ಕಡೆಕಾರು ಪಡುಕರೆ: ಅಪಾಯಕಾರಿ ಮಕ್ಕಳ ಪಾರ್ಕ್; ಮುಟ್ಟಿದರೆ ಚುಚ್ಚಲಿದೆ!
Team Udayavani, Jul 13, 2018, 6:00 AM IST
ಮಲ್ಪೆ: ಕಡೆಕಾರು ಪಡುಕರೆಯ ಕಡಲತೀರದಲ್ಲಿರುವ ಏಕೈಕ ಚಿಣ್ಣರ ನೆಚ್ಚಿನ ತಾಣವಾಗಿ ರೂಪುಗೊಂಡಿದ್ದ ಮಕ್ಕಳ ಪಾರ್ಕ್ ಸರಿಯಾದ ನಿರ್ವಹಣೆಯಿಲ್ಲದೆ ಇದೀಗ ನಿರುಪಯುಕ್ತವಾಗಿದ್ದು, ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಸ್ಥಿತಿಯಲ್ಲಿದೆ.
ಮುಟ್ಟಿದರೆ ಚುಚ್ಚುತ್ತದೆ
ಕಳೆದ ಮೂರು ವರ್ಷದಿಂದ ಮಕ್ಕಳ ಆಟದ ಪರಿಕರಗಳೆಲ್ಲ ದುಸ್ಥಿತಿಯಲ್ಲಿದೆ. ಜೋಕಾಲಿಗಳು ಅಪಾಯಕಾರಿಯಾಗಿ ನೇತಾಡುತ್ತಿವೆ. ತುಕ್ಕು ಹಿಡಿದ ಜಾರು ಬಂಡಿಗಳು ಅರ್ಧಕ್ಕೆ ತುಂಡಾಗಿ ಮುಟ್ಟಿದರೆ ಚುಚ್ಚಿಕೊಳ್ಳುವಂತಿದೆ. ಉಯ್ನಾಲೆಯ ಕಂಬ, ಪೀಠಗಳು ಮುರಿದಿವೆ. ಕಬ್ಬಿಣದ ಕಂಬಿಗಳು ಕಿತ್ತು ಹೊರಬಂದಿದ್ದು ಮಕ್ಕಳನ್ನು ಘಾಸಿಗೊಳಿಸುವಂತಿವೆ. ಜಾರುಬಂಡಿ ಏರುವ ಏಣಿ ಮುರಿದಿದೆ. ಮಕ್ಕಳು ಮುರಿದ ಪರಿಕರಗಳಲ್ಲೇ ಆಟವಾಡಿದರೆ ಅಪಾಯವನ್ನು ಮೈಮೇಲೆ ಎಳೆದು ಕೊಳ್ಳುವ ಸ್ಥಿತಿ ಇದೆ.
7 ವರ್ಷದ ಹಿಂದೆ ಸ್ಥಾಪನೆ
7 ವರ್ಷಗಳ ಹಿಂದೆ ಅಂದಿನ ಜಿ.ಪಂ. ಸದಸ್ಯರಾಗಿದ್ದ ದಿವಾಕರ ಕುಂದರ್ ಅವರ ಮುತುವರ್ಜಿಯಿಂದ ಜಿ.ಪಂ. ಅನುದಾನದಲ್ಲಿ ಇಲ್ಲಿನ ಕಡೆಕಾರು ಯುವಕ ಮಂಡಲದ ವೇದಿಕೆಯ ಬಳಿ ನಿರ್ಮಾಣಗೊಳಿಸಲಾಗಿತ್ತು. ಉಯ್ನಾಲೆ, ಜಾರುಬಂಡಿ, ತಿರುಗು ಬಂಡಿ, ಸಹಿತ ವಿವಿಧ ಬಗೆಯ ಆಟಿಕೆಗಳಿಂದಾಗಿ ಸಂಜೆ ವೇಳೆ ಈ ಪರಿಸರದ ಮಕ್ಕಳನ್ನು ಈ ಉದ್ಯಾನವನ ಆಕರ್ಷಿಸಿತ್ತು.
ಇದೀಗ ಮುರಿದ ಹಾಗೂ ಶಿಥಿಲಾವಸ್ಥೆಯಲ್ಲಿನ ಪರಿಕರಗಳನ್ನು ಇನ್ನೂ ದುರಸ್ತಿ ಮಾಡಿಲ್ಲ. ನಿರ್ವಹಣೆ ಮಾಡಬೇಕಾಗಿದ್ದ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿರುವ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ.
ಆಟಿಕೆ ಸರಿಪಡಿಸಬೇಕು
ಪಡುಕರೆಯ ಏಕಮಾತ್ರ ಬಾಲವನವನ್ನು ಸಂಪೂರ್ಣ ದುರಸ್ಥಿಗೊಳಿಸಿ, ಮಕ್ಕಳ ಮನರಂಜನೆಯ ಆಟಿಕೆ ಸಾಮಾನುಗಳನ್ನು ಸರಿಪಡಿಸಬೇಕು. ಜಿ.ಪಂ. ಸದಸ್ಯರ ಗಮನಕ್ಕೆ ತಂದು ಅನುದಾನವನ್ನು ಮೀಸಲಿರಿಸಿ ದುರಸ್ಥಿ ಪಡಿಸುವಂತೆ ಪಡುಕರೆ ಯುವಕ ಮಂಡಲದ ಮೂಲಕ ಮನವಿಯನ್ನು ಮಾಡಲಾಗಿದೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಮಾಡಿ ಮಕ್ಕಳಿಗೆ ಉಪಯೋಗವಾಗುವಂತೆ ಮಾಡಬೇಕಾಗಿದೆ.
– ಸುರೇಶ್ ಮೆಂಡನ್, ಅಧ್ಯಕ್ಷರು ಪಡುಕರೆ
ಯುವಕ ಮಂಡಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.