2043ರಲ್ಲಿ ಅಮ್ಮಿನಬಾವಿ ಮುಂದಿನ ಜಾತ್ರೆ

Team Udayavani, Jul 9, 2018, 4:38 PM IST

9-july-19.jpg

ಧಾರವಾಡ: ಅಮ್ಮಿನಬಾವಿಯಲ್ಲಿ 27 ವರ್ಷಗಳ ಬಳಿಕ ನಡೆದ ದ್ಯಾಮವ್ವತಾಯಿ ಹಾಗೂ ದುರ್ಗಾಮಾತೆಯ 11 ದಿನದ ಜಾತ್ರಾ ಮಹೋತ್ಸವಕ್ಕೆ ಅಂತಿಮ ದಿನವಾದ ರವಿವಾರ ರಾತ್ರಿ ಗ್ರಾಮದೇವತೆಯರ ಸಾನ್ನಿಧ್ಯದಲ್ಲಿ ತೆರೆ ಎಳೆಯಲಾಯಿತು. ಶ್ರೇಯಾಂಶ ದೇಸಾಯಿ, ಅಪ್ಪಣ್ಣ ದೇಶಪಾಂಡೆ ಹಾಗೂ ಗ್ರಾಮದ ದೈವದವರು 25 ವರ್ಷಗಳ ನಂತರ ಅಂದರೆ 2043ರಲ್ಲಿ ಮುಂದಿನ ಗ್ರಾಮದೇವತಾ ಜಾತ್ರೆ ನೆರವೇರಿಸುವುದಾಗಿ ಸಂಕಲ್ಪ ಮಾಡಿದರು. ನಂತರ ಗ್ರಾಮದೇವತೆಯರ ಸೀಮೆಗೆ ಹೋಗುವ ಶಾಸ್ತ್ರದೊಂದಿಗೆ ಜಾತ್ರಾ ಮಹೋತ್ಸವದ ಪಾರಂಪರಿಕ ವಿಧಿ ವಿಧಾನಗಳು ಸಂಪನ್ನಗೊಂಡವು.

ಪಾದಗಟ್ಟಿಯಲ್ಲಿ ಸಂಗ್ರಹವಾಗಿದ್ದ ಜೋಳದ ರಾಶಿಯನ್ನು ಅಮ್ಮಿನಬಾವಿ, ಮರೇವಾಡ, ತಿಮ್ಮಾಪುರ, ಕವಲಗೇರಿ ಗ್ರಾಮದ ಪತ್ತಾರ, ಕಂಬಾರ, ಕುಂಬಾರ, ವಾಲಿಕಾರ, ಕಟ್ಟಿಮನಿ, ದೇಶಪಾಂಡೆ, ದೇಸಾಯಿ ಸೇರಿದಂತೆ ಹಲವಾರು ಮನೆತನದವರಿಗೆ ವಿತರಿಸಲಾಯಿತು. ದೇವಿಯರ ಸೀಮೆಗೆ ಕಳುಹಿಸುವ ಕಾರ್ಯಕ್ರಮ ನೋಡಲು ಆಗಮಿಸಿದ್ದ ಸಹಸ್ರಾರು ಭಕ್ತರು ಅಂತಿಮವಾಗಿ ದೇವಿ ದರ್ಶನ ಪಡೆದರು. ದೇವಿಯನ್ನು ಸೀಮೆಗೆ ಕಳುಹಿಸುವ ಉತ್ತರ ಪೂಜೆ ಆರಂಭವಾಗುತ್ತಿದ್ದಂತೆ ಮಕ್ಕಳು, ಮದುವೆ ಆಗದವರೆಲ್ಲರನ್ನೂ ಮನೆಗಳಿಗೆ ಕಳುಹಿಸಲಾಯಿತು.

ಪೂಜೆ ಬಳಿಕ ರಾತ್ರಿ ವೇಳೆ ದೇವಿಯನ್ನು ಹೊತ್ತು ಗ್ರಾಮದಿಂದ 5 ಕಿಮೀ ದೂರದ ಸೀಮೆಯಲ್ಲಿರುವ ಬಂಡೆಮ್ಮ ಜಾಗದಲ್ಲಿ ಇರಿಸಿ ಅಲ್ಲಿ ರಾಣಗ್ಯಾನಿಂದ ಹಲವಾರು ಧಾರ್ಮಿಕ ಆಚರಣೆಗಳು ನಡೆದ ಬಳಿಕ, ದೇವಿಯ ಮೂರ್ತಿಗಳನ್ನು ಬಿಚ್ಚಿ ಹೊಸ ಬಿದಿರಿನ ಜೆಲ್ಲಿಗಳಲ್ಲಿ ಇಟ್ಟುಕೊಂಡು ಮಧ್ಯರಾತ್ರಿ ಪುನಃ ಗ್ರಾಮದೇವಿ ದೇವಾಲಯದ ಗರ್ಭಗೃಹದೊಳಗೆ ಯಾರಿಗೂ ಕಾಣದಂತೆ ತಂದು ಇಟ್ಟು ಬಾಗಿಲು ಹಾಕಿದರು.

ದೇವಿ ಬರುವಾಗ ಎದುರಿಗೆ ಯಾರೂ ಬರದಂತೆ ಗ್ರಾಮದ ಜನರಿಗೆ ಬಹಳ ಮುಂಚಿತವಾಗಿಯೇ ಸೂಚನೆಗಳನ್ನು ನೀಡಲಾಗುತ್ತದೆ. ದೇವಿಯನ್ನು ದೇವಾಲಯದಲ್ಲಿ ತಂದು ಇಟ್ಟು ದೇವಾಲಯಕ್ಕೆ ಬೀಗ ಹಾಕಲಾಗುತ್ತದೆ. ಜು. 11ರಂದು ಗರ್ಭಗೃಹದ ಬಾಗಿಲು ತೆರೆದು ಶಾಸ್ತ್ರೋಕ್ತವಾಗಿ ಉಭಯ ಗ್ರಾಮ ದೇವತೆಯರನ್ನು ನಿರ್ದಿಷ್ಟ ಪೀಠಗಳ ಮೇಲೆ ಕೂರಿಸಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಪುನರ್‌ ಪ್ರಾಣಪ್ರತಿಷ್ಠಾಪನೆ ಮಾಡುವರು. ಜು. 11ರಂದು ಮತ್ತೆ ಇಡೀ ಗ್ರಾಮದಲ್ಲಿರುವ ಪ್ರತಿಯೊಂದು ಕುಟುಂಬದವರು ಉಭಯ ದೇವಿಯರಿಗೆ ಉಡಿ ತುಂಬಿ ಭಕ್ತಿ ನಮನ ಸಲ್ಲಿಸಲಿದ್ದಾರೆ.

ಟಾಪ್ ನ್ಯೂಸ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.