ತಪ್ಪಿದ ಇಂಡಿಗೋ ವಿಮಾನಗಳ ಢಿಕ್ಕಿ: 300ಕ್ಕೂ ಅಧಿಕ ಪ್ರಯಾಣಿಕರು ಪಾರು
Team Udayavani, Jul 12, 2018, 4:11 PM IST
ಬೆಂಗಳೂರು : ಇಂಡಿಗೋ ಏರ್ ಲೈನ್ಸ್ ಗೆ ಸೇರಿದ ಎರಡು ವಿಮಾನಗಳು ಕಳೆದ ಜು.10ರಂದು ಇಲ್ಲಿನ ವಾಯು ಪ್ರದೇಶದಲ್ಲಿ ಹಾರಾಟ ನಿರತವಾಗಿದ್ದಾಗ ಕೇವಲ 200 ಗಳಿಗಿಂತ ಕಡಿಮೆ ಪರಸ್ಪರ ಅಂತರಕ್ಕೆ ಬಂದ ಕೂಡಲೇ ವಿಮಾನದೊಳಗಿನ ಅವಘಡ ಮುನ್ನೆಚ್ಚರಿಕೆ ವ್ಯವಸ್ಥೆಗಳು ಕ್ರಿಯಾಶೀಲವಾಗಿ ಪೈಲಟ್‌ಗಳನ್ನು ಜಾಗೃತಗೊಳಿಸಿದ ಪರಿಣಾಮವಾಗಿ ಗಗನದಲ್ಲಿ ಎರಡು ವಿಮಾನಗಳು ಢಿಕ್ಕಿ ಹೊಡೆಯುವ ಭಾರೀ ಸಂಭವನೀಯ ದುರಂತ ತಪ್ಪಿತೆಂದು ವರದಿಯಾಗಿದೆ.
ಒಂದು ಇಂಡಿಗೋ ವಿಮಾನ (ಹಾರಾಟ ಸಂಖ್ಯೆ 6E779) ಕೊಯಮುತ್ತೂರಿನಿಂದ ಹೈದರಾಬಾದಿಗೆ ಹಾರುತ್ತಿತ್ತು. ಅದೇ ವೇಳೆ ಇನ್ನೊಂದು ಇಂಡಿಗೋ ವಿಮಾನ (ಹಾರಾಟ ಸಂಖ್ಯೆ 6E6505) ಬೆಂಗಳೂರಿನಿಂದ ಕೊಚ್ಚಿಗೆ ಹಾರುತ್ತಿತ್ತು. ಒಂದು ಸಂದರ್ಭದಲ್ಲಿ ಈ ಎರಡು ವಿಮಾನಗಳು ಲಂಬವಾಗಿ ಕೇವಲ 200 ಅಡಿಗಳಷ್ಟು ಪರಸ್ಪರ ಸನಿಹಕ್ಕೆ ಬಂದವು. ಹೈದರಾಬಾದಿಗೆ ಹೋಗುತ್ತಿದ್ದ ವಿಮಾನದಲ್ಲಿ 162 ಪ್ರಯಾಣಿಕರು ಇದ್ದರು. ಕೊಚ್ಚಿಗೆ ಹೋಗುತ್ತಿದ್ದ ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಒಂದೊಮ್ಮೆ ಎರಡು ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದಿದ್ದರೆ ಅಪಾರ ಜೀವ ಹಾನಿ ಸಂಭವಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ.
ಒಡನೆಯೇ ಸಂಭವನೀಯ ದುರಂತವನ್ನು ಪರಿಗ್ರಹಿಸಿದ “ದಿ ಟ್ರಾಫಿಕ್ ಕೊಲೀಶನ್ ಅವಾಯ್‌ಡೆನ್ಸ್ ಸಿಸ್ಟಮ್ (ಟಿಸಿಎಎಸ್) ಕ್ರಿಯಾಶೀಲವಾಯಿತು. ಜತೆಗೆ ಎರಡೂ ವಿಮಾನಗಳಲ್ಲಿ “ರೆಸೊಲ್ಯೂಶನ್ ಅಡ್‌ವೈಸರಿ ಸಿಸ್ಟಮ್’ ಕೂಡ ಕ್ರಿಯಾಶೀಲವಾಗಿ ಮುನ್ನೆಚ್ಚರಿಕೆಯನ್ನು ನೀಡಿತು ಎಂದು ವರದಿಗಳು ತಿಳಿಸಿವೆ.
ಇದೀಗ ವಿಮಾನಾಪಘಾತಗಳ ತನಿಖಾ ಮಂಡಳಿ (ಎಎಐಬಿ) ಈ ಘಟನೆಯ ಬಗ್ಗೆ ತನಿಖೆಯನ್ನು ಆರಂಭಿಸಿದೆ. ನಾಗರಿಕ ವಾಯುಯಾನದ ಮಹಾ ನಿರ್ದೇಶಕರು ವಾಯುಯಾನ ನಿಯಂತ್ರಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.