ಮಿಡಿ ಮಿಡಿ ಮಿಡಿ ಐ ಲವ್‌ ಯು!


Team Udayavani, Jul 11, 2018, 6:00 AM IST

c-5.jpg

90ರ ದಶಕದ ಸಿನಿಮಾಗಳನ್ನು ನೀವು ನೋಡಿದ್ದರೆ ಬಹುತೇಕ ಡ್ಯುಯೆಟ್‌ ಸಾಂಗುಗಳಲ್ಲಿ ಸಿನಿಮಾ ನಾಯಕಿಯರು ಒಂದೇ ಥರದ ದಿರಿಸನ್ನು ಹಾಕಿರುವುದನ್ನು ಕಾಣಬಹುದು. ಆ ದಿನಗಳಲ್ಲೇ ಪ್ರಖ್ಯಾತವಾಗಿದ್ದ, ಆ ದಿರಿಸು “ಮಿಡಿ ಸ್ಕರ್ಟ್‌’. ಸುಧಾ ರಾಣಿ, ಮಾಲಾಶ್ರೀ, ತಾರಾ ಸೇರಿದಂತೆ ಬಹುತೇಕ ನಾಯಕಿಯರು ಮಿಡಿ ತೊಟ್ಟು ಮಿಂಚಿದವರೇ.  

ಮೆನಿ ಮೆನಿ ಮಿಡಿ
ಎಲ್ಲಾ ವಯೋಮಾನದ ಹೆಣ್ಮಕ್ಕಳಿಗೂ ಹೊಂದುವ ದಿರಿಸು ಮಿಡಿ.  ವಿವಿಧ ದೇಹ ಗಾತ್ರ, ಉದ್ದಕ್ಕೆ ಸರಿ ಹೊಂದುವ ಹಾಗೆ ನಾನಾ ವಿಧಗಳಲ್ಲಿ ಮಿಡಿಗಳು ಸಿಗುತ್ತವೆ. ಮೊಣಕಾಲನ್ನು ಮುಚ್ಚುವಂತೆ ಬರುತ್ತಿದ್ದ ಮಿಡಿ ಸ್ಕರ್ಟ್‌ಗಳು ದಶಕಗಳ ಹಿಂದೆ ತುಂಬಾ ಜನಪ್ರಿಯತೆ ಗಳಿಸಿದ್ದವು. ನಂತರದ ದಿನಗಳಲ್ಲಿ ಮಿಡಿ ಸ್ಕರ್ಟನ್ನು ಹಿಂದಿಕ್ಕಿದ್ದು ಮಿನಿ ಸ್ಕರ್ಟ್‌. ಆದರೂ, ಮಿಡಿ ಯಾವತ್ತೂ ಔಟ್‌ ಆಫ್ ಫ್ಯಾಷನ್‌ ಆಗಿದ್ದೇ ಇಲ್ಲ. 

ಎಲ್ಲಾ ಕಾಲಕ್ಕೂ…
ಮಿಡಿಯ ವೈಶಿಷ್ಟವೆಂದರೆ ಎಲ್ಲಾ ಕಾಲಕ್ಕೂ ಹೊಂದುವ ಗುಣ. ಸರಿಯಾಗಿ ಮ್ಯಾಚ್‌ ಆಗುವ ಟಾಪ್‌ ಒಂದಿದ್ದರೆ ಮೂರೂ ಕಾಲದಲ್ಲಿ ಮಿಡಿಯನ್ನು ತೊಡಬಹುದು. ಬೇಸಿಗೆಯಲ್ಲಿ ಸಿಂಪಲ್‌ ಟೀ ಶರ್ಟ್‌, ಕ್ರಾಪ್‌ ಟಾಪ್‌ ಜೊತೆಗೆ ಮಿಡಿ ತೊಡಬಹುದು. ಮಳೆಗಾಲ ಮತ್ತು ಚಳಿಗಾಲದಲ್ಲಿ ಫ‌ುಲ್‌ ತೋಳಿನ ಅಂಗಿ ಅಥವಾ ಸ್ವೆಟರ್‌ ಜೊತೆಗೂ ಧರಿಸಬಹುದು. ಇದರ ಜೊತೆ ಸ್ಕಾಫ‌ìನ್ನು ಸುತ್ತಿಕೊಂಡರೆ ಟ್ರೆಂಡಿ ಲುಕ್‌ ಪಕ್ಕಾ. ಮಿಡಿಯ ಜೊತೆಗೆ ಹೈ ಹೀಲ್ಸ್‌, ಬೂಟ್ಸ್‌ ಮತ್ತು ಟ್ರೆಂಡಿ ಸ್ಯಾಂಡಲ್ಸ್‌ ತೊಡಬಹುದು.

