ಡಬ್ಬಿಂಗ್‌ ರೈಟ್ಸ್‌ ಎದ್ದಾಯ್ತು


Team Udayavani, Jul 13, 2018, 6:00 AM IST

b-38.jpg

ನಿರ್ಮಾಪಕ ದೊಡ್ಡ ಮಟ್ಟದಲ್ಲಿ ನಂಬಿಕೊಂಡಿದ್ದ, “ಮಿನಿಮಮ್‌ ಗ್ಯಾರಂಟಿ’ ಎಂದುಕೊಂಡಿದ್ದ ಟಿವಿ ರೈಟ್ಸ್‌ ಈಗ ಕೈಗೆಟುಕದ ದ್ರಾಕ್ಷಿ. ಆಡಿಯೋದಿಂದ ಮೂರು ರೂಪಾಯಿಯೂ ಹುಟ್ಟಲ್ಲ ಅನ್ನೋ ಬೇಸರ, ಜನ ಥಿಯೇಟರ್‌ಗೆ ಬರಲ್ಲ ಎಂಬ ಕೂಗು ಮತ್ತೂಂದು ಕಡೆ. ಮಳೆ, ಗಾಳಿ, ಮಕ್ಕಳ ಪರೀಕ್ಷೆ, ಕ್ರಿಕೆಟ್‌ … ಇನ್ನೊಂದು-ಮತ್ತೂಂದುಗಳಿಂದಲೂ ಸಿನಿಮಾಗಳಿಗೆ ತೊಂದರೆಯಾಗುತ್ತದೆ ಎಂಬ ಕೂಗು ಬೇರೆ. ಎಲ್ಲದರ ಎಫೆಕ್ಟ್ ಸಿನಿಮಾ ಮೇಲೆ ಕೋಟಿ ಸುರಿದ ನಿರ್ಮಾಪಕ ನಿಗಾಗುತ್ತಿದೆ. ಈ ಮೂಲಕ ನಿರ್ಮಾಪಕನ ವ್ಯಾಪಾರದ ಪ್ರಮುಖ ಬಾಗಿಲುಗಳು ಮುಚ್ಚುತ್ತಿವೆ ಎಂದರೆ ತಪ್ಪಲ್ಲ. ಆದರೆ, ಎಲ್ಲಾ ಬಾಗಿಲುಗಳು ಮುಚ್ಚಿದಾಗ ದೇವರು ಇನ್ನೆಲ್ಲೋ ಒಂದು ಕಿಂಡಿಯ ಮೂಲಕ ಬೆಳಕು ಕರುಣಿಸುತ್ತಾನೆ ಎಂಬ ಮಾತಿನಂತೆಯೇ ಸದ್ಯ ನಿರ್ಮಾಪಕರಿಗೆ ಆಸರೆಯಾಗಿರೋದು ಡಬ್ಬಿಂಗ್‌ ರೈಟ್ಸ್‌.

ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ, ಹೊಸ ಚಿತ್ರತಂಡಗಳ ಮೊಗದಲ್ಲಿ ನಗು ಮೂಡಿಸುತ್ತಿರುವುದು ಹಿಂದಿ ಡಬ್ಬಿಂಗ್‌ ರೈಟ್ಸ್‌. ಹೌದು, ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಹುತೇಕ ಚಿತ್ರಗಳ ಹಿಂದಿ ಡಬ್ಬಿಂಗ್‌ ರೈಟ್ಸ್‌ ಮಾರಾಟವಾಗಿವೆ. ಕೆಲವು ವರ್ಷಗಳ ಹಿಂದೆ ಕೇವಲ ಸ್ಟಾರ್‌ ಸಿನಿಮಾಗಳ ಹಿಂದಿ ಡಬ್ಬಿಂಗ್‌ ರೈಟ್ಸ್‌ ಅಷ್ಟೇ ಮಾರಾಟವಾಗುತ್ತಿತ್ತು. ಆದರೆ, ಈಗ ಕನ್ನಡ ಚಿತ್ರರಂಗದಲ್ಲಿ ಹಿಂದಿ ಡಬ್ಬಿಂಗ್‌ ರೈಟ್ಸ್‌ ನಿರ್ಮಾಪಕನ ವ್ಯಾಪಾರದ ಒಂದು ಪ್ರಮುಖ ಮೂಲವಾಗಿದೆ. ಅದು ಹೊಸಬರಿಂದ ಹಿಡಿದು ಸ್ಟಾರ್‌ಗಳವರೆಗೂ. ಮೊದಲೇ ಹೇಳಿದಂತೆ ತೆಲುಗು-ತಮಿಳಿಗಿಂತ ಹಿಂದಿ ಭಾಷೆಯ ಡಬ್ಬಿಂಗ್‌ ರೈಟ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ ಮತ್ತು ಇವತ್ತು ಚಾಲ್ತಿಯಲ್ಲಿರೋದು ಕೂಡಾ ಅದೇ. ಸಿನಿಮಾ ಆರಂಭವಾಗುತ್ತಿದ್ದಂತೆ ಹಿಂದಿ ಡಬ್ಬಿಂಗ್‌ ರೈಟ್ಸ್‌ನ ಮಾತುಕತೆ ನಡೆಯುತ್ತದೆ ಮತ್ತು ಬಹುತೇಕ ನಿರ್ಮಾಪಕರು ಮಾರಾಟ ಮಾಡುತ್ತಾರೆ ಕೂಡಾ. 

