ದೋಣಿ ಸಹಾಯದಿಂದ ಅಂತರಗಂಗೆ ತೆರವು
Team Udayavani, Jul 11, 2018, 6:00 AM IST
ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರಿನಲ್ಲಿ ಅಂತರಗಂಗೆ ಸಮಸ್ಯೆಯಿಂದ ಸೇತುವೆಯಲ್ಲಿ ನೀರು ಹರಿಯಲು ಅಡ್ಡಿಯಾಗಿ ಕಳೆದ 12ದಿನಗಳಿಂದ ನೆರೆ ಸಮಸ್ಯೆ ಉಂಟಾಗಿತ್ತು. ಇದೀಗ ಸೋಮವಾರ ಮತ್ತು ಮಂಗಳವಾರ ಇಲ್ಲಿನ ಸ್ಥಳೀಯ ಕೃಷಿಕರು ಎಡೆಬಿಡದೆ ಕಾರ್ಯ ನಿರ್ವಹಿಸಿ ದೋಣಿಯ ಸಹಾಯದಿಂದ ಸೇತುವೆಗೆ ಸಿಲುಕಿದ ಅಂತರಗಂಗೆಯನ್ನು ಬೇರ್ಪಡಿಸಿದರು.
ಅಂತರಗಂಗೆ ಸೇತುವೆಗೆ ಸಿಲುಕಿ ಸೇತುವೆ ಬ್ಲಾಕ್ ಆಗಿತ್ತು ಹಾಗೂ ಹೊಳೆಯ ಮೇಲ್ಭಾಗದಲ್ಲಿ ಸುಮಾರು ಒಂದು ಫೀಟ್ನಷ್ಟು ತೇಲುತಿತ್ತು. ನೆರೆಯಿಂದ 300 ಎಕ್ರೆಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯ ಸಂಭವವಿದೆ ಮತ್ತು ಸುಮಾರು 50ಎಕ್ರೆ ಭತ್ತದ ನೇಜಿ ಈಗಾಗಲೇ ಕೊಳೆತಿದೆ. ಅಂತರಗಂಗೆ ತೆರವುಗೊಳಿಸುವಲ್ಲಿ ಸ್ಥಳೀಯ ಪ್ರಗತಿಪರ ಕೃಷಿಕರಾದ ಭೋಜ ಪೂಜಾರಿ, ರಾಜಾರಾಮ್ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ, ಪ್ರಸಾದ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಹಂಡಿಕೆರೆ, ಪುಟ್ಟ ಶೆಟ್ಟಿ, ರವಿ ಗಿಳಿಯಾರು, ರಾಘು ಶೆಟ್ಟಿ, ಶರತ್, ದಿನೇಶ್ ಹರ್ತಟ್ಟು ಕೈಜೋಡಿಸಿದರು.
ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಿ
ಮುಂದಿನ ವರ್ಷ ಮಳೆಗಾಲಕ್ಕೆ ಮೊದಲು ಹೊಳೆಯ ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಹಾಗೂ ಮೋರಿ ತೆರವುಗೊಳಿಸಿ ಹೊಸ ಸೇತುವೆ ನಿರ್ಮಿಸಬೇಕು ಮತ್ತು ಅಂತರಗಂಗೆ ಹತೋಟಿಗೆ ಕೃಷಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಈ ಕುರಿತು ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.