ಟ್ರಾಫಿಕ್‌ ಪೊಲೀಸ್‌ ಠಾಣೆಗಳಲ್ಲಿಲ್ಲ ಸಿಬ್ಬಂದಿ


Team Udayavani, Jul 10, 2018, 1:12 PM IST

ray-1.jpg

ರಾಯಚೂರು: ಜನಜೀವನ ಸುಗಮವಾಗಿ ಸಾಗಬೇಕಾದರೆ ಟ್ರಾಫಿಕ್‌ ಪೊಲೀಸರ ಪಾತ್ರ ಬಹುಮುಖ್ಯ. ಬೃಹದಾಕಾರವಾಗಿ ಬೆಳೆಯುತ್ತಿರುವ ರಾಯಚೂರು ಜಿಲ್ಲೆಯಲ್ಲಿ ಸಂಚಾರಿ ಪೊಲೀಸ್‌ ಠಾಣೆಗಳಲ್ಲಿ ಅಗತ್ಯ ಸಿಬ್ಬಂದಿ ಇಲ್ಲ ಎಂದರೆ…

ನಗರ ಸೇರಿ ಜಿಲ್ಲೆಯಲ್ಲಿ ಮೂರು ಸಂಚಾರಿ ಪೊಲೀಸ್‌ ಠಾಣೆಗಳಿವೆ. ಮೂರು ಠಾಣೆಗಳಲ್ಲೂ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿಯನ್ನು ರಜೆ ರಹಿತವಾಗಿ ದುಡಿಸಿಕೊಳ್ಳುವ ಅನಿವಾರ್ಯತೆ ಎದುರಿಸುತ್ತಿದೆ ಜಿಲ್ಲಾ ಪೊಲೀಸ್‌ ಇಲಾಖೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿವೆ. ಟ್ರಾಫಿಕ್‌ ಸಮಸ್ಯೆ ಜನರಿಗೆ ತಲೆ ಸಿಡಿದು ಹೋಗಿದೆ. ಆದರೆ, ಇಲಾಖೆಯನ್ನು ದೂರುವ ಜನರಿಗೇನು ಗೊತ್ತು ಇಲಾಖೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು

ಸಿಬ್ಬಂದಿ ಇಲ್ಲ ಎಂದು..!
ನಗರ ಸೇರಿ ಸಿಂಧನೂರು ಮತ್ತು ದೇವದುರ್ಗದಲ್ಲಿ ಟ್ರಾಫಿಕ್‌ ಪೊಲೀಸ್‌ ಠಾಣೆಗಳಿವೆ. ವಿಪರ್ಯಾಸವೆಂದರೆ ಮೂರು ಠಾಣೆಗಳಲ್ಲಿ ಅಗತ್ಯ ಸಿಬ್ಬಂದಿಯಿಲ್ಲ. ಇದರಿಂದ ಇರುವ ಸಿಬ್ಬಂದಿ ಮೇಲೆಯೇ ಹೆಚ್ಚುವರಿ ಹೊರೆ ಬೀಳುತ್ತಿದೆ. ತುರ್ತು ಸಂದರ್ಭದಲ್ಲಿ, ದೊಡ್ಡ ಸಮಾವೇಶ, ಜಾತ್ರೆಗಳಂತಹ ಕಾರ್ಯಕ್ರಮಗಳ ವೇಳೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸಿಬ್ಬಂದಿಯನ್ನು ಎರವಲು ಸೇವೆಗೆ ಪಡೆದು ಪರಿಸ್ಥಿತಿ ನಿಭಾಯಿಸುತ್ತಿದೆ ಇಲಾಖೆ.