ಸ್ಟಾರ್‌ಗಳಿಗೆ ಕೋಟಿ-ಹೊಸಬರಿಗೆ ಲಕ್ಷ: ಕನ್ನಡ ಚಿತ್ರಗಳ ಹಿಂದಿ ಡಬ್ಬಿಂಗ್‌ ರೈಟ್ಸ್‌ಗಳು ಕೋಟಿ ಲೆಕ್ಕದಲ್ಲಿ ಮಾರಾಟವಾಗುತ್ತಿವೆ. ಅದರಲ್ಲೂ ಸ್ಟಾರ್‌ ಸಿನಿಮಾ ಮಾಡುವವರಿಗೆ ಇದೊಂದು ದೊಡ್ಡ ಮೊತ್ತದ ಆದಾಯ ಎಂದರೆ ತಪ್ಪಲ್ಲ. ಅದರಲ್ಲೂ ಹೆಚ್ಚು ಜನಪ್ರಿಯತೆ ಹೊಂದಿರುವ, ಪರಭಾಷೆಯ ಮಂದಿಗೂ ಪರಿಚಿತನಾಗಿರುವ ಸ್ಟಾರ್‌ ಆದರೆ, ವ್ಯಾಪಾರ ವಹಿವಾಟು ಇನ್ನೂ ಜೋರಾಗಿರುತ್ತದೆ. ಸುದೀಪ್‌, ದರ್ಶನ್‌, ಪುನೀತ್‌, ಯಶ್‌, ಶಿವರಾಜ್‌ಕುಮಾರ್‌ನಂತಹ ಸ್ಟಾರ್‌ಗಳ ಸಿನಿಮಾಗಳ ಡಬ್ಬಿಂಗ್‌ ರೈಟ್ಸ್‌ ಕೋಟಿ ಮೊತ್ತಕ್ಕೆ ಮಾರಾಟವಾಗುತ್ತವೆ. ಹಿಂದಿ ಡಬ್ಬಿಂಗ್‌ ವಿಚಾರದಲ್ಲಿ ಸುದೀಪ್‌, ದರ್ಶನ್‌, ಪುನೀತ್‌ ಅವರ ಚಿತ್ರಗಳು ಹೆಚ್ಚು ಬೇಡಿಕೆಯಲ್ಲಿವೆ. ಐದಾರು ಕೋಟಿಗೂ ಅಧಿಕ ಮೊತ್ತದಲ್ಲಿ ಇವರ ಸಿನಿಮಾಗಳ ಹಿಂದಿ ಡಬ್ಬಿಂಗ್‌ 
ರೈಟ್ಸ್‌ಗಳು ಮಾರಾಟವಾಗುತ್ತಿವೆ. ಸ್ಟಾರ್‌ಗಳಿಗೆ ಕೋಟಿಯಾದರೆ, ಇತರ ನಟರ ಡಬ್ಬಿಂಗ್‌ ರೈಟ್ಸ್‌ಗಳು ಕೂಡಾ ಲಕ್ಷ ಬೆಲೆಗೆ ಮಾರಾಟವಾಗುವಲ್ಲಿ ಹಿಂದೆ ಬಿದ್ದಿಲ್ಲ.

