ಖರ್ಚುರಹಿತ ಮೀನು ಕೃಷಿ ಉದ್ಯಮ: ವಾರ್ಷಿಕ 1.5 ಲಕ್ಷ ರೂ. ಲಾಭ 


Team Udayavani, Jul 10, 2018, 10:39 AM IST

10-july-4.jpg

ಮಹಾನಗರ: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಹೆಚ್ಚಿದ್ದರೂ ಮೀನು ಕೃಷಿ ಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ತೀರಾ ಕಡಿಮೆ. ಗಮನಾರ್ಹ ವಿಚಾರವೆಂದರೆ ವಾರ್ಷಿಕ ಒಂದೂವರೆ ಲಕ್ಷ ರೂ.ಗಳಿಗೂ ಮಿಕ್ಕಿ ಆದಾಯ ತರಬಲ್ಲ ಮೀನು ಕೃಷಿಯನ್ನು ಅಭಿವೃದ್ಧಿಪಡಿಸಿದ ರೈತರ ಸಂಖ್ಯೆ ಕೇವಲ 15ರಿಂದ 20. ಅದೂ ಪರ್ಯಾಯ ಕೃಷಿಯಾಗಿ. ಮೀನುಗಾರಿಕಾ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಕೇವಲ 15ರಿಂದ 20 ಮಂದಿಯಷ್ಟೇ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೂ ಇತರ ಕೃಷಿಯೊಂದಿಗೆ ಪರ್ಯಾಯ ಕೃಷಿಯಾಗಿ ಇದನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಆದರೆ ಇದರಿಂದ ಬರುವ ವಾರ್ಷಿಕ ಒಟ್ಟು ಆದಾಯದ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಖರ್ಚುರಹಿತ ಕೃಷಿ
ಒಂದು ಎಕ್ರೆ ಪ್ರದೇಶದಲ್ಲಿ ಮೀನು ಕೃಷಿ ನಡೆದರೆ ವಾರ್ಷಿಕ ಕನಿಷ್ಠ ಒಂದೂವರೆ ಲಕ್ಷ ರೂ.ಗಳಿಗೂ ಮಿಕ್ಕಿ ಆದಾಯ ಗಳಿಸಲು ಸಾಧ್ಯವಿದೆ. ವಿಶೇಷವೆಂದರೆ ಮೀನು ಕೃಷಿಗೆ ಯಾವುದೇ ಖರ್ಚುಗಳಿಲ್ಲ. ಪ್ರಾಕೃತಿಕ ದತ್ತ ಕೆರೆಗಳಿದ್ದರೆ, ಅವುಗಳಲ್ಲೇ ಮೀನು ಮರಿಗಳನ್ನು ತಂದು ಹಾಕಿದರಾಯಿತು. ಒಂದು ವೇಳೆ ಕೆರೆ ಇಲ್ಲದಿದ್ದರೆ, ಕೆರೆ ನಿರ್ಮಾಣಕ್ಕೆ ಸುಮಾರು ಒಂದು ಲಕ್ಷ ರೂ. ಖರ್ಚಾಗುತ್ತದೆ. ಬಳಿಕ ಖರ್ಚು ರಹಿತ ಆದಾಯ ಗಳಿಸಬಹುದು ಎನ್ನುತ್ತಾರೆ ಮೀನು ಕೃಷಿಕ ಬಂಟ್ವಾಳದ ರೊನಾಲ್ಡ್‌ ಡಿ’ಸೋಜಾ. ಅವರು ತೋಟದೊಂದಿಗೆ ಸುಮಾರು 30 ಸೆಂಟ್ಸ್‌ ಜಾಗದಲ್ಲಿ ಕಳೆದೈದು ವರ್ಷಗಳಿಂದ ಮೀನು ಕೃಷಿ ನಡೆಸುತ್ತಿದ್ದು, ವಾರ್ಷಿಕ ಸರಾಸರಿ 50 ಸಾವಿರ ರೂ.ಗಳಷ್ಟು ಆದಾಯ ಪಡೆಯುತ್ತಿದ್ದಾರೆ.

