ಐಶಾರೇ ಐಶಾ
Team Udayavani, Jul 13, 2018, 6:00 AM IST
ಈಕೆ ಬಾಲಿವುಡ್‌ನ ಸಿಡಿಲಮರಿ. ತನಗೆ ಸರಿ ಕಂಡದ್ದನ್ನು ಮಾಡುವ, ಮಾತನಾಡುವ ಗುಣವೇ ಈಕೆಯ ಪ್ಲಸ್‌ಪಾಯಿಂಟ್ ಕೂಡ ಹೌದು, ಅಂತೆಯೇ ಮೈನಸ್ ಪಾಯಿಂಟ್ ಕೂಡ ಹೌದು. ಹಾಗೆಂದು, ಇದಕ್ಕೆಲ್ಲ ಈಕೆ ತಲೆಕೆಡಿಸಿಕೊಂಡವಳಲ್ಲ. ಯಾರಪ್ಪಾ ಬಾಲಿವುಡ್‌ನಲ್ಲಿ ಇಷ್ಟು ದಿಟ್ಟ ಹೆಣ್ಣಮಗಳು ಎಂದುಕೊಂಡಿರಾ? ಈಕೆಯೇನೂ ಈಗಾಗಲೇ ಹತ್ತಾರು ಚಿತ್ರಗಳಲ್ಲಿ ನಟಿಸಿ ಗಟ್ಟಿಯಾಗಿ ನೆಲೆಕಂಡಿರುವ ಹೀರೋಯಿನ್ ಅಲ್ಲ. ಇನ್ನೂ ಬಾಲಿವುಡ್ ಅಂಗಳದಲ್ಲಿ ಅಂಬೆಗಾಲಿಡುತ್ತಿರುವ ಶಿಶು. ಈಕೆಯೇ ಐಶಾ ಶರ್ಮ.
ಇನ್ನೂ ಹತ್ತಿರದ ಪರಿಚಯ ಹೇಳಬೇಕೆಂದರೆ ನಟಿ ನೇಹಾ ಶರ್ಮಳ ತಂಗಿ. ಅಕ್ಕ ನಯನಾಜೂಕಿನ, ತಗ್ಗಿಬಗ್ಗಿ ನಡೆಯುವ ಸ್ವಭಾದವಳಾದರೆ, ತಂಗಿ ಇದಕ್ಕೆ ತದ್ವಿರುದ್ಧ ಸ್ವಭಾದವಳು. ಸತ್ಯಮೇವ ಜಯತೇ ಚಿತ್ರದಲ್ಲಿ ಜಾನ್ ಅಬ್ರಹಾಂಗೆ ನಾಯಕಿಯಾಗಿ ನಟಿಸುತ್ತಿರುವ ಐಶಾ ತನ್ನ ಬೋಲ್ಡ್ ಸ್ವಭಾವದಿಂದಲೇ ಹೆಚ್ಚು ಪ್ರಸಿದ್ಧಿಯಾಗಿದ್ದಾಳೆ. ದಿಟ್ಟತನ ಎನ್ನುವುದು ಆಕೆಗೆ ರಕ್ತದಲ್ಲೇ ಬಂದಿದೆಯಂತೆ. ಅವಳ ತಂದೆ ಬಿಹಾರದ ಪ್ರಭಾವಿ ರಾಜಕಾರಣಿ. ತಂದೆಯ ನಾಯಕತ್ವ ಗುಣ ತನ್ನಲ್ಲಿರುವುದರಿಂದ ತಾನು ಹೀಗಿದ್ದೇನೆ ಎನ್ನುವುದು ಐಶಾ ನೀಡುವ ವಿವರಣೆ. ಚಿತ್ರರಂಗಕ್ಕೆ ಬರುವ ಮುಂಚೆ ಐಶಾ ಕೆಲ ಸಮಯ ಮಾಡೆಲ್ ಆಗಿದ್ದಳು. ಒಂದು ಐಟಮ್ ಹಾಡಿಗೆ ಕುಣಿದಿರುವುದು ಬಿಟ್ಟರೆ ಉಳಿದಂತೆ ಐಶಾಳ ಸಿನೆಮಾ ಜ್ಞಾನ ಏನೇನೂ ಇಲ್ಲ. ಆದರೂ ಸತ್ಯಮೇವ ಜಯತೇಗೆ ನಾಯಕಿಯಾಗುವ ಅದೃಷ್ಟ ಪಡೆದಿದ್ದಾಳೆ. ಇದಕ್ಕೆ ಕಾರಣ ತನ್ನ ಬೋಲ್ಡ್ ಸ್ವಭಾವ ಎನ್ನುವುದು ಐಶಾಳ ನಂಬಿಕೆ. ಚಿತ್ರದ ಪಾತ್ರವೂ ತನ್ನಂತೆ ಸಮಾಜಕ್ಕೆ ಮಿಡಿಯುವ, ಸಮಸ್ಯೆಗಳನ್ನು ದಿಟ್ಟವಾಗಿ ಬಗೆಹರಿಸುವ ಹುಡುಗಿಯದ್ದು. ಹೀಗೆ ನನ್ನ ಸ್ವಭಾವಕ್ಕೆ ಪಾತ್ರ ಹೊಂದಿಕೆಯಾಗುತ್ತದೆ ಎನ್ನುವ ಕಾರಣಕ್ಕೆ ಅವಳು ಈ ಚಿತ್ರವನ್ನು ಒಪ್ಪಿಕೊಂಡಿದ್ದಾಳಂತೆ. ಅಕ್ಕ ನೇಹಾ ಶರ್ಮ ಇನ್ನೂ ಆರಕ್ಕೇರದೆ ಮೂರಕ್ಕಿಳಿಯದೆ ಅತಂತ್ರ ಸ್ಥಿತಿಯಲ್ಲಿದ್ದಾಳೆ. ತಂಗಿಗೂ ಅದೇ ಸ್ಥಿತಿ ಬಾರದಿರಲಿ ಎನ್ನುವುದಷ್ಟೆ ಹಾರೈಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.