ಅನಿಲ ಮೇತ್ರಿಗೆ ಸಿಜಿಕೆ ರಂಗಪ್ರಶಸ್ತಿ ಪ್ರದಾನ
Team Udayavani, Jul 10, 2018, 5:00 PM IST
ಧಾರವಾಡ: ನಗರದ ಕವಿಸಂನಲ್ಲಿ ಗಣಕರಂಗ, ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಸಂಸರಂಗಪತ್ರಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ, ಛತ್ರಪತಿ ಶಾಹೂಮಹಾರಾಜರ 144ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ರಂಗಸಂಗೀತ ವಾದಕ ಅನಿಲ ಮೇತ್ರಿ ಅವರಿಗೆ ‘ಸಿಜಿಕೆ ರಂಗ ಪ್ರಶಸ್ತಿ-2018’ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೇತ್ರಿ, ಸಮಾಜದಲ್ಲಿ ಗೊಂದಲ-ಗಲಭೆಗಳು ಸೃಷ್ಟಿಯಾಗುತ್ತ ಭಾತೃತ್ವ-ವೈಕ್ಯದಂತಹ ಅಂಶಗಳು ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸುಗಳನ್ನು ಒಡೆಯುವಂತಹ, ವೈಮನಸ್ಸು-ವೈರತ್ವ ಸೃಷ್ಟಿಸುವಂತಹ ಅನಾಹುತಕಾರಿ ವಿಷಯಗಳನ್ನು ಹರಿಬಿಡಲಾಗುತ್ತಿರುವುದು ಋಣಾತ್ಮಕ ವಿಚಾರವಾಗಿದೆ. ಇದು ಶೀಘ್ರದಲ್ಲಿ ನಿಲ್ಲಬೇಕು ಎಂದರು.
ಕಲಾವಿದನೊಬ್ಬ ಸಮಾಜದ ಆಸ್ತಿ. ಸಾಮಾಜಿಕ ಕಳಕಳಿಯಿಂದ ಮಾತನಾಡಿದರೆ ಅಪರಾಧವಾಗುತ್ತಿರುವ ದುರಂತ ಸಂದರ್ಭದಲ್ಲಿದ್ದೇವೆ. ಆಧುನಿಕ ತಂತ್ರಜ್ಞಾನದ ಫಲವಾಗಿ ಎಲ್ಲರ ಹತ್ತಿರ ಮೊಬೈಲ್ ಬಂದಿರುವುದರಿಂದ ನಮ್ಮಂಥ ಕಲಾವಿದರು ಸಮಾಜದ ಎಲ್ಲರಿಗೂ ಶೀಘ್ರವಾಗಿ ತಲುಪುತ್ತಿದ್ದೇವೆ ಎಂದರು.
ಯುವ ಚಿಂತಕ ವೀರಪ್ಪ ತಾಳದವರ, ಸದಾಶಿವ ಕಾಂಬಳೆ, ಹಿರಿಯ ರಂಗಕರ್ಮಿ ವಿಶ್ವೇಶ್ವರಿ ಹಿರೇಮಠ ಮಾತನಾಡಿದರು. ಬುದ್ಧ, ಬಸವ, ಬಾಬಾಸಾಹೇಬ ನೆನಪಿನ ಕವಿಗೋಷ್ಠಿಯಲ್ಲಿ ವಿವಿಧ ಭಾಗದಿಂದ ಆಗಮಿಸಿದ್ದ ಕವಿಗಳು ಸ್ವರಚಿತ ಕವನ ವಾಚಿಸಿದರು. ಲಕ್ಷ್ಮಣ ಬಕ್ಕಾಯಿ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ತಮ್ಮಣ್ಣ ಮಾದರ, ಹಿಪ್ಪರಗಿ ಸಿದ್ಧರಾಮ, ಭೀಮನಗೌಡ ಕಠಾವಿ, ಜೋಸೆಫ್ ಮಲ್ಲಾಡಿ, ಉಮಾ ಚವಾಣ, ಎಸ್.ಡಿ. ಹೊಸಮನಿ, ಜಯಶ್ರೀ ಜಾತಿಕರ್ತ, ಬಿ.ಎಫ್. ಅಸೂಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.