ಎಸ್ಟೇಟ್‌ನಲ್ಲಿ ಹಾಡು-ಪಾಡು
Team Udayavani, Jul 13, 2018, 6:00 AM IST
“ಇಲ್ಲಿ ನಂದೇನು ಇಲ್ಲ. ಎಲ್ಲವೂ ಚಿತ್ರತಂಡದ್ದೇ …’
ಹಾಗಂತ ಚಿತ್ರದ ಸಂಪೂರ್ಣ ಕ್ರೆಡಿಟ್‌ನ್ನು ಚಿತ್ರತಂಡದವರಿಗೇ ನೀಡಿಬಿಟ್ಟರು ನಿರ್ಮಾಪಕ ಕುಮಾರ್. “ಮೂರ್ಕಲ್ ಎಸ್ಟೇಟ್’ ಎಂಬ ಚಿತ್ರ ಮಾಡಿದ್ದಾರೆ ಅವರು. ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದು, ಇತ್ತೀಚೆಗೆ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಹಿರಿಯ ನಟ ದೊಡ್ಡಣ್ಣ ಮತ್ತು “ಟಗರು’ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಬಂದಿದ್ದರು. ಜೊತೆಗೆ “ಮೆರವಣಿಗೆ’ ನಿರ್ಮಾಪಕ ಕಾಂತರಾಜ್ ಸೇರಿದಂತೆ ಇನ್ನಷ್ಟು ಜನ ವೇದಿಕೆಯ ಮೇಲಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಗೊಂಡವು.
ದೊಡ್ಡಣ್ಣ ಅವರನ್ನು ಅಂದು ಸಮಾರಂಭಕ್ಕೆ ಬರುವಂತೆ ಮಾಡಿದ್ದು ಭದ್ರಾವತಿ ಎಂಬ ಊರು. ನಿರ್ಮಾಪಕರು ಅದೇ ಊರಿನವರು. ಇನ್ನು ದೊಡ್ಡಣ್ಣ ಸಹ ಅಲ್ಲೇ ಕೆಲಸ ಮಾಡಿದ್ದವರು. ಅದೇ ಪ್ರೀತಿಯಿಂದ ಬಂದಿದ್ದ ದೊಡ್ಡಣ್ಣ, “ಇವತ್ತು ಹೊಸ ಪೀಳಿಗೆ ಹೊಸ ಹೊಸ ಚಿತ್ರಗಳನ್ನು ಮಾಡುತ್ತಿದೆ. ಅನಕೃ ಅವರು ಹೇಳಿದಂತೆ, ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ, ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ. ಇವತ್ತು ಬಹಳಷ್ಟು ಹೊಸಬರು ಚಿತ್ರರಂಗದಲ್ಲಿ ಏನೋ ಸಾಧನೆ ಮಾಡಬೇಕು ಅಂತ ಆಕಾಂಕ್ಷೆ ಇಟ್ಟುಕೊಂಡು ಬರುತ್ತಾರೆ. ಬರೀ ಆಕಾಂಕ್ಷೆ ಇದ್ದರೆ ಗುರಿ ಮುಟ್ಟುವುದಕ್ಕೆ ಸಾಧ್ಯವಿಲ್ಲ. ಸಹನೆ ಮತ್ತು ಸಾಧನೆ ಇದ್ದರೆ ಮಾತ್ರ ಗುರಿ ಮುಟ್ಟೋಕೆ ಸಾಧ್ಯ. ಡಾ ರಾಜಕುಮಾರ್ ಅವರಿಂದ ಪ್ರತಿಯೊಬ್ಬರೂ ಸರಳತೆ ಮತ್ತು ವಿನಯವನ್ನು ಕಲಿಯಬೇಕು. ಹಣ ಮತ್ತು ಕೀರ್ತಿ ಬಂದಾಗ ಬೀಗಬೇಡಿ, ಬಗ್ಗಿ ನಡಿಯಿರಿ’ ಎಂದು ಹಿತವಚನ ನುಡಿದರು. ಮಾತು ಮುಗಿಸುವ ಮುನ್ನ, “ಚಿತ್ರ ಚೆನ್ನಾಗಿ ಓಡಿ, ಇದೇ ಕಲಾವಿದರ ಸಂಘದ ಸಭಾಂಗಣದಲ್ಲೇ ನೂರು ದಿನದ ಸಂಭ್ರಮವಾಚರಿಸಿ’ ಎಂದರು. ಕೆ.ಪಿ. ಶ್ರೀಕಾಂತ್ ಮತ್ತು ಕಾಂತರಾಜ್ ಸಹ ಚಿತ್ರತಂಡದವರಿಗೆ ಶುಭ ಕೋರಿದರು. ನಿರ್ದೇಶಕ ಪ್ರಮೋದ್ ಕುಮಾರ್‌ಗೆ ಇದು ಮೊದಲ ಚಿತ್ರ. ಇಡೀ ತಂಡದ ಸಹಕಾರದಿಂದ ಚಿತ್ರ ಮಾಡಿದ್ದೇವೆ. “ಇದೊಂದು ದೆವ್ವದ ಸಿನಿಮಾ ಅನ್ನೋಕ್ಕಿಂತ, ಎನರ್ಜಿ ಕುರಿತ ಸಿನಿಮಾ. ಕೆಟ್ಟ ಎನರ್ಜಿಯಿಂದ ಏನೆಲ್ಲಾ ಆಗುತ್ತದೆ ಎನ್ನುವ ಸಿನಿಮಾ. ನಿರ್ಮಾಪಕ ಕುಮಾರ್ ಅವರಿಗೆ ಕಥೆ ಹೇಳಿದೆ. ಅವರು ಇಷ್ಟಪಟ್ಟು ಚಿತ್ರ ಮಾಡೋದಕ್ಕೆ ಮುಂದೆ ಬಂದರು. ಚಿತ್ರದಲ್ಲಿ ನಾಲ್ಕು ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದೇನೆ. ಎರಡು ಗಂಟೆ ಅವಧಿಯ ಸಿನಿಮಾ ಇದು’ ಎಂದು ಚಿತ್ರದ ಬಗ್ಗೆ ಹೇಳಿದರು.
ನಿರ್ಮಾಪಕ ಕುಮಾರ್ ಕೆಲವು ವಿಷಯಗಳನ್ನು ನಂಬುತ್ತಿರಲಿಲ್ಲವಂತೆ. ಆದರೆ, ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಾದ ಘಟನೆಗಳಿಂದ ನಂಬಬೇಕಾಯಿತಂತೆ. “ಚಿತ್ರೀಕರಣ ಸಮಯದಲ್ಲಿ ತುಂಬಾ ಸಮಸ್ಯೆ ಎದುರಿಸಿದ್ದೇವೆ. ಬ್ಲಾಸ್ಟ್ ಆಗಿ ನಾಯಕಿಗೆ ಗಾಯವಾಗಿತ್ತು. ಆದರೂ ಚಿತ್ರ ಚೆನ್ನಾಗಿ ಬಂದಿದೆ. ಇಲ್ಲಿ ನಂದೇನೂ ಇಲ್ಲ. ಎಲ್ಲಾ ಕ್ರೆಡಿಟ್ಟು ಚಿತ್ರತಂಡಕ್ಕೇ ಹೋಗಬೇಕು’ ಎಂದು ಮಾತು ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.