ಸಗಟು ಭೂಮಿಯಲ್ಲೂ ಮಾಡಬಹುದು
ಮೀನು ಕೃಷಿ ಲಾಭದಾಯಕ ವ್ಯವಸಾಯ. ತರಕಾರಿ, ಕಾಫಿ ಬೆಳೆಗೆ ಮತ್ತು ಇತರ ಬೆಳೆಗಳಿಗೆ ನೀರು ಹಾಯಿಸಲೆಂದು ಹೊಂಡಗಳನ್ನು ಅಗೆದಿದ್ದರೆ, ಅವುಗಳನ್ನು ಖಾಲಿ ಬಿಡದೆ ಅದರಲ್ಲಿ ಕೃಷಿ ಮಾಡಲು ಸಾಧ್ಯ. ಸಗಟು ಭೂಮಿಗಳಲ್ಲಿಯೂ ಕೆರೆ ನಿರ್ಮಿಸಿ ಮೀನು ಕೃಷಿ ಆರಂಭಿಸಬಹುದು.

ಸರ್ವಋತುವಿನ ಆದಾಯ ಕೃಷಿ
ಸರ್ವಋತುಗಳಲ್ಲಿಯೂ ಆದಾಯ ತರಬಲ್ಲ ಕೃಷಿ ಇದಾಗಿದೆ. ಆದರೆ ನೀರು ಅಗತ್ಯವಾಗಿ ಬೇಕಾಗುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಸಮುದ್ರ ಮೀನುಗಾರಿಕೆ ಚಟುವಟಿಕೆಗಳು ಸ್ತಬ್ಧಗೊಳ್ಳುವುದರಿಂದ ಮೀನು ಕೃಷಿಕರು ತಮ್ಮ ಕೆರೆಗಳ ಮೀನು ಹಿಡಿದು ಮಾರಾಟ ಮಾಡುತ್ತಾರೆ. ಅಲ್ಲದೆ ಕಾರ್ಮಿಕರೂ ಅಗತ್ಯವೂ ಇರುವುದಿಲ್ಲ.

ದ್ವಿತೀಯ ಸ್ಥಾನದಲ್ಲಿ ಭಾರತ 
ವಿಜ್ಞಾನಿಗಳಾದ ಹೀರಾಲಾಲ್‌ ಚೌದ್ರಿ ಮತ್ತು ಕೆ.ಎಚ್‌. ಆಲಿಕುನ್ನಿ ಅವರು 1957ರ ಜು. 10ರಂದು ಮೀನಿನ ಪಿಟ್ಯುಟರಿ ಗ್ರಂಥಿಯಿಂದ ತಯಾರಿಸಿದ ಹಾರ್ಮೋನ್‌ನ್ನು ಬಳಸಿಕೊಂಡು ಕೃತಕ ವಿಧಾನದಿಂದ ಗೆಂಡೆ ಮೀನುಗಳ ವಂಶಾಭಿವೃದ್ಧಿ ಮಾಡಿಸಿ ಯಶಸ್ವಿಯಾದರು. ಈ ದಿನದ ನೆನಪಿಗಾಗಿ ಪ್ರತಿ ವರ್ಷ ಜು. 10ನ್ನು ರಾಷ್ಟ್ರೀಯ ಮೀನು ಕೃಷಿಕರ ದಿನವಾಗಿ ಆಚರಿಸಲಾಗುತ್ತದೆ. ಭಾರತವು ಜಾಗತಿಕ ಮಟ್ಟದಲ್ಲಿ ಮೀನು ಕೃಷಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು,  ಹರಿಯಾಣ, ಅಸ್ಸಾಂ, ಆಂಧ್ರ, ಹೈದರಾಬಾದ್‌ ಕರ್ನಾಟಕ, ಪಶ್ಚಿಮ ಬಂಗಾಳ ಮುಂತಾದೆಡೆಗಳಲ್ಲಿ ಮೀನು ಕೃಷಿ ವ್ಯಾಪಕವಾಗಿದೆ. 

