ಹೊಸಕುಂದುವಾಡಕ್ಕೆ ತಿಂಗಳಿಗೊಮ್ಮೆ ಕುಡಿಯುವ ನೀರು
Team Udayavani, Jul 10, 2018, 3:43 PM IST
ದಾವಣಗೆರೆ: ಕುಡಿಯುವ ನೀರು ಸಮರ್ಪಕ ಪೂರೈಸಲು ಒತ್ತಾಯಿಸಿ ಹೊಸಕುಂದುವಾಡ ಗ್ರಾಮಸ್ಥರು ಸೋಮವಾರ ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸಕುಂದವಾಡದಲ್ಲಿ 15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿತ್ತು. ಇದೀಗ ಒಂದು ತಿಂಗಳು ಕಳೆದರೂ ನೀರು ಪೂರೈಸಿಲ್ಲ. ದಿನನಿತ್ಯ ನೀರಿಗಾಗಿ ಜನರು ಕಾಯುವಂತಾಗಿದೆ. ತಿಂಗಳಿಗೊಮ್ಮೆ ನೀರು ಬಿಟ್ಟರೂ ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಪಕ್ಕದಲ್ಲೇ ಕುಂದುವಾಡ ಕೆರೆ ಇದ್ದರೂ ಸಹ ಕೆರೆಯ ನೀರಿನ ಭಾಗ್ಯ ಮಾತ್ರ ಸಿಗದೆ ಪರದಾಡುವಂತಾಗಿದೆ. ಕುಡಿಯಲು ಸಹ ನೀರಿಲ್ಲದೆ ಜನ, ಜಾನುವಾರುಗಳು ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಸಹ ನಿರ್ಲಕ್ಷ್ಯ ಮಾಡುತ್ತಾರೆ.
ಕುಂದುವಾಡ ಕೆರೆಯಿಂದ ಇಡೀ ದಾವಣಗೆರೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಪಕ್ಕದಲ್ಲಿಯೇ ಇರುವ ನಮಗೆ ಮಾತ್ರ ನೀರು ಕೊಡುತ್ತಿಲ್ಲ ಎಂದು ದೂರಿದರು.
ವಾರ್ಡ್ ಮೆಂಬರ್ ಗೆದ್ದ ಮೇಲೆ ಬಂದು ಹೋದರೆ ಹೊರತು ಇತ್ತ ಗಮನ ಹರಿಸಿಲ್ಲ. ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಕುಡಿಯುವ ನೀರಿಲ್ಲದೆ ಹೊಲಗಳಲ್ಲಿರುವ ಬೋರ್‌ಗಳಿಂದ ನೀರು ತಂದುಕೊಂಡು ಜೀವನ ನಡೆಸಲಾಗುತ್ತಿದೆ. ಮಳೆಗಾಲದಲ್ಲೂ ಸಹ ನೀರಿಗಾಗಿ ಪರದಾಡಬೇಕಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸಬೂಬು ಹೇಳಿ ಜಾರಿಕೊಳ್ಳುತ್ತಾರೆ. ದಾವಣಗೆರೆಯಲ್ಲಿ ವಾರಕ್ಕೆ ಎರಡು ದಿನ ಕುಡಿಯುವ ನೀರು ಬಿಡಲು ಸಿದ್ಧತೆ ನಡೆದರೂ ಹೊಸಕುಂದುವಾಡದಲ್ಲಿ ಒಂದು ತಿಂಗಳಾದರೂ ನೀರು ಪೂರೈಸುತ್ತಿಲ್ಲ. ಇನ್ನೆರಡು ದಿನಗಳಲ್ಲಿ ನೀರು ಪೂರೈಸದಿದ್ದಲ್ಲಿ ಮಹಾನಗರಪಾಲಿಕೆಗೆ ಮುತ್ತಿಗೆ ಹಾಕಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಾಗರಾಜಾಚಾರಿ,ನಾಗಪ್ಪ, ಗೋಪಾಲಪ್ಪ, ರಾಜು ಪೂಜಾರಿ, ಮೋಹನ್, ಮಲ್ಲಿಕಾರ್ಜುನ್, ಹರೀಶ್, ಪ್ರವೀಣ್, ರಘು, ಬಸವರಾಜ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.