ಅಪಾಯದ ಮುನ್ಸೂಚನೆ ನೀಡಿದ ಕೈಪುಂಜಾಲು ಭಟತೋಟ ಸೇತುವೆ
Team Udayavani, Jul 10, 2018, 6:05 AM IST
ಕಾಪು: ಭಾರೀ ಮಳೆ ಮತ್ತು ನೆರೆಯ ಕಾರಣದಿಂದಾಗಿ ಕೈಪುಂಜಾಲು ಭಟತೋಟ ಸೇತುವೆಯಲ್ಲಿ ಬಿರುಕು ಕಾಣಿಸಿದ್ದು, ಮಧ್ಯ ಭಾಗದ ಎರಡು ಪಿಲ್ಲರ್‌ಗಳು ನದಿಯೊಳಗೆ ಕುಸಿತಕ್ಕೊಳಗಾಗಿದ್ದು ಭಾರೀ ಅಪಾಯದ ಮುನ್ಸೂಚನೆಯನ್ನು ನೀಡಿದೆ.
ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಭಟತೋಟ ಸೇತುವೆಯ 2, 3 ಮತ್ತು 4ನೇ ಸ್ಲಾ Âಬ್ ಬಿರುಕು ಬಿಟ್ಟಿದ್ದು, ಮಧ್ಯದ ಪಿಲ್ಲರ್ ಭೂಮಿಯೊಳಗೆ ಕುಸಿದಿದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಸೇತುವೆ ಪರಿಶೀಲಿಸಿದ ತಹಶೀಲ್ದಾರ್ ಸೇತುವೆಯನ್ನು ಮೇಲೆ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
1996ರಲ್ಲಿ ನಿರ್ಮಾಣಗೊಂಡಿದ್ದ ಕೈಪುಂಜಾಲು ಭಟತೋಟ ಸೇತುವೆಯು ಪಾಂಗಾಳ ಮತ್ತು ಮಟ್ಟು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಸುಮಾರು 150ಕ್ಕೂ ಅಧಿಕ ಮನೆಗಳ ಜನತೆ ಇದನ್ನೇ ಪ್ರಧಾನ ಸಂಪರ್ಕ ಸೇತುವಾಗಿ ಬಳಸುತ್ತಿದ್ದಾರೆ. ಮಾತ್ರವಲ್ಲದೇ ಬೈಕ್, ರಿಕ್ಷಾ ಮತ್ತು ಕಾರುಗಳಲ್ಲಿ ಕರಾವಳಿ ತೀರ ಮತ್ತು ಮೀನುಗಾರಿಕೆಗೆ ತೆರಳುವ ಜನರು ಈ ಮಾರ್ಗದ ಮೂಲಕ ತೆರಳುತ್ತಿದ್ದರು.
ರವಿವಾರ ಕೈಪುಂಜಾಲು ಪರಿಸರದಲ್ಲಿನ ಮಳೆ ಹಾನಿ ಪರಿಶೀಲನೆಗೆ ಬಂದಿದ್ದ ತಹಶೀಲ್ದಾರ್ ಗುರುಸಿದ್ಧಯ್ಯ ಅವರು ಭಟತೋಟ ಸೇತುವೆಯ ಪರಿಸ್ಥಿತಿಯನ್ನು ಕಂಡು ಗುಣಮಟ್ಟ ಪರಿಶೀಲಿಸುವಂತೆ ಇಂಜಿನಿಯರ್‌ಗೆ ಆದೇಶ ನೀಡಿದ್ದರು. ರವಿವಾರ ಸಂಜೆ ಭೇಟಿ ನೀಡಿದ್ದ ಇಂಜಿನಿಯರ್ ಸೇತುವೆ ಕುರಿತಾಗಿ ಋಣಾತ್ಮಕ ವರದಿಯನ್ನು ನೀಡಿದ್ದು, ಅದರಂತೆ ತಾಲೂಕು ಆಡಳಿತವು ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಗುರುಸಿದ್ಧಯ್ಯ ಮತ್ತು ಕಾಪು ಎಸ್ಸೆ$ç ನಿತ್ಯಾನಂದ ಗೌಡ ಅವರು ಸೇತುವೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿ ಜನರಲ್ಲಿ ಎಚ್ಚರಿಕೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಸೇತುವೆ ಮಧ್ಯ ಭಾಗದ ಪಿಲ್ಲರ್ ಕುಸಿದು ಭೀತಿ ಹುಟ್ಟಿಸಿದ ಕಾರಣ, ಸೇತುವೆ ಮೇಲಿನ ಸಂಚಾರವನ್ನು ನಿಷೇಧಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮತ್ತು ಈ ಭಾಗದಲ್ಲಿ ಜನಸಂಚಾರಕ್ಕೆ ಅನುಕೂಲವಾಗುವಂತೆ ಶೀಘ್ರ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಡುವಂತೆ ಪುರಸಭೆ ಮತ್ತು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.
