ಮಾಂಸ ತ್ಯಾಜ್ಯ: ಪೆರುವಾಯಿ, ಕೇಪು ಆಯ್ತು, ಈಗ ಅಳಿಕೆ ಸರದಿ


Team Udayavani, Jul 11, 2018, 2:50 AM IST

thyajya-10-7.jpg

ಅಳಿಕೆ: ಮಾಂಸ ತ್ಯಾಜ್ಯಗಳನ್ನು ಗೋಣಿಚೀಲಗಳಲ್ಲಿ ತುಂಬಿ, ಅಲ್ಲಲ್ಲಿ ರಾಶಿ ಹಾಕಿ ತೆರಳುವುದು ರೂಢಿಯಾಗಿದೆ. ರಾತ್ರಿ ಹೊತ್ತಲ್ಲಿ ಮಾಡುವ ಈ ಕುಕೃತ್ಯ ಬೆಳಕಿಗೆ ಬರುತ್ತಲೇ ಇಲ್ಲ. ಒಂದು ತಿಂಗಳ ಒಳಗೆ ಮೂರು ಕಡೆ ಇಂತಹ ಪ್ರಕರಣ ನಡೆಯಿತು. ಒಂದು ಪ್ರಕರಣವನ್ನೂ ಪತ್ತೆ ಹಚ್ಚಲಾಗಿಲ್ಲ. ಇತ್ತೀಚೆಗೆ ಕೇಪು ಗ್ರಾಮದ ಕುದ್ದುಪದವಿನಲ್ಲಿ ಮತ್ತು ಕನ್ಯಾನ ಗ್ರಾಮದಲ್ಲಿ ಇಂತಹುದೇ ಪ್ರಕರಣ ಸಂಭವಿಸಿದ್ದು, ಇದೀಗ ಅಳಿಕೆ ಗ್ರಾಮದ ಸರದಿ.

ಬಿಲ್ಲಂಪದವು ತ್ಯಾಜ್ಯ
ಲಾರಿಗಳಲ್ಲಿ ತಂದು 50-60 ಗೋಣಿಚೀಲಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಪ್ರಕ್ರಿಯೆ ನಿರಂತರವಾಗಿ ನಾಗರಿಕರನ್ನು ಕಾಡುತ್ತಿದೆ. ಇದೀಗ ಅಳಿಕೆ ಗ್ರಾಮದ ಬಿಲ್ಲಂಪದವು ಗೇರು ನಿಗಮದ ಗುಡ್ಡದಲ್ಲಿ ನೆಗಳಗುಳಿಗೆ ತೆರಳುವ ರಸ್ತೆ ಬದಿಯಲ್ಲೇ ತ್ಯಾಜ್ಯ ತುಂಬಿದ ಗೋಣಿಚೀಲಗಳ ರಾಶಿ ಮಂಗಳವಾರ ಪತ್ತೆಯಾಗಿದೆ.

ಕೇರಳಕ್ಕೆ ಕೋಳಿ, ಕರ್ನಾಟಕಕ್ಕೆ ತ್ಯಾಜ್ಯ
ಕೇರಳಕ್ಕೆ ಕೋಳಿ ಹಾಗೂ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುವ ಲಾರಿಗಳು ವಾಪಸಾಗುವ ಸಂದರ್ಭ ತ್ಯಾಜ್ಯವನ್ನು ತುಂಬಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಸುರಿಯುತ್ತಿರುವುದು ಕಂಡುಬರುತ್ತದೆ. ಈ ಬಗ್ಗೆ ಗಡಿ ಭಾಗದಲ್ಲಿ ಪ್ರತಿಯೊಬ್ಬರೂ ಗಬ್ಬುನಾತವನ್ನು ಅನುಭವಿಸಿ, ಸುಸ್ತಾಗಿದ್ದಾರೆ. ಇದೀಗ ಅಳಿಕೆ ಗ್ರಾಮದ ಕುದ್ದುಪದವು – ಪೆರುವಾಯಿ ರಸ್ತೆಯ ಬಿಲ್ಲಂಪದವು ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ತ್ಯಾಜ್ಯ ತುಂಬಿದ ಗೋಣಿ ಚೀಲವನ್ನು ರಾಶಿ ಹಾಕಿ ತೆರಳಿದ್ದಾರೆ. ಈ ತ್ಯಾಜ್ಯವನ್ನು ಸುರಿದವರಿಂದಲೇ ತೆಗೆಸಬೇಕೆಂದು ಗ್ರಾಮಸ್ಥರು ಅಳಿಕೆ ಗ್ರಾ.ಪಂ. ಅನ್ನು ಆಗ್ರಹಿಸಿ, ದೂರು ನೀಡಿದ್ದಾರೆ.

