ನಕಲಿ ಡಿಗ್ರಿ: ಟಿ-20 ನಾಯಕಿ ಹರ್ಮನ್ ಡಿವೈಎಸ್ಪಿ ಸ್ಥಾನಮಾನ ನಷ್ಟ
Team Udayavani, Jul 10, 2018, 11:51 AM IST
ಹೊಸದಿಲ್ಲಿ : ಭಾರತೀಯ ವನಿತೆಯರ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ನೀಡಲಾಗಿದ್ದ ಡಿವೈಎಸ್ಪಿ ಸ್ಥಾನಮಾನವನ್ನು ಪಂಜಾಬ್ ಸರಕಾರ ಹಿಂಪಡೆದುಕೊಂಡಿದೆ. ಹರ್ಮನ್ ಅವರ ಡಿಗ್ರಿ ನಕಲಿ ಎಂದು ಸಾಬೀತಾಗಿರುವುದೇ ಇದಕ್ಕೆ ಕಾರಣವಾಗಿದೆ. ಆಕೆಯನ್ನು ಕಾನ್‌ಸ್ಟೆಬಲ್ ಆಗಿ ಮಾತ್ರವೇ ಉಳಿಸಿಕೊಳ್ಳಲು ಸಾಧ್ಯ ಎಂದು ಪಂಜಾಬ್ ಸರಕಾರ ಹೇಳಿದೆ.
ಹರ್ಮನ್ ಪ್ರೀತ್ ಕೌರ್ ಅವರ ಪದವಿಯು ನಕಲಿ ಹೌದೇ ಅಲ್ಲವೇ ಎಂಬ ಬಗ್ಗೆ ಪಂಜಾಬ್ ಸರಕಾರ ತನಿಖೆ ಕೈಗೊಂಡಿತ್ತು. ತನಿಖೆಯಲ್ಲಿ ಪದವಿಯು ನಕಲಿ ಎಂದು ಸಾಬೀತಾಯಿತು. ಪರಿಣಾಮವಾಗಿ ಆಕೆಗೆ ಕೊಟ್ಟಿದ್ದ ಡಿವೈಎಸ್‌ಪಿ ಮಟ್ಟದ ಸ್ಥಾನಮಾನವನ್ನು ಸರಕಾರ ಹಿಂಪಡೆದುಕೊಂಡಿತು ಎಂದು ದ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆದರೆ ಈ ವರೆಗೆ ಈ ಬಗ್ಗೆ ಸರಕಾರದಿಂದ ಹರ್ಮನ್ ಪ್ರೀತ್ ಕೌರ್ ಅವರಿಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. “ಹರ್ಮನ್ ಅವರು ಇದೇ ಪದವಿ ಪತ್ರವನ್ನು ರೈಲ್ವೇ ಗೆ ಕೂಡ ಕೊಟ್ಟಿದ್ದರು. ಹಾಗಿರುವಾಗ ಅದು ನಕಲಿಯಾಗಿರಲು ಹೇಗೆ ಸಾಧ್ಯ ಎಂದು ಮ್ಯಾನೇಜರ್ ಪ್ರಶ್ನಿಸಿದರು.
ಪದವಿಗೆ ಸಂಬಂಧಿಸಿದ ವಿವಾದದ ಬಗ್ಗೆ ಸ್ಪಷ್ಟೀಕರಣ ಪಡೆಯಲು ಬಂದಿದ್ದ ಪತ್ರಕರ್ತರ ತಂಡವನ್ನು ಹರ್ಮನ್ ಅವರು ಮೊಹಾಲಿಯಲ್ಲಿನ ಕಾರ್ಯಕ್ರಮವೊಂದರ ವೇಳೆ ಒಂದು ತಾಸು ಕಾಯುವಂತೆ ಮಾಡಿದ್ದರು.
ತಾಸುಗಟ್ಟಲೆ ಆಕೆಯನ್ನು ಬೆಂಬತ್ತಿದ ಪತ್ರಕರ್ತರಿಗೆ ಕೊನೆಗೂ ಸಿಕ್ಕಿದ ಉತ್ತರ ಇಷ್ಟು : “ವಿವಾದದ ಬಗ್ಗೆ ನನಗೆ ಮಾಹಿತಿ ಇದೆ. ಸರಕಾರ ಆ ವಿಷಯವನ್ನು ಪರಿಶೀಲಿಸುತ್ತಿದೆ. ಸರಕಾರದಿಂದ ಧನಾತ್ಮಕ ಉತ್ತರವನ್ನು ನಾನು ಎದುರು ನೋಡುತ್ತಿದ್ದೇನೆ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.