15 ಲಕ್ಷದಿಂದ ಆರಂಭವಾಗಿ ಕೋಟಿವರೆಗೆ ಡಬ್ಬಿಂಗ್‌ ರೈಟ್ಸ್‌ ಗಳು ಮಾರಾಟವಾಗುತ್ತಿವೆ. ನೇರವಾಗಿ ಮುಂಬೈನಿಂದ ಬಂದು ಬಿಝಿನೆಸ್‌ ಮಾಡಿಕೊಂಡು ಹೋಗುತ್ತಾರೆ. ಹಾಗೆ ಡಬ್‌ ಆದ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾಗುತ್ತವೆ. ಇತ್ತೀಚೆಗೆ ಸುದೀಪ್‌ ಅವರ “ಕೋಟಿಗೊಬ್ಬ-2′ ಚಿತ್ರವು “ಗೋಲಿಮಾರ್‌-2′ ಎಂಬ ಹೆಸರಿನಲ್ಲಿ ಡಬ್‌ ಆಗಿ ಟಿವಿಯಲ್ಲಿ ಪ್ರಸಾರವಾಗಿತ್ತು. 

ಆ್ಯಕ್ಷನ್‌ಗೆ ಡಿಮ್ಯಾಂಡ್‌: ಟಿವಿ ರೈಟ್ಸ್‌ ಪಡೆದುಕೊಳ್ಳುವಾಗ ಒಂದಷ್ಟು ನಿಯಮಗಳು ಅನ್ವಯವಾಗುತ್ತದೆ. “ಎ’ ಪ್ರಮಾಣ ಪತ್ರ ಇರಬಾರದು, ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತಿರಬೇಕೆಂಬ ನಿಯಮಗಳಿರುತ್ತದೆ. ಹಿಂದಿ ಡಬ್ಬಿಂಗ್‌ ರೈಟ್ಸ್‌ ಮಾರಾಟವಾಗುವಲ್ಲೂ ಒಂದಷ್ಟು ಅಲಿಖೀತ ಷರತ್ತುಗಳು ಅನ್ವಯವಾಗುತ್ತದೆ. ಅದರಲ್ಲಿ ಮುಖ್ಯವಾದುದು ಆ್ಯಕ್ಷನ್‌. ಸಿನಿಮಾದಲ್ಲಿ ಭರ್ಜರಿಯಾದ ಫೈಟ್‌, ರಗಡ್‌ ಲೊಕೇಶನ್‌ ಇದ್ದರೆ ನಿಮ್ಮ ಸಿನಿಮಾದ ಹಿಂದಿ ಡಬ್ಬಿಂಗ್‌ ರೈಟ್ಸ್‌ಗೆ ಹೆಚ್ಚಿನ ಬೇಡಿಕೆ ಬರುತ್ತದೆ. ನಿಮ್ಮ ಸಿನಿಮಾದಲ್ಲಿ ಭರ್ಜರಿಯಾದ ಫೈಟ್‌ಗಳೆಷ್ಟಿವೆ ಅನ್ನೋದರ ಮೇಲೆ ನಿಮ್ಮ ಡಬ್ಬಿಂಗ್‌ ರೈಟ್ಸ್‌ ಏರುತ್ತದೆ. ಇದರ ಜೊತೆಗೆ ಪಂಚಿಂಗ್‌ ಡೈಲಾಗ್‌, ಗ್ಲಾಮರಸ್‌, ಅದ್ಭುತ ಲೊಕೇಶನ್‌ಗಳು ಹಿಂದಿ ಡಬ್ಬಿಂಗ್‌ ರೈಟ್ಸ್‌ ಬೆಲೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಡಬ್ಬಿಂಗ್‌ ರೈಟ್ಸ್‌ ನಿರ್ಮಾಪಕರಿಗೆ ಹಣಕಾಸಿನ ನೆರವು ನೀಡುತ್ತಿದೆ ನಿಜ. ಆದರೆ, ಇದರ ಪರಿಣಾಮವಾಗಿ ಸಿನಿಮಾಗಳು ಅನಾವಶ್ಯಕವಾಗಿ ಹೆಚ್ಚು ಕಮರ್ಷಿಯಲ್‌ ಆಗುತ್ತಿವೆ. ಫೈಟ್‌ ಅಗತ್ಯವೇ ಇಲ್ಲದ ಕಥೆಗಳಿಗೆ ಫೈಟ್‌ ಇಡುವಂತೆ, ಒಂದು ಫೈಟ್‌ ಇರುವ ಜಾಗಕ್ಕೆ ಮೂರು ಫೈಟ್‌ ಸೇರಿಸುವಂತೆ ಮಾಡುವಲ್ಲಿ ಹಿಂದಿ ಡಬ್ಬಿಂಗ್‌ ರೈಟ್ಸ್‌ ಪಾತ್ರವೂ ಇದೆ ಎಂದರೆ ತಪ್ಪಲ್ಲ. ಅತ್ತ ಕಡೆ ಟಿವಿ ರೈಟ್ಸ್‌ ಹೋಗದೇ, ಇತ್ತ ಕಡೆ ಪ್ರೇಕ್ಷಕನೂ ಬಾರದೇ ಕೈ ಸುಟ್ಟುಕೊಳ್ಳುವ ಬದಲು ಮೂರು ಫೈಟ್‌ ಸೇರಿಸಿ 50-60 ಲಕ್ಷ ಡಬ್ಬಿಂಗ್‌ ರೈಟ್ಸ್‌ ಆದರೂ ಗಿಟ್ಟಿಸಿಕೊಳ್ಳುವ ಎಂಬ ಲೆಕ್ಕಾಚಾರಕ್ಕೆ ನಿರ್ಮಾಪಕರು ಇಳಿದಿರುವುದು ಸುಳ್ಳಲ್ಲ.