ನೂತನ ಸೇತುವೆಗೆ ಶಿಲಾನ್ಯಾಸ ನಡೆದಿದೆ
ಕೈಪುಂಜಾಲು ಭಟತೋಟದಲ್ಲಿ 1996ರಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯು ಶಿಥಿವಾಗಿದ್ದರಿಂದ 1.60 ಕೋ. ರೂ. ವೆಚ್ಚದ ನೂತನ ಸೇತುವೆ ರಚನೆ ಕಾಮಗಾರಿಗೆ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಎರಡೆರಡು ಚುನಾವಣೆ, ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದು ಪುರಸಭೆ ಎಂಜಿನಿಯರ್ ಹೇಳು ತ್ತಿದ್ದಾರೆ. ಸೇತುವೆ ಸಂಚಾರ ಬಂದ್ ಆಗಿರುವುದರಿಂದ ನಾವು ಇನ್ನು ದ್ವೀಪ ಪ್ರದೇಶದಲ್ಲಿ ವಾಸುಸುವರಂತಾಗುವ ಅನಿವಾರ್ಯತೆ ಎದುರಾಗಿದೆ ಎಂದು ಭಟತೋಟ ನಿವಾಸಿ ಹರೀಶ್ ಕುಮಾರ್ ತಿಳಿಸಿದ್ದಾರೆ.
ಆದಷ್ಟು ಶೀಘ್ರ ಸೇತುವೆ ನಿರ್ಮಾಣವಾಗಲಿ
ಹಿಂದೆ ಇಲ್ಲಿ ಮರದ ಸೇತುವೆಯಿತ್ತು. 22 ವರ್ಷಗಳ ಹಿಂದೆ ವಸಂತ ಸಾಲಿಯಾನ್ ಅವರು ಶಾಸಕರಾಗಿದ್ದಾಗ ಇಲ್ಲಿ ಕಾಂಕೀÅಟ್ ಪಿಲ್ಲರ್‌ಗಳ ಸಹಿತವಾದ ಸೇತುವೆ ರಚನೆಯಾಗಿತ್ತು. ಸೇತುವೆ ಮತ್ತು ರಸ್ತೆ ರಚನೆ ವೇಳೆ ನಾವು ಕೂಡಾ ಜಾಗ ನೀಡಿ ಸಹಕಾರ ನೀಡಿದ್ದೇವೆ. ಇಲ್ಲಿ ನಿರಂತರವಾಗಿ ವಾಹನಗಳು ಓಡಾಡುತ್ತಿವೆ. ನಾವೆಲ್ಲರೂ ಇದೇ ಸೇತುವೆಯನ್ನು ಬಳಕೆ ಮಾಡುತಿದ್ದೇವೆ. ಮೀನುಗಾರಿಕೆಗೆ ತೆರಳುವವರು, ಕೃಷಿ ಕೆಲಸ ನಡೆಸಲು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಈ ಸೇತುವೆ ತುಂಬಾ ಅನುಕೂಲಕರವಾಗಿದೆ. ಆದಷ್ಟು ಶೀಘ್ರ ಬದಲಿ ವ್ಯವಸ್ಥೆಯೊಂದಿಗೆ, ಸೇತುವೆ ನಿರ್ಮಾಣವಾಗಲಿ ಎಂದು ಸ್ಥಳೀಯರಾದ ದೇವಪುತ್ರ ಸೋನ್ಸ್, ಸಂಜೀವಿ, ರತ್ನಾವತಿ ಆಗ್ರಹಿಸಿದ್ದಾರೆ.
– ಕೈಪುಂಜಾಲು ,
ಭಟತೋಟ ನಿವಾಸಿಗಳು
ಜನರ ಪ್ರಾಣ ರಕ್ಷಣೆಗಾಗಿ ಸೇತುವೆ ಸಂಚಾರ ನಿಷೆೇಧ
ಭಾರೀ ಮಳೆಯ ಕಾರಣದಿಂದಾಗಿ ಕೈಪುಂಜಾಲು ಭಟತೋಟ ಸೇತುವೆ ಸಂಪುರ್ಣ ಜಲಾವೃತಗೊಂಡಿದ್ದರಿಂದಾಗಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪುರಸಭೆಯ ಇಂಜಿನಿಯರ್‌ಗಳು ಸೇತುವೆ ಯಾವುದೇ ಸಂದರ್ಭದಲ್ಲೂ ಕುಸಿತಕ್ಕೊಳಗಾಗುವ ಭೀತಿಯಿದೆ ಎಂಬ ವರದಿ ನೀಡಿದೆ. ಆ ಕಾರಣದಿಂದಾಗಿ ಸೇತುವೆ ಮೇಲಿನ ಸಂಚಾರವನ್ನು ನಿಷೇಧಿಸಲಾಗಿದೆ. ಜನರ ಸಂಚಾರಕ್ಕೆ ತೋಂದರೆಯಾದರೂ, ಜನರ ಪ್ರಾಣ ರಕ್ಷಣೆ ನಮ್ಮ ಪ್ರಮುಖ ಕರ್ತವ್ಯವಾಗಿರುವುದರಿಂದ ಸಂಚಾರ ನಿಷೇಧ ತೀರ್ಮಾನ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಗುರುಸಿದ್ಧಯ್ಯ ಹೇಳಿದ್ದಾರೆ.
– ಗುರುಸಿದ್ಧಯ್ಯ ,ಕಾಪು ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ
ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.