ಪಕ್ಷ ದ್ರೋಹ ಸಹಿಸುವುದಿಲ್ಲ:KPCC ಸಾರಥ್ಯ ವಹಿಸಿ ದಿನೇಶ್ ಗುಂಡೂರಾವ್
Team Udayavani, Jul 11, 2018, 5:30 PM IST
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರು ಬುಧವಾರ ಅರಮನೆ ಮೈದಾನದಲ್ಲಿ ನಡೆನ ಬೃಹತ್ ಸಮಾವೇಶದಲ್ಲಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ದಿನೇಶ್ ಗುಂಡೂರಾವ್ ‘ನಾನು ಯಾರೋಬ್ಬರ ಪರವಾಗಿರುವವನಲ್ಲ. ಪಕ್ಷದ ಪರ. ನನಗೆ ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿ ಅವರು ಅವಕಾಶ ಮಾಡಿ ಕೊಟ್ಟಿದ್ದಾರೆ. ಯಾರೇ ಆಗಲಿ ಪಕ್ಷಕ್ಕೆ ತೊಂದರೆ ನೀಡಿದರೆ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಬಿಜೆಪಿಯಿಂದಾಗಿ ಕೋಮು ಸೌಹಾರ್ದತೆಗೆ ಧಕ್ಕೆ ಬಂದಿದೆ. ವಿಚಾರವಾದಿಗಳ ಹತ್ಯೆ ನಡೆಯಿತು. ಅದನ್ನು ಪ್ರಶ್ನೆ ಮಾಡಿದವರನ್ನೇ ದಮನ ಮಾಡುವ ಸ್ಥಿತಿ ಬಂದಿದೆ. ದೊಡ್ಡ ಸವಾಲನ್ನು ನಾವೆಲ್ಲಾ ಒಟ್ಟಾಗಿ ಎದುರಿಸಬೇಕಾಗಿದೆ’ ಎಂದರು.
‘ನನಗೆ ಪರಮೇಶ್ವರ್ ಅವರು ಬೆಳೆಸಿದರು. ಜಿಲ್ಲಾಧ್ಯಕ್ಷನನ್ನಾಗಿ ಅಧಿಕಾರ ನೀಡಿದ್ದ ಅವರು ಈಗ ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಹಸ್ತಾಂತರಿಸಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಅವರು ಸೋತಿರಬಹುದು ಆದರೆ ಈಗಲೂ ಜನಪ್ರಿಯ ನಾಯಕ ಅವರ ಕಾರ್ಯಕ್ರಮಗಳನ್ನು ಜನರು ನೆನಪಿಸಿಕೊಳ್ಳುತ್ತಾರೆ’ ಎಂದರು.
ಬಿಜೆಪಿಯವರನ್ನು ಸಮರ್ಥವಾಗಿ ಎದುರಿಸಲಾಗದೆ ಸೋತೆವು
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ‘ನಾವು ಅಧಿಕಾರಕ್ಕೆ ಬರುವಲ್ಲಿ ವಿಫಲವಾದೆವು. ಪರಮೇಶ್ವರ್ ಮತ್ತು ನಾನು ಜೊತೆಯಾಗಿಯೇ ಕೆಲಸ ಮಾಡಿದ್ದೆವು. ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿತ್ತು ಆದರೆ ಸಾಧ್ಯವಾಗಿಲ್ಲ’ ಎಂದರು.
‘ಬಿಜೆಪಿಯವರು ಹಿಂದುತ್ವವನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡಿದರು. ಅದಕ್ಕೆ ಸಮರ್ಥವಾಗಿ ಕೌಂಟರ್ ನೀಡಲು ನಮಗೆ ಸಾಧ್ಯವಾಗಲಿಲ್ಲ ಹೀಗಾಗಿ ಸೋಲಬೇಕಾಯಿತು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.