ಉಪ್ಪೂರು ಬಿಲ್ಲಾ ಅನುದಾನಿತ ಹಿ.ಪ್ರಾ.ಶಾಲೆಗೆ ಶಿಕ್ಷಕರ ನೇಮಕ
Team Udayavani, Jul 10, 2018, 6:00 AM IST
ಉಡುಪಿ: ಅಳಿಯುವ ಹಂತದಲ್ಲಿರುವ ಕನ್ನಡ ಶಾಲೆಯಾದ ಉಪ್ಪೂರು ಬಿಲ್ಲಾ ಅನುದಾನಿತ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕೆನ್ನುವ ಮತ್ತು ಶಾಲಾ ಉಳಿವಿಗಾಗಿ ಮಣಿಪಾಲದ ನವ್ಯಚೇತನ ಶಿಕ್ಷಣ ಸಂಶೋಧನೆ ಹಾಗೂ ಕಲ್ಯಾಣ ಟ್ರಸ್ಟ್ ಕಳೆದ ವರ್ಷದಿಂದ ಮೂವರು ಶಿಕ್ಷಕರನ್ನು ನೇಮಿಸಿ ಶಿಕ್ಷಣ ಸೇವೆ ನೀಡುವಲ್ಲಿ ವಿನೂತನ ಪ್ರಯೋಗ ನಡೆಸಿದೆ.
ಇಂಗ್ಲಿಷ್, ಸಂಗೀತ, ಚಿತ್ರಕಲೆ ಶಿಕ್ಷಣ
1ರಿಂದ 7ನೇ ತರಗತಿ ವರೆಗೆ ಶಿಕ್ಷಣ ನೀಡುತ್ತಿರುವ ಈ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಸಂಗೀತ ಮತ್ತು ಚಿತ್ರಕಲೆ ಶಿಕ್ಷಕರನ್ನು ಟ್ರಸ್ಟ್ ನೇಮಿಸಿದೆ. ವಿದ್ಯಾರ್ಥಿಗಳ ಆಂಗ್ಲ ಭಾಷಾ ಜ್ಞಾನ ವೃದ್ಧಿಗೆ ಪೂರಕವಾಗುವಂತೆ ಇಂಗ್ಲಿಷ್ ಶಿಕ್ಷಕರಿಂದ ನ್ಪೋಕನ್ ಇಂಗ್ಲಿಷ್ ತರಗತಿ ನಡೆಸಲಾಗುತ್ತಿದೆ. ಸಂಗೀತ ಶಿಕ್ಷಕರು ಶಾಸ್ತ್ರೀಯ ಸಂಗೀತದೊಂದಿಗೆ ಪ್ರಾರ್ಥನೆ, ನಾಡಗೀತೆ, ರಾಷ್ಟ್ರಗೀತೆ, ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವಂತೆ ಕಲಿಸಿಕೊಡುತ್ತಿದ್ದಾರೆ. ಚಿತ್ರಕಲೆ ಶಿಕ್ಷಕರು ವಿದ್ಯಾರ್ಥಿಗಳ ತರಗತಿಗೆ ಅನುಗುಣವಾಗಿ ರೇಖಾಚಿತ್ರ, ವಸ್ತುಚಿತ್ರ ಇತ್ಯಾದಿಗಳನ್ನು ಕಲಿಸುತ್ತಿದ್ದಾರೆ.
ಟ್ರಸ್ಟಿನ ಸಮಾಜಮುಖೀ ಕಾರ್ಯ
ಕಳೆದ ವರ್ಷ ಶಾಲೆಯಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಿದ ಟ್ರಸ್ಟ್, ಅವುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿ ಕೊಂಡಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರವನ್ನೂ ನೀಡಿದೆ.