ಸಾಲಿಡ್‌ ಕಲರ್‌, ಅಂದರೆ ಪೂರ್ತಿ ಒಂದೇ ಬಣ್ಣದ ಮಿಡಿಯಷ್ಟೇ ಅಲ್ಲದೆ ವಿವಿಧ ವಿನ್ಯಾಸಗಳ ಮಿಡಿಯನ್ನೂ ಪ್ರಯತ್ನಿಸಬಹುದು. ಡಾಟ್ಸ್‌, ಫ್ಲೋರಲ್‌, ಸ್ಟ್ರೈಪ್ಸ್‌ ಮುಂತಾದ ಬಗೆಗಳಲ್ಲಿ ಮಿಡಿ ಸಿಗುತ್ತವೆ. ಕಾಲನ್ನು ಪೂರ್ತಿ ಮುಚ್ಚುವ ಫ‌ುಲ್‌ ಮಿಡಿಗಳೂ ಮಿಡಿಯಷ್ಟೇ ಜನಪ್ರಿಯತೆಯನ್ನು ಪಡೆದಿವೆ.  

ಅಮ್ಮನೂ ಬೇಡ ಎನ್ನಳು!
ಬಟ್ಟೆ ಶಾಪಿಂಗ್‌ ಮಾಡುವಾಗ ಮಗಳು ಮಾಡರ್ನ್ ಆಗಿದ್ದರೆ ಮಾಡರ್ನ್ ದಿರಿಸುಗಳನ್ನೇ ಆರಿಸಿಕೊಳ್ಳೋದು ಸಹಜ. ಮಗಳು ಆರಿಸಿದ ಬಟ್ಟೆಗಳ ಬಗ್ಗೆ ಅಮ್ಮಂದಿರು ಆಕ್ಷೇಪ ಮಾಡೋದು, ಆ ಮಾಡರ್ನ್ ದಿರಿಸು ತುಂಬಾ ಚಿಕ್ಕದಿದ್ದರೆ ಮಾತ್ರ. ಆದರೆ ಹಾಗೆಂದು ಅಮ್ಮನಿಗೆ ಒಪ್ಪಿಗೆಯಾಗುವ ದಿರಿಸನ್ನು ಕಾಲೇಜಿಗೆ ಹಾಕಿಕೊಂಡು ಹೋದರೆ ಗೆಳತಿಯರೆಲ್ಲ ಎಲ್ಲಿ ತನ್ನನ್ನು ಗೌರಮ್ಮ ಎಂದು ಆಡಿಕೊಳ್ಳುತ್ತಾರೋ ಎಂಬ ಆತಂಕ ಮಗಳದು. ಈ ಸಂದರ್ಭದಲ್ಲಿ ನೆರವಿಗೆ ಬರೋದು, ಅತ್ತ ಗಿಡ್ಡವೂ ಅಲ್ಲದ, ಇತ್ತ ಉದ್ದವೂ ಅಲ್ಲದ ಮಿಡಿ. ಅತ್ತ ತುಂಬಾ ಮಾಡರ್ನೂ ಅಲ್ಲದ, ಇತ್ತ ಪಕ್ಕಾ ಸಾಂಪ್ರದಾಯಿಕವೂ ಅಲ್ಲದ, ಮೊಣಕಾಲು ಮುಚ್ಚುವ ಮಿಡಿ ಬಹುತೇಕ ಹೆಣ್ಮಕ್ಕಳ ಮೆಚ್ಚುಗೆ ಪಡೆದಿರುವುದಕ್ಕೆ ಇದೂ ಒಂದು ಕಾರಣ.

ಟಾಪ್ ನ್ಯೂಸ್

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.