ಕುಸಿಯುವ ಭೀತಿಯಲ್ಲಿ ತಾರೆಮಾರ್ ಕಿರುಸೇತುವೆ
Team Udayavani, Jul 12, 2018, 9:59 AM IST
ಎಡಪದವು: ಮೂಲರಪಟ್ಣ ಸೇತುವೆ ಕುಸಿತಗೊಂಡ ಪ್ರದೇಶದ ಸ್ವಲ್ಪ ದೂರದ ತಾರೆಮಾರ್ ಎಂಬಲ್ಲಿ ನಿರ್ಮಿಸಿರುವ ಕಿರುಸೇತುವೆಯ ಇಕ್ಕೆಲಗಳಲ್ಲಿ ಕಲ್ಲುಗಳು ಬಿದ್ದಿದ್ದು ಇದು ಕೂಡ ಕುಸಿಯುವ ಭೀತಿ ವ್ಯಕ್ತವಾಗಿದೆ. ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರೆಮಾರ್‌ನಿಂದ ಕುಕ್ಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇಲ್ಲಿ ಕಿರುಸೇತುವೆ ನಿರ್ಮಿಸಲಾಗಿದೆ.
ಈ ಕಿರುಸೇತುವೆಯ ಅಡಿಯಲ್ಲಿ ಕಾಡಿನ ಬೃಹತ್ ಪ್ರಮಾಣದ ನೀರು ವೇಗವಾಗಿ ಹರಿಯುತ್ತಿದ್ದು ಇದನ್ನು ಅಬ್ಬಿ ಎಂದು ಕರೆಯಲಾಗುತ್ತಿದೆ. ಅಲ್ಲದೆ ಇದು ಅಗಲ ಕಿರಿದಾದ ಸೇತುವೆಯಾಗಿದೆ. ಬಸ್ ಸೇರಿ ಹಲವಾರು ಘನ ವಾಹನಗಳು ಇದರಲ್ಲಿ ನಿತ್ಯ ಸಂಚರಿಸುತ್ತಿವೆ.
ತುರ್ತು ಗಮನ ಅಗತ್ಯ
ಈ ಸೇತುವೆಯ ಮುಖಾಂತರ ಗಂಜಿಮಠದಿಂದ ಕುಪ್ಪೆಪದವು, ಸೊರ್ನಾಡ್, ಮುತ್ತೂರು, ನೋಣಲ್, ಮೂಲರಪಟ್ಣ ಹೀಗೆ ಹಲವು ಪ್ರದೇಶಗಳು ಸೇರಿ ಬಂಟ್ವಾಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮೊದಲೇ ಮೂಲರಪಟ್ಣ ಸೇತುವೆ ಕುಸಿದಿದ್ದು, ಒಂದು ವೇಳೆ ಈ ಸೇತುವೆ ಕುಸಿದರೆ ಇಲ್ಲಿನ ನಾಗರಿಕರು ಸಾಕಷ್ಟು ಸಂಕಷ್ಟ ಪಡುವ ಕಾಲ ದೂರವಿಲ್ಲ. ವಾಹನ ಸಂಚರಿಸುವಾಗಲೇ ಕುಸಿದುಬಿದ್ದರೆ ಪ್ರಾಣಾಪಾಯವೂ ಸಂಭವಿಸಬಹುದು. ಆದ್ದರಿಂದ ಇಲಾಖೆ ಈ ಬಗ್ಗೆ ತುರ್ತಾಗಿ ಗಮನಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ದುರ್ಬಲ ಸಾಧ್ಯತೆ
ಇದರ ಎರಡೂ ಪಾರ್ಶ್ವದ ಕಲ್ಲುಗಳು ಕುಸಿದಿರುವುದರಿಂದ ದೃಢತೆ ಕಳೆದುಕೊಂಡಿದೆ. ಅಲ್ಲದೆ ವೇಗವಾಗಿ ನೀರು ಹರಿಯುವುದರಿಂದ ಸೇತುವೆಯ ಕಂಬಗಳಿಗೆ ಒಂದೇ ಸಮನೆ ಢಿಕ್ಕಿ ಹೊಡೆದು ಸೇತುವೆ ದುರ್ಬಲಗೊಳ್ಳುವ
ಸಾಧ್ಯತೆಯೂ ಇದೆ. ಸೇತುವೆಯ ಇಕ್ಕೆಲಗಳ ಮಣ್ಣು ಕೂಡ ಸಡಿಲಗೊಂಡಿದೆ.
ಹೊಸ ಸೇತುವೆ ನಿರ್ಮಾಣ
ಗಂಜಿಮಠದಿಂದ ಕುಪ್ಪೆಪದವು ತನಕದ ಐದು ಕಿಲೋಮೀಟರ್ ರಸ್ತೆಯನ್ನು ಮೂರು ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಲಾಗಿದ್ದು, ಈ ವೇಳೆ ಹಳೆ ಸೇತುವೆಯನ್ನು ತೆಗೆದು ಹೊಸ ಸೇತುವೆ ನಿರ್ಮಿಸಲಾಗುವುದು. ಈ ಬಗ್ಗೆ ಟೆಂಡರ್ ಕೆಲಸ ನಡೆದಿದ್ದು, ಶೀಘ್ರ ಕೆಲಸ ಆರಂಭಿಸಲಾಗುವುದು.
– ರವಿ ಕುಮಾರ್ ,
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್, ಪಿಡಬ್ಲ್ಯೂಡಿ
ಗಿರೀಶ್ ಮಳಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.