ಅತ್ಯಾಚಾರ: ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಮದುವೆ ರದ್ದು
Team Udayavani, Jul 9, 2018, 11:59 AM IST
ಮುಂಬಯಿ : ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಿಂದಿ ಚಿತ್ರ ನಟ ಮಿಥುನ್ ಚಕ್ರವರ್ತಿ ಅವರ ಪುತ್ರ ಮಹಾಕ್ಷಯ್ ಮದುವೆ ರದ್ದಾಗಿದೆ.
ಜುಲೈ 7ರಂದು ಶನಿವಾರ ಮಹಾಕ್ಷಯ್ ಮದುವೆ ತಮಿಳು ನಾಡಿನ ಉದಕ ಮಂಡಲದಲ್ಲಿ ನಡೆಯುವುದಿತ್ತು. ಆದರೆ ಅತ್ಯಾಚಾರದ ದೂರನ್ನು ಆಧರಿಸಿ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಅಂದು ಮದುವೆ ನಡೆಯಲಿದ್ದ ತಾಣಕ್ಕೆ ಆಗಮಿಸಿದ ಕಾರಣ ವಧುವಿನ ಕಡೆಯವರು ಅಲ್ಲಿಂದ ಒಡನೆಯೇ ನಿರ್ಗಮಿಸಿದರು ಎಂದು ವರದಿಯಾಗಿದೆ.
‘ಮಹಾಕ್ಷಯ್ ನನಗೆ ಮದುವೆಯಾಗುವ ಭರವಸೆ ನೀಡಿ, ಕಳೆದ ನಾಲ್ಕು ವರ್ಷಗಳಿಂದ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿ ನನ್ನನ್ನು ಗರ್ಭವತಿಯಾಗಿ ಮಾಡಿದ್ದಲ್ಲದೆ ನನಗೆ ಅದೇನೋ ಔಷಧವನ್ನು ಕೊಟ್ಟು ಗರ್ಭಪಾತವನ್ನೂ ಮಾಡಿಸಿದ್ದ ‘ ಎಂದು ಭೋಜಪುರಿ ನಟಿ ಪೊಲೀಸರಿಗೆ ದೂರು ನೀಡಿದ್ದಳು.
ಮಹಾಕ್ಷಯ್ ಮತ್ತು ಆತನ ತಾಯಿ, ನಟಿ ಯೋಗಿತಾ ಬಾಲಿ ಅವರು ನನಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ; ಜೀವ ಬೆದರಿಕೆಯಿಂದ ಭೀತಳಾಗಿ ನಾನು ಮುಂಬಯಿಯಿಂದ ದಿಲ್ಲಿಗೆ ಬಂದು ನೆಲೆಸಿದ್ದೇನೆ; ನನಗೆ ನ್ಯಾಯ ಸಿಗಬೇಕು ಎಂದು ಸಂತ್ರಸ್ತೆ ಭೋಜಪುರಿ ನಟಿ ಕೋರ್ಟಿನಲ್ಲಿ ಹೇಳಿದ್ದಳು.
ತಾವು ಬಂಧನಕ್ಕೆ ಗುರಿಯಾಗುವ ಸಂಭವ ಇರುವುದನ್ನು ಲೆಕ್ಕಿಸಿ ಮಹಾಕ್ಷಯ್ ಮತ್ತು ಯೋಗಿತಾ ಬಾಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್ ಬೆಳ್ಳಿ’ ತೆರೆಗೆ
Space Wonder: ಇಂದು ವಿಶೇಷ ಸೂಪರ್ಮೂನ್
Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್ಐಎಗೆ ವಹಿಸಲಿ: ಶಾಸಕ ಸುನಿಲ್ ಕುಮಾರ್
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್ ಸಿಸ್ಟಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.