ಮಳೆಗಾಲದ ಅತಿಥಿ ಅಣಬೆ: ರುಚಿಕರ ಆಹಾರ


Team Udayavani, Jul 11, 2018, 2:55 AM IST

anabe-10-7.jpg

ವಿಶೇಷ ವರದಿ – ಆಲಂಕಾರು: ಮಳೆ, ಗುಡುಗು ಅಬ್ಬರಿಸುತ್ತಿರುವಾಗ ಗುಡ್ಡಗಳಲ್ಲಿ, ತೋಟದ ಬದುಗಳಲ್ಲಿ ರಾತ್ರಿ ಬೆಳಗಾಗುವುದೊರೊಳಗೆ ಹುಟ್ಟಿಕೊಳ್ಳುತ್ತವೆ ಅಣಬೆಗಳು. ಅತ್ಯುತ್ತಮ ಪೌಷ್ಠಿಕಾಂಶಗಳನ್ನು ಒಳಗೊಂಡಿರುವ ನೈಸರ್ಗಿಕ ಆಹಾರವಾಗಿರುವ ಅಣಬೆಯ ಕುರಿತು ಜಾಗೃತಿ ಇರಬೇಕಾಗಿದ್ದು, ಎಚ್ಚರಿಕೆ ಅತ್ಯಗತ್ಯ.

ಅಣಬೆಗಳನ್ನು ಬೇರು ಅಣಬೆ, ದರಗು ಅಣಬೆ ಮತ್ತು ಬರ್ಕಟ್ಟೆ ಅಣಬೆಯಾಗಿ 3 ವಿಧದಲ್ಲಿ ವಿಗಂಡಿಸಬಹುದು. ಬೇರು ಅಣಬೆಯು ಜುಲೈ ತಿಂಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇವುಗಳು ಗೆದ್ದಲಿನ ಹುತ್ತ, ಫ‌ಲವತ್ತಾದ ಮಣ್ಣಿನಲ್ಲಿ ಹುಟ್ಟುತ್ತವೆ. ಕಿತ್ತಾಗ ಉದ್ದನೆಯ ಬೇರು ಇರುತ್ತದೆ. ಉದಾ: ತುಳುವಿನ ನಾಯಿಂಬ್ರೆ. ಸುಳಿರ್‌ ಇತ್ಯಾದಿ. ದರಗು ಅಣಬೆ ಗಾತ್ರದಲ್ಲಿ ಸಣ್ಣದಾಗಿರುತ್ತದೆ. ಕಾಫಿ ತೋಟ, ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೊಳೆತ ಎಲೆಗಳ ಮೇಲೆ ಹುಟ್ಟಿಕೊಳ್ಳುವ ಈ ಅಣಬೆಗಳು ತಿನ್ನಲು ಬಲು ರುಚಿಕರ. ಬರ್ಕಟ್ಟೆ ಅಣಬೆಯು ಛತ್ರಿಯಂತೆ ಎದ್ದು ನಿಲ್ಲುತ್ತದೆ. ಒಂದೇ ಕಡೆಯಲ್ಲಿ 10-15 ದಿನಗಳ ಕಾಲ ಹುಟ್ಟುತ್ತದೆ. ತುಳುವಿನಲ್ಲಿ ಸುಳಿರ್‌ ಅಣಬೆ ಎಂದೂ ಕರೆಯುತ್ತಾರೆ. ಕಲ್ಲಲಂಬು ಅಣಬೆಗೆ ಬೇಡಿಕೆ ಹೆಚ್ಚಿದೆ. ಕೆ.ಜಿ.ಗೆ 150-200 ರೂ.ಗೆ ಮಾರಾಟವಾಗುತ್ತದೆ.

