ಮುಂದುವರಿದ ವರ್ಷಧಾರೆ: ಕೃಷಿ ಚುರುಕು
Team Udayavani, Jul 12, 2018, 3:15 PM IST
ಚಿಕ್ಕಬಳ್ಳಾಪುರ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿ ದಿದ್ದು, ಕೃಷಿ ಚಟುವಟಿಕೆಗಳು ಜಿಲ್ಲಾದ್ಯಂತ ಚುರುಕಗೊಂಡಿವೆ. ಕಳೆದ ಮೇ ತಿಂಗಳಲ್ಲಿ ಕಾಣಿಸಿಕೊಂಡಿದ್ದ ಮಳೆ ಜೂನ್ ತಿಂಗಳ ಪೂರ್ತಿ ಕಾಣಸಿಕೊಳ್ಳದೇ ರೈತರು ತೀವ್ರ ಕಂಗಾಲಾಗಿದ್ದರು. ಅದರಲ್ಲೂ ಬಿತ್ತನೆ ಸಮಯಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಈ
ಬಾರಿ ಬರ ಆವರಿಸುವ ಆತಂಕದಲ್ಲಿ ಅನ್ನದಾತರು ಇದ್ದರು.
ಕಳೆದ ಮಂಗಳವಾರದಿಂದ ಜಿಲ್ಲೆಯಲ್ಲಿ ಮಳೆರಾಯನ ಕೃಪೆ ಮುಂದುವರಿದಿದ್ದು, ಅನ್ನದಾತದಲ್ಲಿ ಸಂತಸ ತಂದಿದೆ. ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೇ ಬಿತ್ತನೆ ಪ್ರಮಾಣ ಭಾರೀ ಕುಸಿತಗೊಂಡು ಕೃಷಿ ಇಲಾಖೆ ಆತಂಕಕ್ಕೀಡಾಗಿತ್ತು. ಅದರಲ್ಲೂ ರೈತರು ಬಿತ್ತನೆಗೆ ಸಜ್ಜಾಗಿ ಮಳೆಗಾಗಿ ಎದುರು ನೋಡುತ್ತಿದ್ದರು. ಸದ್ಯ ರಾಜ್ಯ ದಲ್ಲಿ 48 ಗಂಟೆಗಳ ಉತ್ತಮ ಮಳೆಯಾಗುವ ಮುನ್ಸೂಚನೆ ಈಗಾಗಲೇ ಹವಾಮಾನ ಇಲಾಖೆ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ ಬುಧವಾರವು ಸಹ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕುಗಳಲ್ಲಿ ಮಳೆ ಬಿದ್ದಿದೆ.
ಬಿತ್ತನೆಗೆ ತೇವಾಂಶ ಅಡ್ಡಿ: ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ತೇವಾಂಶ ಹೆಚ್ಚಳದಿಂದ ಬಿತ್ತನೆ
ಕಾರ್ಯಕ್ಕೂ ತೀವ್ರ ಹಿನ್ನಡೆಯಾಗಿದೆ. ಭೂಮಿಯಲ್ಲಿ ತೇವಾಂಶ ಇದ್ದಾಗ ಬಿತ್ತನೆ ಮಾಡಿದರೆ ಬಿತ್ತನೆ ಬೀಜದ ಮೊಳಕೆ ಸರಿಯಾಗಿ ಬರುವುದಿಲ್ಲ. ಹೀಗಾಗಿ ಮಳೆಯಾಗುತ್ತಿದ್ದರೂ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಜು.10ರ ಅಂತ್ಯಕ್ಕೆ ಶೇ. 13 ಬಿತ್ತನೆ ಕಾರ್ಯಮುಗಿದಿದ್ದು, ಗುರಿ ಹೊಂದಿರುವ 1.54 ಲಕ್ಷ ಹೆಕ್ಟೇರ್ ಪೈಕಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ.
8.3 ಮಿ.ಮೀ. ಮಳೆ ದಾಖಲು: ಜಿಲ್ಲೆಯಲ್ಲಿ ಕಳೆದ ಮಂಗಳವಾರ ಉತ್ತಮ ಮಳೆಯಾಗಿದ್ದು. 8.3 ಮಿ.ಮೀ. ಮಳೆ
ಜಿಲ್ಲೆಯಲ್ಲಿ ದಾಖಲಾಗಿದೆ. ಆ ಪೈಕಿ ಬಾಗೇಪಲ್ಲಿಯಲ್ಲಿ 3.3 ಮಿ.ಮೀ., ಚಿಕ್ಕಬಳ್ಳಾಪುರದಲ್ಲಿ 14.0 ಮಿ.ಮೀ., ಚಿಂತಾಮಣಿ ತಾಲೂಕಿನಲ್ಲಿ 9.5 ಮಿ. ಮೀ., ಗೌರಿಬಿದನೂರು ತಾಲೂಕಿನಲ್ಲಿ 7.6 ಮಿ.ಮೀ., ಗುಡಿಬಂಡೆ ತಾಲೂಕಿನಲ್ಲಿ 2.7 ಮಿ.ಮೀ., ಶಿಡ್ಲಘಟ್ಟ ತಾಲೂಕಿನಲ್ಲಿ 11.0 ಮಿ.ಮೀ. ಮಳೆ ಸೇರಿ ಒಟ್ಟು ಜಿಲ್ಲೆಯಲ್ಲಿ ಸರಾಸರಿ 8.3 ಮಿ.ಮೀ. ಮಳೆ ಆಗಿದೆಯೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ್ ಬುಧವಾರ ಉದಯವಾಣಿಗೆ ತಿಳಿಸಿದರು.
ಜುಲೈ 11 ರ ಅಂತ್ಯಕ್ಕೆ 19.1 ಮಿ.ಮೀ. ಮಳೆ: ಜಿಲ್ಲೆಯಲ್ಲಿ ಕಳೆದ ಜುಲೈ 1 ರಿಂದ 11 ರ ಅಂತ್ಯಕ್ಕೆ ಒಟ್ಟು 19.1 ಮಿ.ಮೀ. ಮಳೆ ದಾಖಲುಗೊಂಡಿದೆ. ಈ ಪೈಕಿ ಬಾಗೇಪಲ್ಲಿಯಲ್ಲಿ 20.8 ಮಿ.ಮೀ.. ಚಿಕ್ಕಬಳ್ಳಾಪುರದಲ್ಲಿ 23.0 ಮಿ.ಮೀ., ಚಿಂತಾಮಣಿ ತಾಲೂಕಿನಲ್ಲಿ 18.2 ಮಿ. ಮೀ., ಗೌರಿಬಿದನೂರು ತಾಲೂಕಿನಲ್ಲಿ 15.9 ಮಿ.ಮೀ., ಗುಡಿಬಂಡೆ ತಾಲೂಕಿನಲ್ಲಿ 13.0 ಮಿ.ಮೀ., ಶಿಡ್ಲಘಟ್ಟ ತಾಲೂಕಿನಲ್ಲಿ 20.8 ಮಿ.ಮೀ. ಮಳೆ ಸೇರಿ ಒಟ್ಟು ಜಿಲ್ಲೆಯಲ್ಲಿ ಜು.11 ರ ಅಂತ್ಯಕ್ಕೆ 19.1 ಮಿ.ಮೀ. ಮಳೆ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.