ಮನುಷ್ಯನ ವಿಭಿನ್ನ ಮುಖಗಳನ್ನು ತೆರೆದಿಡುವ ದಿ ಜಂಗಲ್ ಬುಕ್
Team Udayavani, Jul 9, 2018, 4:02 PM IST
ಪ್ರೀತಿ, ನಂಬಿಕೆ, ಹೊಂದಾಣಿಕೆ, ಸ್ನೇಹದ ಜತೆಗೆ ಧೈರ್ಯವೊಂದಿದ್ದರೆ ಎಲ್ಲಿ ಬೇಕಾದರೂ, ಯಾರೊಂದಿಗೆ ಬೇಕಾದರೂ ಬದುಕಬಹುದು ಎಂಬುದನ್ನು ಹೇಳಿಕೊಡುವ ಚಿತ್ರ, 2016ರಲ್ಲಿ ಬಿಡುಗಡೆಯಾದ ಅಮೆರಿಕನ್ ಫ್ಯಾಂಟಸಿ ಅಡ್ವೆಂಚರ್ ಫಿಲ್ಮ್ ‘ದಿ ಜಂಗಲ್ ಬುಕ್’. ಮಕ್ಕಳ ಚಿತ್ರವಾದರೂ ಎಲ್ಲರ ಬದುಕಿಗೆ ಬೇಕಾದ ಅಮೂಲ್ಯ ವಿಚಾರಧಾರೆಗಳು ಇಲ್ಲಿವೆ. ಕಾಡಿನಲ್ಲಿ ಶೇರ್ ಖಾನ್ (ಹುಲಿ)ನಿಂದ ಮಗ ಮೂಗ್ಲಿಯನ್ನು ರಕ್ಷಿಸಲು ಹೋದ ಮೂಗ್ಲಿಯ ತಂದೆ ಹುಲಿಗೆ ಬಲಿಯಾಗುತ್ತಾನೆ. ಅನಾಥನಾದ ಮೂಗ್ಲಿ ಕಾಡು ಸೇರುತ್ತಾನೆ.
ಆತನಿಗೆ ಅಲ್ಲಿ ಬಾಲು (ಕರಡಿ) ಮತ್ತು ಭಗೀರಾ (ಕಾಡುಬೆಕ್ಕು) ಸ್ನೇಹಿತರಾಗುತ್ತಾರೆ. ಅಲ್ಲಿ ಮೂಗ್ಲಿ ಎದುರಿಸುವ ಸವಾಲುಗಳು, ತಂದೆಯನ್ನು ಕೊಂದ ಹುಲಿಯನ್ನು ಕೊಲ್ಲಲು ಮಾಡುವ ಸಿದ್ಧತೆಗಳು, ಅದರಿಂದ ಉಂಟಾಗುವ ಸಮಸ್ಯೆಗಳಿಂದ ಪಾರಾಗಿ ಬರುವ ಸಂದರ್ಭ ಕ್ಷಣಕ್ಷಣಕ್ಕೂ ರೋಮಾಂಚನಕಾರಿಗೊಳಿಸುತ್ತದೆ. ಮಂಗ, ಹಾವು, ಆನೆಗಳು ಮತ್ತಿತರ ಕಾಡು ಪ್ರಾಣಿಗಳು ಸಹಿತ ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನಸ್ಸಿನಲ್ಲಿ ಬೇರೂರುತ್ತವೆ ಮಾತ್ರವಲ್ಲ ಬದುಕಿಗೊಂದು ಪುಟ್ಟ ಸಂದೇಶವನ್ನಾದರೂ ಕೊಟ್ಟು ಹೋಗುತ್ತವೆ.
ಹುಲಿಯನ್ನು ಕೊಲ್ಲಲು ಹೋಗುವ ಮೂಗ್ಲಿ ಕಾಡಿನಲ್ಲಿ ಬೆಂಕಿಯ ನಡುವೆ ಸಿಕ್ಕಿ ಹಾಕಿಕೊಂಡಾಗ ಹುಲಿಯ ಅಟ್ಟಹಾಸ, ಕೊನೆಗೆ ಹುಲಿಯನ್ನು ಬೆಂಕಿಗೆ ದೂಡಿ ತಪ್ಪಿಸಿ ಬರುವ ಮೂಗ್ಲಿಯ ಕೊನೆ ಕ್ಷಣದವರೆಗಿನ ಹೋರಾಟ ಖುಷಿ ಕೊಟ್ಟರೂ ಬದುಕಿನಲ್ಲಿ ಸಾವು ಎದುರು ನಿಂತಿದ್ದರೂ ಕೊನೆಯ ವರೆಗೆ ಹೋರಾಟ ಮಾಡಿದರೆ ಜಯ ನಮ್ಮದಾಗುತ್ತದೆ ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ.
ತಂದೆ- ತಾಯಿ ಇಲ್ಲದೇ ಬದುಕುವ ಮೂಗ್ಲಿಯನ್ನು ಮಗುವಿನಂತೆ ನೋಡಿಕೊಳ್ಳುವ ರಕ್ಷ (ತೋಳ) ಅಮ್ಮನ ಬೆಚ್ಚಗಿನ ನಿಸ್ವಾರ್ಥ ಪ್ರೀತಿಯನ್ನು ತೆರೆದಿಡುತ್ತದೆ. ಶೇರ್ ಖಾನ್‌ನಿಂದ ಹೇಗಾದರೂ ಕಾಪಾಡಿ ಮೂಗ್ಲಿಯನ್ನು ಮನುಷ್ಯನ ಜಗತ್ತಿಗೆ ಕೊಂಡುಹೋಗುವ ಭಗೀರ (ಕಾಡು ಬೆಕ್ಕು)ನ ಜವಾಬ್ದಾರಿ ಕರ್ತವ್ಯ ನಿಷ್ಠೆಯನ್ನು ಎತ್ತಿ ತೋರಿಸುತ್ತದೆ.
ಒಟ್ಟಿನಲ್ಲಿ ಕಾಡು, ಕಾಡಿನ ನಿಯಮಗಳನ್ನು ಪಾಲಿಸುವಲ್ಲಿ ಮೂಗ್ಲಿ ಎದುರಿಸುವ ತೊಂದರೆಗಳು, ಮನುಷ್ಯನೊಬ್ಬ ತಮ್ಮ ಪ್ರದೇಶದೊಳಗೆ ಬಂದಿದ್ದಕ್ಕಾಗಿ ಪ್ರಾಣಿಗಳಲ್ಲಿ ವ್ಯಕ್ತವಾಗುವ ಆಕ್ಷೇಪ, ಮನುಷ್ಯನ ಬುದ್ಧಿವಂತಿಕೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಕೆಂದು ಕೆಲವು ಪ್ರಾಣಿಗಳು ಹೂಡುವ ತಂತ್ರ, ತಾಯಿಯ ನಿಸ್ವಾರ್ಥ ಪ್ರೀತಿ, ವಿರೋಧಿಗಳು ಒಡ್ಡುವ ಸವಾಲುಗಳಲ್ಲಿ ಮನುಷ್ಯ ವಿಭಿನ್ನ ಮುಖಗಳೇ ಕಾಣಸಿಗುತ್ತವೆ. ಒಟ್ಟಿನಲ್ಲಿ ನಮ್ಮ ಬದುಕಿನಲ್ಲಿ ಎದುರಾಗುವ ವಿಭಿನ್ನ ಮುಖಗಳ ದರ್ಶನವನ್ನೇ ಈ ಚಿತ್ರ ಮಾಡಿಸುತ್ತದೆ.
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.