ಎಲ್ಲೆಲ್ಲಿ ಎಷ್ಟೆಷ್ಟು ಕೊರತೆ..?: ರಾಯಚೂರು ನಗರ ಠಾಣೆಯಲ್ಲಿ ಇಬ್ಬರು ಪಿಎಸ್‌ ಐಗಳಲ್ಲಿ ಇರುವುದು ಒಬ್ಬರು. ಆರು ಜನ ಎಎಸ್‌ಐಗಳಲ್ಲಿ ಮೂರು ಜನ ಇದ್ದರೆ, 16 ಹೆಡ್‌ಕಾನ್‌ಸ್ಟೆಬಲ್‌ಗ‌ಳಲ್ಲಿ ಮೂವರು ತಾತ್ಕಾಲಿಕವಾಗಿ ಬೇರೆಡೆ ವರ್ಗಗೊಂಡಿದ್ದಾರೆ. 32 ಪೇದೆಗಳಲ್ಲಿ ಈಗಿರುವುದು 21 ಮಾತ್ರ. ಅದರಲ್ಲಿ ವಾರದ ರಜೆ, ತುರ್ತು ರಜೆ ಪಡೆದಲ್ಲಿ ಸಿಬ್ಬಂದಿ ಇನ್ನಷ್ಟು ಕಡಿತಗೊಂಡು ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತಿದೆ.

ದೇವದುರ್ಗ ಠಾಣೆಯಲ್ಲಿ ಇರುವ ಎರಡು ಪಿಎಸ್‌ಐ ಹುದ್ದೆಗಳು ಖಾಲಿ ಇವೆ. ನಾಲ್ಕರಲ್ಲಿ ಎರಡು ಎಎಸ್‌ಐ ಹುದ್ದೆ ಖಾಲಿ ಇದ್ದರೆ, 10ರಲ್ಲಿ 4 ಮುಖ್ಯ ಪೇದೆ ಹುದ್ದೆ ಖಾಲಿ ಇವೆ. ಇನ್ನು 26ರಲ್ಲಿ
ಬರೋಬ್ಬರಿ 20 ಪೇದೆ ಹುದ್ದೆಗಳು ಖಾಲಿ ಇವೆ. ಸಿಂಧನೂರು ಠಾಣೆಯಲ್ಲಿ ಈಚೆಗೆ ಒಬ್ಬರು ಪಿಎಸ್‌ಐಯನ್ನು ನಿಯೋಜಿಸಿದ್ದು, ಮತ್ತೂಂದು ಹುದ್ದೆ ಖಾಲಿ ಇದೆ. ಮೂವರು ಎಎಸ್‌ಐಗಳಲ್ಲಿ ಒಬ್ಬರಿಗೆ ಬಡ್ತಿ ಸಿಕ್ಕಿದ್ದು, ಎರಡು ಖಾಲಿ ಇವೆ. 12 ಮುಖ್ಯ ಪೇದೆಗಳು ಭರ್ತಿಯಾಗಿದ್ದರೆ, 25ರಲ್ಲಿ 10 ಪೇದೆ ಹುದ್ದೆಗಳು ಖಾಲಿ ಇವೆ. 

ಟ್ರಾಫಿಕ್‌ ಸಮಸ್ಯೆಗೆ ಮಿತಿಯಿಲ್ಲ: ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ, ಸಂಜೆ ಟ್ರಾಫಿಕ್‌ ಸಮಸ್ಯೆಗೆ ಮಿತಿ ಇಲ್ಲದಂತಾಗಿದೆ. ಒನ್‌ ವೇನಲ್ಲಿ ನುಗ್ಗುವ ವಾಹನಗಳು, ಅಡ್ಡಾದಿಡ್ಡಿ ಪಾರ್ಕಿಂಗ್‌ಗಳು, ಇಕ್ಕಟ್ಟಾದ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟ…. ಹೀಗೆ ಒಂದಲ್ಲ ಎರಡಲ್ಲ ನಿತ್ಯ ಯಾತನೆ ಎದುರಿಸುವ ಸವಾರರಿಗೆ ಗೊತ್ತು ಅದರ ಫಜೀತಿ. ಪ್ರಮುಖ ಕೇಂದ್ರಗಳಲ್ಲಿ ನಿಯೋಜನೆಗೊಂಡ ಪೊಲೀಸರು ಕರ್ತವ್ಯ ನಿರ್ವಹಿಸಿದರೆ ಸಾಕಷ್ಟು ಕಡೆ ಹೇಳುವವರು ಕೇಳುವವರಿಲ್ಲದಂಥ ಸ್ಥಿತಿ ಇರುತ್ತದೆ.