ಈಗಾಗಲೇ ಸ್ಟಾರ್‌ಗಳ ಎಲ್ಲಾ ಸಿನಿಮಾಗಳ ಡಬ್ಬಿಂಗ್‌ ರೈಟ್ಸ್‌ ಮಾರಾಟವಾಗಿವೆ. ಜೊತೆಗೆ  “ಧೈರ್ಯಂ’, “ಪ್ರಭುತ್ವ’, “ರಾಜ ಲವ್ಸ್‌ ರಾಧೆ’, “ಕನಕ’, “ಕ್ರ್ಯಾಕ್‌’, “ಟೈಸನ್‌’, “ಮರಿ ಟೈಗರ್‌’, “ರಗಡ್‌’, “ಸಿಎಂ’, “ಫೈಟರ್‌’  … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಹಿಂದಿ ಡಬ್ಬಿಂಗ್‌ ರೈಟ್ಸ್‌ ಮಾರಾಟವಾಗಿರುವ ಚಿತ್ರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕನ್ನಡ ಸಿನಿಮಾಗಳ ಹಿಂದಿ ಡಬ್ಬಿಂಗ್‌ ರೈಟ್ಸ್‌ ಮಾರಾಟವಾಗುತ್ತಿರೋದು ಒಂದು ಉತ್ತಮ ಬೆಳವಣಿಗೆ ಎಂಬುದು ನಿರ್ಮಾಪಕ ಕಂ ವಿತರಕ ಜಾಕ್‌ ಮಂಜು ಅವರ ಮಾತು. “ಹಿಂದಿ ಡಬ್ಬಿಂಗ್‌ ರೈಟ್ಸ್‌ನಿಂದ ಅದೆಷ್ಟೋ ನಿರ್ಮಾಪಕರಿಗೆ ಸಹಾಯವಾಗುತ್ತಿದೆ. ಇವತ್ತು ಟಿವಿ ರೈಟ್ಸ್‌ಗೆ ಬೇಡಿಕೆ ಕಡಿಮೆಯಾಗಿರುವಾಗ ಡಬ್ಬಿಂಗ್‌ ರೈಟ್ಸ್‌ ಮೂಲಕ ಕನ್ನಡ ಚಿತ್ರ ನಿರ್ಮಾಪಕರಿಗೆ ಸಹಾಯವಾಗುತ್ತಿದೆ’ ಎನ್ನುತ್ತಾರೆ. ನಟ ವಿನೋದ್‌ ಪ್ರಭಾಕರ್‌ ಕೂಡಾ ಹಿಂದಿ ಡಬ್ಬಿಂಗ್‌ ರೈಟ್ಸ್‌ನಿಂದ ಖುಷಿಯಾಗಿದ್ದಾರೆ. “ನಾನು ಆರಂಭದಿಂದ ಆ್ಯಕ್ಷನ್‌ ಸಿನಿಮಾ ಮಾಡಿಕೊಂಡು ಬಂದಿರುವುದರಿಂದ ಅದರ ಪ್ರತಿಫ‌ಲ ಇವತ್ತು ಸಿಗುತ್ತಿದೆ. ಇವತ್ತು ನನ್ನ ಸಿನಿಮಾಗಳ ಹಿಂದಿ ಡಬ್ಬಿಂಗ್‌ ರೈಟ್ಸ್‌ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿರುವುದು ಖುಷಿಯ ವಿಚಾರ. ಡಬ್ಬಿಂಗ್‌ ರೈಟ್ಸ್‌ನ ಅರ್ಧದಷ್ಟು ಟಿವಿ ರೈಟ್ಸ್‌ ಸಿಗುತ್ತಿದೆ’ ಎನ್ನುತ್ತಾರೆ ವಿನೋದ್‌. 

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.