ಆರು ತಿಂಗಳಲ್ಲಿ 1,389 ಪ್ರಕರಣ ಪತ್ತೆ
Team Udayavani, Jul 12, 2018, 12:27 PM IST
ಮಂಗಳೂರು : ಪ್ರತಿ ವರ್ಷವೂ ಜಿಲ್ಲೆಯಲ್ಲೇ ಅತ್ಯಧಿಕ ಮಲೇರಿಯಾ ಪ್ರಕರಣ ಮಂಗಳೂರಿನಲ್ಲೇ ದಾಖಲಾಗುತ್ತಿವೆ. ಈ ಬಾರಿ ಜೂನ್ ವರೆಗೆ ಕಂಡು ಬಂದಿರುವ ಒಟ್ಟು 1,519 ಪ್ರಕರಣ ಪೈಕಿ 1,389 ನಗರದಿಂದಲೇ ವರದಿಯಾಗಿವೆ. ಆರೋಗ್ಯ ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ನಗರದಲ್ಲಿ ಮಲೇರಿಯಾ ಪ್ರಕರಣ ದಿನೇ ದಿನೇ ಏರುತ್ತಿರುವುದು ಕಳವಳಕಾರಿಯಾಗಿದೆ.
ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಅತೀ ಹೆಚ್ಚು ಅಂದರೆ 473 ಪ್ರಕರಣ ಕಂಡು ಬಂದಿವೆ. ಉಳಿದಂತೆ ಜನವರಿಯಲ್ಲಿ ಒಟ್ಟು 287, ಫೆಬ್ರವರಿಯಲ್ಲಿ 170, ಮಾರ್ಚ್‌ನಲ್ಲಿ 231, ಎಪ್ರಿಲ್‌ನಲ್ಲಿ 175, ಮೇಯಲ್ಲಿ 233 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಈ ಪೈಕಿ ನಗರದಲ್ಲಿ ಜನವರಿ-268, ಫೆಬ್ರವರಿ- 152, ಮಾರ್ಚ್-219, ಎಪ್ರಿಲ್-165, ಮೇ-201 ಹಾಗೂ ಜೂನ್ ತಿಂಗಳಲ್ಲಿ 284 ಪ್ರಕರಣಗಳ ಮೂಲಕ ಒಟ್ಟು 1,389 ಮಲೇರಿಯಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಮಲೇರಿಯಾದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಸಿಬಂದಿ ಮಾಹಿತಿ ನೀಡಿದ್ದಾರೆ.
ಅತ್ಯಧಿಕ ಮಲೇರಿಯಾ ಪ್ರಕರಣ
ಹೊಗೆಬಜಾರ್, ಕಂಟೋನ್ಮೆಂಟ್, ಕೋರ್ಟ್, ಸೆಂಟ್ರಲ್ ಮಾರ್ಕೆಟ್, ಬಂದರು, ಪೋರ್ಟ್, ಮಣ್ಣಗುಡ್ಡ, ದೇರೆಬೈಲ್, ಬೆಂಗ್ರೆ, ಮಿಲಾಗ್ರಿಸ್ ಮುಂತಾದೆಡೆಗಳಲ್ಲಿ ಅತೀ ಹೆಚ್ಚು ಮಲೇರಿಯಾ ವರದಿಯಾಗುತ್ತಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲಿಸುವುದು, ಮನೆಯ ಆಸುಪಾಸಿನಲ್ಲಿರುವ ಗುಂಡಿಗಳ ನೀರು ತೆಗೆಯದೇ ಇರುವುದು, ನೀರು ಹರಿದು ಹೋಗಲು ಸ್ಥಳಾವಕಾಶವಿಲ್ಲದಿರುವುದು, ಸೊಳ್ಳೆ ಪರದೆ ಬಳಸದಿರುವುದು ಮುಂತಾದ ಕಾರಣಗಳಿಂದ ಮಲೇರಿಯಾ ತಗಲುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಅಗತ್ಯ ಗಮನ ಹರಿಸಬೇಕು ಎಂದು ಇಲಾಖೆ ವಿನಂತಿಸಿದೆ.
ಗ್ರಾಮೀಣ ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ವರೆಗೆ ಒಟ್ಟು 360 ಡೆಂಗ್ಯೂ ಪ್ರಕರಣಗಳು ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.