ದ.ಕ.ದಲ್ಲಿ ನಿರಾಸಕ್ತಿ ಯಾಕೆ?
ಮೀನು ಕೃಷಿಗೆ ಸೂಕ್ತವಾಗಿರುವ ದ.ಕ. ಜಿಲ್ಲೆಯಲ್ಲಿ ಮೀನು ಕೃಷಿಯತ್ತ ಒಲವು ಬೆಳೆಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಪ್ರಮುಖವಾಗಿ ಇಲ್ಲಿ ಸಮುದ್ರ ಮೀನುಗಾರಿಕೆ ಇರುವುದರಿಂದ ಜನ ಮೀನು ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ. ಅಲ್ಲದೆ ಮೀನು ಕೃಷಿಯ ಬಗ್ಗೆ ಅರಿವಿನ ಕೊರತೆಯೂ ಕಾರಣವಾಗಿರಬಹುದು ಎನ್ನುತ್ತಾರೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು.

ದೊಡ್ಡ ಗೆಂಡೆಗೆ ಬೇಡಿಕೆ
ಜಿಲ್ಲೆಯಲ್ಲಿ ದೊಡ್ಡ ಗೆಂಡೆ ಮೀನು ಮತ್ತು ಸಾಮಾನ್ಯ ಗೆಂಡೆ ಮೀನು ಎಂಬ ಎರಡು ತಳಿಗಳನ್ನು ಬೆಳೆಸಲು ಅವಕಾಶವಿದೆ. ದೊಡ್ಡ ಗೆಂಡೆ ಮೀನಿನಲ್ಲಿ ಕಟ್ಲ, ರೋಹು, ಮೃಗಾಲ್‌ ಮತ್ತು ಸಾಮಾನ್ಯ ಗೆಂಡೆಯಲ್ಲಿ ಕಾಮನ್‌ ಕಾರ್ಪ್‌ ಎಂಬ ಮೀನು ಮರಿಗಳನ್ನು ಸಾಕಬಹುದು. ಕಾರ್ಕಳದಲ್ಲಿ ಮೀನು ಮರಿ ಪಾಲನಾ ಕೇಂದ್ರವಿದ್ದು, ರೈತರಿಗೆ ಬೇಕಾದಲ್ಲಿ ಮರಿ ತರಿಸಿ ಕೊಡುವ ಕೆಲಸವನ್ನು ಮೀನುಗಾರಿಕಾ ಇಲಾಖೆ ಮಾಡುತ್ತಿದೆ. ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜಿನಲ್ಲಿಯೂ ಮೀನು ಮರಿಗಳು ದೊರೆಯುತ್ತವೆ. ಸಾಕಿದ ಮೀನುಗಳಿಗೆ ಆಹಾರವಾಗಿ ತೌಡು, ನೆಲಗಡಲೆ ಹಿಂಡಿ, ಮನೆಯ ಉಳಿಕೆ ಆಹಾರಗಳನ್ನೆಲ್ಲ ನೀಡಬಹುದು.

ಮೀನು ಕೃಷಿಗೆ ಪ್ರಾಶಸ್ತ್ಯ 
ಪರ್ಯಾಯ ಜೀವನ ನಿರ್ವಹಣಾ ಉದ್ಯಮವಾಗಿ ಮೀನು ಕೃಷಿಯನ್ನು ಅಭಿವೃದ್ಧಿ ಪಡಿಸಬಹುದು. ಇದರಿಂದ ಜನರಿಗೆ ಯಾವುದೇ ನಷ್ಟ ಉಂಟಾಗದು. ಮುಂದಿನ ದಿನಗಳಲ್ಲಿ ಸಮುದ್ರ ಮೀನುಗಾರಿಕೆ ಕಡಿಮೆಯಾದಲ್ಲಿ ಮೀನು ಕೃಷಿಗೆ ಪ್ರಾಶಸ್ತ್ಯ ಹೆಚ್ಚಾಗಲೂಬಹುದು. ಮೀನು ಕೃಷಿ ಬಗ್ಗೆ ಮೀನುಗಾರಿಕಾ ಇಲಾಖೆಯಿಂದ ಹಲವು ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. 
 - ಮಹೇಶ್‌ಕುಮಾರ್‌,
ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಮಂಗಳೂರು

ಟಾಪ್ ನ್ಯೂಸ್

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.