ಚಿತ್ರ ನಗರಿ ಸ್ಥಾಪನೆ ಉತ್ತರ ದಕ್ಷಿಣ ವಾಕ್ಸಮರ
Team Udayavani, Jul 11, 2018, 12:01 PM IST
ಬೆಂಗಳೂರು: ಬಜೆಟ್‌ನಲ್ಲಿ ಎಲ್ಲವನ್ನೂ ರಾಮನಗರಕ್ಕೆ ನೀಡಲಾಗಿದೆ ಎಂಬ ಆರೋಪ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್‌ಸಮರಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯ ಜಗದೀಶ್ ಶೆಟ್ಟರ್, ಬಹುತೇ ಎಲ್ಲಾ ಯೋಜನೆಗಳನ್ನೂ ರಾಮನಗರ, ಮಂಡ್ಯ ಹಾಸನಕ್ಕೆ ನೀಡಲಾಗಿದೆ ಎಂದು ಹೇಳಿದಾಗ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ರಾಮನಗರಕ್ಕೆ ಏನು ಕೊಟ್ಟಿದ್ದಾರೆ ಓದಿ ಹೇಳಿ ಎಂದರು.
ಮಧ್ಯಪ್ರವೇಶಿಸಿದ ಬಿಜೆಪಿಯ ಅರವಿಂದ್ ಲಿಂಬಾವಳಿ, ಬಜೆಟ್ ಪ್ರತಿ ಓದುತ್ತಿದ್ದಂತೆ ಆಕ್ರೋಶಗೊಂಡ ಶಿವಕುಮಾರ್, ಫಿಲ್ಮ್ ಶೂಟಿಂಗ್‌ಗೆ ಸಿನೆಮಾದವರು ಉತ್ತರ ಕರ್ನಾಟಕಕ್ಕೆ ಬರುತ್ತಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಗೋವಿಂದ ಕಾರಜೋಳ, ಸಿನೆಮಾ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಮೊದಲ ಶ್ರೇಷ್ಠ ನಟಿ ಅಮಿರ್ ಬಾಯಿ ಬಿಜಾಪುರದವರು, ಡಾ.ರಾಜಕುಮಾರ್‌ಗೆ ನಾಟಕದಲ್ಲಿ ಪಾತ್ರ ಕೊಟ್ಟವರು ಹಂದಿಗನೂರು ಸಿದ್ರಾಮಪ್ಪ. ರಂಗಭೂಮಿಯ ದಿಗ್ಗಜರಾದ ಬಸವರಾಜ್ ಗುಡಗೇರಿ, ಪಿ.ಬಿ.ದುತ್ತರಗಿ ಉತ್ತರ ಕರ್ನಾಟಕದವರು ಎಂದರು.
ಮಧ್ಯ ಪ್ರವೇಶಿಸಿದ ಬಿಜೆಪಿಯ ಸಿ.ಟಿ.ರವಿ ಕನ್ನಡ ಚಿತ್ರಗಳೆಲ್ಲ ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಶೂಟಿಂಗ್ ಮಾಡುತ್ತಾರೆ. ಚಿತ್ರನಗರಿ ಆ ಭಾಗದಲ್ಲಿ ಆಗಬೇಕೆಂದು ಹೇಳಿದರು. ಮಧ್ಯಪ್ರವೇಶಿಸಿದ ವಿಧಾನಸಭಾಧ್ಯಕ್ಷರು ಚರ್ಚೆಗೆ ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.