ಅಣಬೆಗಳು 15ಕ್ಕೂ ಹೆಚ್ಚಿನ ಬಗೆಗಳಲ್ಲಿ ಕಾಣಸಿಗುತ್ತವೆ. ಹಳ್ಳಿಗಳಲ್ಲಿ ಮುಖ್ಯವಾಗಿ ನಾಯಿಂಬ್ರೆ, ಸುಳಿರ್‌, ಮುಟ್ಟಲಂಬು, ಪರೆಲ್‌ ಅಲಂಬು, ಬೊಲ್ಲೆಂಜಿರ್‌, ಕಲ್ಲಲಂಬು, ಮರದ ಅಲಂಬು, ಬಿದಿರಿನ ಅಲಂಬು, ಬೈಹುಲ್ಲಿನ ಅಲಂಬು ಇತ್ಯಾದಿ… ಇವೆಲ್ಲವೂ ಕೂಡ ಆಟಿ ಮತ್ತು ಸೋಣ ತಿಂಗಳಲ್ಲಿ ಹುಟ್ಟಿಕೊಳ್ಳುತ್ತವೆ.


ತಿಳಿಯುವುದು ಹೇಗೆ?

ಅಣಬೆಗಳಲ್ಲಿ ವಿಷಕಾರಿ ಅಣಬೆಗಳು ಕೂಡ ಬಹಳಷ್ಟಿವೆ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಇವುಗಳನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾದರೂ ಕೆಲವೊಂದನ್ನು ನೋಡುವಾಗಲೇ ವಿಷಕಾರಿ ಅಣಬೆ ಎಂದು ತಿಳಿದುಕೊಳ್ಳಬಹುದು. ಅಮಾನಿಟಿ ಫೆಲ್ಲಾಯ್‌ಡಿಸ್‌ ಎನ್ನುವ ಅಣಬೆ ಅತ್ಯಂತ ವಿಷಕಾರಿ. ಇದಕ್ಕೆ ಬೆಳ್ಳಗಿನ ತೊಟ್ಟು ಇರುತ್ತದೆ. ದೊಡ್ಡ ಹಸಿರು ಮಿಶ್ರಿತ ಬಿಳುಪಿನ ವೃತ್ತಾಕಾರದ ಟೋಪಿ ಇದ್ದು, ಅದರಲ್ಲಿರುವ ಪದರಗಳು ಮೊದಲು ಬೆಳ್ಳಗಿರುತ್ತವೆ. ಆನಂತರ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದನ್ನು ಸೇವಿಸಿದರೆ ಹೊಟ್ಟೆನೋವು, ವಾಂತಿ – ಭೇದಿ ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ ಪಡೆಯದಿದ್ದರೆ ನಾಲ್ಕೈದು ದಿನಗಳಲ್ಲಿ ಸಾವು ಕೂಡ ಬಂದೀತು. ಕಪ್ಪು ಬಣ್ಣದ ಹಳದಿ ಎಲೆಗಳನ್ನು ಹೊಂದಿದ ಅಮಾನಿಟಿ ಮ್ಯಾಕ್ಸೆರಿಯಾ ಎನ್ನುವ ಅಣಬೆಯೂ ವಿಷಕಾರಿ. ಹಾಗಾಗಿ ಅಣಬೆಗಳನ್ನು ತೆಗೆ ಯುವ ಸಂದರ್ಭ ಜಾಗರೂಕತೆ ವಹಿಸುವುದು ಸೂಕ್ತ. ಅಣಬೆಗಳ ಸೇವನೆಯಿಂದ ಯಾವುದಾದರೂ ತೊಂದರೆ ಕಂಡುಬಂದಲ್ಲಿ ತತ್‌ ಕ್ಷಣ ವೈದ್ಯರನ್ನು ಸಂಪರ್ಕಿಸಿ.

