ವಾರ ಎಂಟು ಸಿನಿಮಾಗಳು ಬಿಡುಗಡೆಯಾಗಿದ್ದರೂ ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರ ಸಿಗಲು ಸಾಧ್ಯವೇ ಎಂದು ನೀವು ಕೇಳಬಹುದು.
ಅದು ಸಾಧ್ಯ. ಏಕೆಂದರೆ ಕಳೆದ ವಾರ ಬಿಡುಗಡೆಯಾದ ಕೆಲವು ಚಿತ್ರಗಳ ಜಾಗಕ್ಕೆ ಈ ವಾರ ಹೊಸ ಚಿತ್ರಗಳು ಬರುತ್ತಿವೆ. ಅಂದರೆ ಕಳೆದ ವಾರ ತೆರೆಕಂಡ ಕೆಲವು ಚಿತ್ರಗಳು ಒಂದೇ ವಾರಕ್ಕೆ ಪ್ರಮುಖ ಚಿತ್ರಮಂದಿರಗಳನ್ನು ಬಿಟ್ಟುಕೊಡುವ ಪರಿಸ್ಥಿತಿ ಎದುರಾಗಿದೆ.
ಕೆ.ಜಿ.ರಸ್ತೆಯ ತ್ರಿವೇಣಿ, ನರ್ತಕಿ, ಮೂವೀಲ್ಯಾಂಡ್, ಅನುಪಮ ಚಿತ್ರಮಂದಿರಗಳಲ್ಲಿ ಕಳೆದ ವಾರ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ, ಈ ವಾರ ಆ ಜಾಗಕ್ಕೆ ಹೊಸ ಚಿತ್ರಗಳು ಬರುತ್ತಿದ್ದು, ಈಗಾಗಲೇ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈ ವಾರ ತೆರೆಕಾಣುತ್ತಿರುವ “ಡಬಲ್ ಇಂಜಿನ್’ ಒಂದು ಹಾಸ್ಯಪ್ರಧಾನ ಚಿತ್ರವಾದರೆ, “ಅಥರ್ವ’ ಹಾಗೂ “ಆ ಕರಾಳ ರಾತ್ರಿ’, “ಎಂಎಂಸಿಎಚ್’ ಚಿತ್ರಗಳು ಥ್ರಿಲ್ಲರ್ ಜಾನರ್‌ಗೆ ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.