ಮೈತ್ರಿ ಸರ್ಕಾರದಿಂದ ಮಾದಿಗ ಸಮಾಜಕ್ಕೆ ಅನ್ಯಾಯ
Team Udayavani, Jul 9, 2018, 2:59 PM IST
ಶಹಾಪುರ: ಹಿಂದುಳಿದ ಹಾಗೂ ಮೇಲಜಾತಿಯ ಬಲಾಡ್ಯ ಸಮುದಾಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಯಡಿ ಸೇರ್ಪಡೆಗೊಳಿಸುವ ಮೂಲಕ ಮೂಲ ಅಸ್ಪೃಶ್ಯರ ಅಭಿವೃದ್ಧಿ ಕುಂಟಿತಗೊಳ್ಳುತ್ತಿದೆ ಎಂದು ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಎಂ. ಶಂಕ್ರಪ್ಪ ಆರೋಪಿಸಿದರು.
ರವಿವಾರ ನಗರಕ್ಕೆ ಆಗಮಿಸಿದ ಅವರು, ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಿಗಬೇಕಾದ ಪಾಲು ಇಂದು ಸಿಗುತ್ತಿಲ್ಲ. ದೇಶದಲ್ಲಿ ಸಾಮಾಜಿಕ ನ್ಯಾಯ ಮರೆತ ಜನ ಪ್ರತಿನಿಧಿಗಳು ಮಾದಿಗ ಸಮುದಾಯವನ್ನು ಕಡೆಗಣಿಸಿವೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ಜಾತ್ಯಾತೀತ ತತ್ವ ಸಿದ್ಧಾಂತ ಹೇಳುವ ಜೆಡಿಎಸ್ ಮತ್ತು ಕಾಂಗ್ರೆಸ್ ಇಂದು ಮೈತ್ರಿ ಸರ್ಕಾರ
ರಚಿಸಿದ್ದು, ಮಾದಿಗ ಸಮುದಾಯವನ್ನು ಕಡೆಗಣಿಸಿವೆ. ಇನ್ನೂ ಮೂರು ತಿಂಗಳಲ್ಲಿ ನ್ಯಾ| ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೊಳಿಸಲು ಶಿಫಾರಸು ಮಾಡದಿದ್ದಲ್ಲಿ ರಾಜ್ಯಾದ್ಯಂತ ಕರ್ನಾಟಕ ಮಾದಿಗ ದಂಡೋರ ಸಮಿತಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಮಾದಿಗ ಸಮುದಾಯದ ಆದಿಜಾಂಬವ ಅಭಿವೃದ್ಧಿ ನಿಗಮ ರಚನೆ ಆದರೂ ಯಾವುದೇ ಹಣ ಬಿಡುಗಡೆಗೊಳಿಸದ ಇನ್ನೂ ಕಾರ್ಯಪ್ರವೃತ್ತಿಗೆ ಬಂದಿಲ್ಲ. ಪ್ರಸ್ತುತ ಸರ್ಕಾರ ಬ್ರಾಹ್ಮಣರ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಣ ಮಂಜೂರು ಮಾಡುತ್ತದೆ. ಆದರೆ ಮಾದಿಗರ ಅಭಿವೃದ್ಧಿಗೆ ಹಣ ನೀಡದೆ ನಿಗಮ
ಅನುಷ್ಠಾನವಾಗದೆ ಹಾಗೇ ಉಳಿದಿದೆ. ಇದು ವಿಪರ್ಯಾಸವಲ್ಲದೆ ಇನ್ನೇನು ಎಂದು ಬೇಸರ
ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಂಡೋರ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ, ಜಂಟಿ ಕಾರ್ಯದರ್ಶಿ ವೆಂಕಟೇಶ ಆಲೂರ, ಬೆಂಗಳೂರ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಜಶೇಖರ, ಇಲ್ಲಿನ ತಾಲೂಕು ಅಧ್ಯಕ್ಷ ಬಸವರಾಜ ನಾಯ್ಕಲ್, ಮುಖಂಡರಾದ ಸೋಪಣ್ಣ ದರಿಯಾಪುರ, ರುದ್ರಪ್ಪ ಹುಲಿಮನಿ, ವಕೀಲ ವಾಸುದೇವ ಕಟ್ಟಿಮನಿ, ರವಿಕುಮಾರ ಎದುರಮನಿ, ಸಿದ್ದಪ್ಪ ದೇವರಗೋನಾಲ್, ಭೀಮರಾಯ ರಸ್ತಾಪುರ, ಈರಗಪ್ಪ ಹೋತಪೇಟ, ಜೆಟ್ಟೆಪ್ಪ ಕೆಂಭಾವಿ, ಗುರು ದೊಡಮನಿ, ಹಯ್ನಾಳಪ್ಪ ದೋರನಳ್ಳಿ, ನಿಂಗಣ್ಣ ಕದರಾಪುರ, ಶರಣಪ್ಪ ಕ್ಯಾತನಾಳ, ಮಲ್ಲಿನಾಥ ಆಂದೋಲಾ, ಬಸವರಾಜ ಗಣೇಕಲ್,
ಭೀಮರಾಯ ಕಾಂಗ್ರೆಸ್, ವಿಜಯಕುಮಾರ ಎದುರಮನಿ, ಈರಪ್ಪ ಚಟ್ನಳ್ಳಿ, ಭೀಮರಾಯ ಕರಕಳ್ಳಿ ಇದ್ದರು.
ರೈತರನ್ನೇ ಅವಲಂಬಿಸಿದ ವೃತ್ತಿಪರರ ಸಾಲ ಮನ್ನಾ ಮಾಡಲಿ: ಶಂಕ್ರಪ್ಪ ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ, ಬೇಡ ಎಂದವರಾರು? ಆದರೆ ಗ್ರಾಮೀಣ ಪ್ರದೇಶದಲ್ಲಿರುವ ರೈತರ
ಮನೆಗೆಲಸ ಸೇರಿದಂತೆ ಕೃಷಿ ಚಟುವಟಿಕೆಗೆ ಆಸರೆಯಾಗಿ ನಿಲ್ಲುವ ಕೆಲವು ಸಣ್ಣ ಪುಟ್ಟ ಸಮುದಾಯಗಳಾದ ಮಡಿವಾಳರು, ಮಾದಿಗ ಸಮಾಜದ ಜನರ ಸಾಲ ಯಾರು ಮನ್ನಾ ಮಾಡಬೇಕು ಎಂದು ಮಾದಿಗ ದಂಡೋರ ಸಮಿತಿ ರಾಜ್ಯಧ್ಯಕ್ಷ ಎಂ. ಶಂಕ್ರಪ್ಪ ಪ್ರಶ್ನಿಸಿದರು.
ದಲಿತ ನಾಯಕರಿಗೆ ಪುತ್ರ ವ್ಯಾಮೋಹ ಆರಂಭವಾಗಿದ್ದು, ಸಮಾಜಕ್ಕಿಂತ ತಮ್ಮ ಮಕ್ಕಳ ಸ್ಥಾನಮಾನ ಮುಖ್ಯವಾಗಿವೆ. ಅಂಬೇಡ್ಕರ್, ಬುದ್ಧರ ಹೆಸರು ಹೇಳುವ ಖರ್ಗೆ ಅವರು ಸಮುದಾಯಕ್ಕೆ ನೀಡಿದ ಕೊಡುಗೆ ಏನು. ಪಕ್ಷ ದೊಡ್ಡದು ಎಂದು ಹೇಳುವ ದಲಿತ ನಾಯಕರು ಎಸ್ಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರಾ? ಯುವ ಶಕ್ತಿ ಗಮನಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಯುವ ಶಕ್ತಿ ಎದ್ದು ನಿಲ್ಲಲಿದೆ.
ಎಂ. ಶಂಕ್ರಪ್ಪ, ಕರ್ನಾಟಕ ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.