ಮಧುಮೇಹಿಗಳಿಗೆ ಉತ್ತಮ!
ಅಣಬೆಗಳಲ್ಲಿ ಸಕ್ಕರೆ, ಕೊಬ್ಬಿನ ಅಂಶಗಳು ಕಡಿಮೆ ಇರುವುದರಿಂದ ಮಧುಮೇಹಿಗಳು, ಹೃದ್ರೋಗ ಮೊದಲಾದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಧಾರಾಳ ನ್ನಬಹುದು. ಮಕ್ಕಳಿಗೆ ಇದು ಅತ್ಯುತ್ತಮ ಆಹಾರ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮಕ್ಕಳ ಬೆಳವಣಿಗೆಯಲ್ಲಿ ಅಣಬೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಕೃತಕ ಅಣಬೆಗಿಂತಲೂ ನೈಸರ್ಗಿಕವಾಗಿ ಸಿಗುವ ಈ ಅಣಬೆಗಳು ರುಚಿಕರ ಮತ್ತು ಆರೋಗ್ಯಕರ. ಅಣಬೆಗಳಿಂದ ಬಗೆಬಗೆಯ ಖಾದ್ಯಗಳನ್ನು ತಯಾರು ಮಾಡಬಹುದು. ಮುಖ್ಯವಾಗಿ ಅಣಬೆ ಮಸಾಲ, ಅಣಬೆ ಗಸಿ, ಅಣಬೆ ಪುಳಿಪುಂಚಿ, ಅಣಬೆ ಪದಾರ್ಥ, ಅಣಬೆ ಪಲ್ಯ, ಅಣಬೆ ಸುಕ್ಕ, ಅಣಬೆ ಸಾಂಬಾರ್‌ ಇತ್ಯಾದಿ. ಅಣಬೆಯೊಂದಿಗೆ ಹಲಸಿನ ಕಾಯಿ ಬೀಜವನ್ನು ಗುದ್ದಿ ತಯಾರಿಸಿದ ಖಾದ್ಯ ಬಲು ರುಚಿಕರ. ಅಣಬೆಯನ್ನು ಹೆಚ್ಚಾಗಿ ಸೌತೆಕಾಯಿಯ ಮಿಶ್ರಣದೊಂದಿಗೆ ಪದಾರ್ಥ ಮಾಡುತ್ತಾರೆ.

ಅಣಬೆ ಬುಡದಲ್ಲಿ ಹಾವು!
ಅಣಬೆಗಳನ್ನು ಕೀಳುವಾಗ ಎಚ್ಚರ ವಹಿಸಬೇಕು. ರಾಶಿರಾಶಿಯಾಗಿ ಹುಟ್ಟುವ ಅಣಬೆಯನ್ನು ಒಬ್ಬರೇ ಕೀಳುವುದು ಅಪಾಯಕಾರಿ. ಅಣಬೆಗಳ ಮಧ್ಯೆ ನಾಗರಹಾವು ವಾಸಿಸುತ್ತದೆ. ಮುಟ್ಟ ಅಲಂಬು (ರಾಶಿ ಅಣಬೆ) ಕಂಡರೆ ಅಕ್ಕಪಕ್ಕದವರನ್ನು ಕೂಗಿ ಕರೆದು ಎಲ್ಲರೂ ಹೋಗಿ ಕೀಳುತ್ತಾರೆ. ಇದು ತುಳುವರ ನಂಬಿಕೆಯಾದರೂ ಇದರ ಹಿಂದೆ ಜಾಗೃತಿಯ ಅರಿವು ಇದೆ. ಅಣಬೆಯನ್ನು ಹೆಚ್ಚಾಗಿ ಕ್ರಿಮಿಕೀಟಗಳು ತಿನ್ನುತ್ತವೆ. ಈ ಕೀಟಗಳನ್ನು ತಿನ್ನಲು ಹಾವುಗಳು ಅಣಬೆಯ ಬುಡದಲ್ಲಿ ಬಂದು ವಾಸಿಸುತ್ತವೆ. ಒಬ್ಬರೇ ಹೋಗಿ ಸದ್ದಿಲ್ಲದೆ ಅಣಬೆ ಕೀಳುವ ಬದಲು ಗುಂಪಾಗಿ ಹೋದರೆ ಹಾವುಗಳು ಹೆದರಿ ಓಡಿ ಹೋಗುತ್ತವೆ. ಅಣಬೆಯ ಪದಾರ್ಥಕ್ಕೆ ಬೆಂಕಿ ಯಲ್ಲಿ ಕಾಯಿಸಿದ ಕಬ್ಬಿಣವನ್ನು ಮುಳುಗಿಸಿ ತೆಗೆದರೆ ರುಚಿ ಹೆಚ್ಚುತ್ತದೆ ಎನ್ನುವ ಪ್ರತೀತಿಯೂ ಇದೆ.

ಟಾಪ್ ನ್ಯೂಸ್

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.