“ಬಿಲ್ಲಾ’ ಹೆಸರಿನ ಹಿನ್ನೆಲೆ
ಹಿಂದೆ ಉಪ್ಪೂರು ಜಾತಬೆಟ್ಟು ಮಠದ ಮನೆಯಲ್ಲಿ ಶಾಲೆ ನಡೆಯುತ್ತಿದ್ದು, ವೆಂಕಟರಮಣ ಉಪಾಧ್ಯಾಯರು ಶಿಕ್ಷಕರಾಗಿದ್ದರು. ಮುಂದೆ ಜಾತಬೆಟ್ಟು ಗೌರಮ್ಮ ಮೇಲಂಟರ ಮನೆಯಲ್ಲಿ ಬಿಲ್ಲವ ಮುಖಂಡ ವೆಂಕಟ ಪೂಜಾರಿಯವರು ಶಿಕ್ಷಕರಾಗಿ ಶಾಲೆಯು ತಾತ್ಕಾಲಿಕ ಮಾನ್ಯತೆಯೊಂದಿಗೆ ಮುಂದುವರಿಯಿತು. ಅನಂತರ ಯು.ಕೆ. ಗೋವಿಂದ ಶೆಟ್ಟಿಯವರು ಶಾಲೆ ನಡೆಸಲು ಸರಕಾರದಿಂದ ಶಾಶ್ವತ ಮಾನ್ಯತೆ ಪಡೆದು ವೆಂಕಟ ಪೂಜಾರಿಯವರ ಸ್ಮರಣಾರ್ಥ ಈ ಶಾಲೆಗೆ “ಉಪ್ಪೂರು ಬಿಲ್ಲಾ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ’ ಎಂದು ಹೆಸರಿಟ್ಟು ಮುಂದುವರಿಸಿದರು. ಪ್ರಸ್ತುತ ಸಂಚಾಲಕರಾಗಿ ಹರಿಕೃಷ್ಣ ಪುನರೂರು ಕಾರ್ಯನಿರ್ವಹಿಸುತ್ತಿದ್ದಾರೆ.
ಹೊಸ ಚೈತನ್ಯ
ಟ್ರಸ್ಟ್ ಕಳೆದ ವರ್ಷಗಳಿಂದ ಶಾಲೆಯಲ್ಲಿ ಮೂವರು ಶಿಕ್ಷಕರನ್ನು ನೇಮಿಸಿದ ಹಿನ್ನೆಲೆಯಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆ ಮತ್ತೆ ಮುಂದುವರಿಯುವ ಹೊಸ ಚೈತನ್ಯ ಪಡೆದಿದೆ. ಶಾಲೆಯಲ್ಲಿ ದಾನಿಗಳ ನೆರವಿನಿಂದ ನಾಲ್ವರು ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. 2013-14ನೇ ಸಾಲಿನಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ (ಸರಕಾರಿ ನೇಮಕ) ಉಳಿದವರೆಲ್ಲರೂ ಗೌರವ ಶಿಕ್ಷಕರು. ಸರಕಾರಿ ಶಾಲೆಗಳಲ್ಲಿ 15 – 20 ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿದ್ದಾರೆ. ಆದರೆ ಖಾಸಗಿ ಅನುದಾನಿತ ಶಾಲೆಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು. ಇದು ಸರಕಾರದ ಮಲತಾಯಿ ಧೋರಣೆಯಾಗಿದೆ.
– ಜಯಪ್ರಕಾಶ್ ಕುಮಾರ್,ಮುಖ್ಯೋಪಾಧ್ಯಾಯರು, ಉಪ್ಪೂರು ಬಿಲ್ಲಾ ಅ.ಹಿ.ಪ್ರಾ.ಶಾಲೆ
ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
ಟ್ರಸ್ಟಿನಿಂದ ಮೂವರು ಶಿಕ್ಷಕರನ್ನು ನೇಮಿಸಿದ ನೆಲೆಯಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತುಸು ಏರಿಕೆ ಕಂಡಿದ್ದಲ್ಲದೆ, ಶಾಲಾಭಿವೃದ್ಧಿಗೂ ಪೂರಕವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾದಲ್ಲಿ ಆವಶ್ಯಕತೆಗೆ ಅನುಗುಣವಾಗಿ ಇನ್ನಷ್ಟು ಶಿಕ್ಷಕರನ್ನು ಟ್ರಸ್ಟ್ ವತಿಯಿಂದ ನೇಮಿಸಲಾಗುವುದು.
– ಡಾ|ಶಿವಾನಂದ ನಾಯಕ್
ಅಧ್ಯಕ್ಷರು, ನವ್ಯಚೇತನ ಶಿಕ್ಷಣ ಸಂಶೋಧನೆ/ಕಲ್ಯಾಣ ಟ್ರಸ್ಟ್ ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.