ತಿಂಗಳ ಅವಧಿಯಲ್ಲಿ ಮೂರು ರಾಶಿ
ಜೂನ್‌ ತಿಂಗಳಲ್ಲಿ ಬೆರಿಪದವು – ಬಾಳೆಕೋಡಿ -ಕನ್ಯಾನ ರಸ್ತೆಯ ಶಾಂತಿಮೂಲೆ ಎಂಬಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ತುಂಬಿದ ಗೋಣಿ ಚೀಲಗಳನ್ನು ಎಸೆದು ಹೋಗಿದ್ದರು. ಜು. 3ಕ್ಕೆ ತೋರಣಕಟ್ಟೆ – ಕುದ್ದುಪದವು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದು ಲೋಡಿನಷ್ಟು ಕೋಳಿ ತ್ಯಾಜ್ಯ ಪತ್ತೆಯಾಗಿತ್ತು. ಈಗ ಮತ್ತೆ ಬಿಲ್ಲಂಪದವು ಪರಿಸರದಲ್ಲಿ ಗೋಣಿಯಲ್ಲಿ ತುಂಬಿದ ತ್ಯಾಜ್ಯ ಪತ್ತೆಯಾಗಿದೆ. ತಿಂಗಳ ಅವಧಿಯಲ್ಲಿ ಮೂರು ಕಡೆಗಳಲ್ಲಿ ಈ ರೀತಿಯ ಪ್ರಕರಣ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೇರಳಕ್ಕೆ ಹೋಗುವ ಅಕ್ರಮ ಕೋಳಿ ಲಾರಿಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರತಿಭಟಿಸುವ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದಲ್ಲಿ ಸ್ಥಳೀಯ ಮಾಂಸದ ಅಂಗಡಿಗಳನ್ನೇ ಮುಚ್ಚಿಸುವ ಮೂಲಕ ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪಂಚಾಯತ್‌ ನಿಂದ ಠಾಣೆಗೆ ದೂರು
ಸ್ಥಳೀಯ ನಿವಾಸಿಗಳ ದೂರಿಗೆ ಸ್ಪಂದಿಸಿದ ಅಳಿಕೆ ಗ್ರಾ.ಪಂ., ಅಕ್ರಮವಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಸೂಕ್ತ ರೀತಿಯಲ್ಲಿ ಶಿಕ್ಷಿಸಬೇಕೆಂದು ಆಗ್ರಹಿಸಿ ವಿಟ್ಲ ಠಾಣೆಗೆ ದೂರು ನೀಡಿದೆ.

ಅಲ್ಲಲ್ಲಿ ಎಚ್ಚರಿಕೆ ನಾಮಫಲಕ
ಸುತ್ತಮುತ್ತಲ ಎಲ್ಲ ಗ್ರಾ.ಪಂ.ಗಳು ಗ್ರಾಮಸ್ಥರ ಆಗ್ರಹಕ್ಕೆ ಒಳಪಟ್ಟು ಎಲ್ಲೆಂದರಲ್ಲಿ ಸುರಿಯುವ ತ್ಯಾಜ್ಯದ ವಿರುದ್ಧ ಕ್ರಮ ಕೈಗೊಳ್ಳಲಾಗದೇ ಅಲ್ಲೆಲ್ಲ ನಾಮಫಲಕ ಅಳವಡಿಸಿ, ಕೈತೊಳೆದುಕೊಂಡಿವೆ. ಪೊಲೀಸರೂ ಈ ಬಗ್ಗೆ ಕ್ರಮ ಕೈಗೊಂಡು, ಯಾವುದೇ ಲಾರಿಗಳನ್ನಾಗಲೀ ಅಪರಾಧಿಗಳನ್ನಾಗಲೀ ಪತ್ತೆ ಹಚ್ಚಿ, ಬಂಧಿಸಿದ ಉದಾಹರಣೆಗಳೇ ಇಲ್ಲ. ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳದೇ ಇದ್ದಲ್ಲಿ ಈ ಕಾಟ ತಪ್ಪುವ ಯಾವ ಲಕ್ಷಣಗಳೂ ಇಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.