ಸಿಂಧನೂರು ಮತ್ತು ದೇವದುರ್ಗದಲ್ಲಿ ವಾರದ ಸಂತೆ ದಿನಗಳಂದು ಪರಿಸ್ಥಿತಿ ನಿಭಾಯಿಸುವುದು ಸುಲಭವಲ್ಲ. ಅಂಥ ಕಡೆ ಎಷ್ಟು ಪೊಲೀಸರನ್ನು ನಿಯೋಜಿಸಿದರೂ ಕಡಿಮೆಯೇ ಎನ್ನುವಂತಿರುತ್ತದೆ ಪರಿಸ್ಥಿತಿ.

ರಜೆ ರಹಿತ ಕೆಲಸ: ಕೆಲವೊಮ್ಮೆ ಸಿಬ್ಬಂದಿ ಕೊರತೆ ಎದುರಾದಾಗ ವಾರದ ರಜೆಯನ್ನು
ಪಡೆಯದೆ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಟ್ರಾಫಿಕ್‌ ಪೊಲೀಸರು. ನಿರಂತರವಾಗಿ ಕೆಲಸ ಮಾಡಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಎದುರಿಸುವಂತಾಗಿದೆ.

ಇಲ್ಲಿನ ಬಿಸಿಲು, ಧೂಳಿಗೆ ನಿರಂತರವಾಗಿ ನಿಂತು ಕೆಲಸ ಮಾಡುವುದು ನಿಜಕ್ಕೂ ಸವಾಲಿನ ಕೆಲಸವೇ ಎಂಬುದು ಅವರ ಅಳಲು. ಹೀಗೆ ನಾನಾ ಸಂಕಷ್ಟಗಳ ಮಧ್ಯೆ ಟ್ರಾಫಿಕ್‌ ಪೊಲೀಸರ ಕಾರ್ಯವೈಖರಿ ಸಾಗಿದೆ. ಒಟ್ಟಾರೆ ಇಲಾಖೆ ಸಿಬ್ಬಂದಿ ಕೊರತೆ ಇರುವವರ ಮೇಲೆ ಹೊರೆ ಹೆಚ್ಚಿಸಿರುವುದು
ಸುಳ್ಳಲ್ಲ. ಆದರೆ, ಶೀಘ್ರ ಕ್ರಮ ಕೈಗೊಂಡು ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಚಿತ್ತ ಹರಿಸಬೇಕಿದೆ.

ಟ್ರಾಫಿಕ್‌ ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವವರ ಮೇಲೆ ಹೊರೆ ಹೆಚ್ಚಾಗುತ್ತಿರುವುದು ನಿಜ. ಈಗಾಗಲೇ ಕೆಲವರಿಗೆ ಬಡ್ತಿ ನೀಡಿದ್ದು, ಅವರನ್ನು ಟ್ರಾಫಿಕ್‌ ಇಲಾಖೆಗೆ ನಿಯೋಜಿಸಲಾಗುವುದು. ಸರ್ಕಾರ ಕೂಡ ತಿಂಗಳೊಳಗೆ ಪೊಲೀಸರ ನೇಮಕಾತಿಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಖಾಲಿ ಇರುವ ಎಲ್ಲ ಹುದ್ದೆ ಭರ್ತಿಗೆ ಒತ್ತು ನೀಡಲಾಗುವುದು.
 ಡಿ.ಕಿಶೋರಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

„ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichruru-RTPS

Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ

11-dolly

Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

vidhana-soudha

CM office ನವೀಕರಣ: ಮತ್ತೊಂದು ವಿವಾದ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.