ನಮ್ಮವರಿಬ್ಬರು ಸಿರಿವಂತರು
Team Udayavani, Jul 13, 2018, 6:00 AM IST
ನ್ಯೂಯಾರ್ಕ್: ಅಮೆರಿಕದಲ್ಲಿರುವ 60 ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಅರಿಸ್ಟಾ ನೆಟ್ವರ್ಕ್ನ ಸಿಇಒ ಜಯಶ್ರೀ ಉಳ್ಳಾಲ್ (57) 18ನೇ ಸ್ಥಾನ ಮತ್ತು ನೀರಜಾ ಸೇಥಿ (63) 21ನೇ ಸ್ಥಾನ ಪಡೆದುಕೊಂಡಿದ್ದಾರೆ. ಫೋರ್ಬ್ಸ್ ನಿಯತಕಾಲಿಕ ಸ್ವಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ಏರಿ ಸಿರಿವಂತರಾದ 60 ಮಂದಿಯ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ 21 ವರ್ಷ ವಯಸ್ಸಿನ ಕೈಲಿ ಜೆನ್ನರ್ ಅತ್ಯಂತ ಕಿರಿಯವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜಯಶ್ರೀ ಉಳ್ಳಾಲ್ 2008ರಿಂದ ಕಂಪ್ಯೂ ಟರ್ ನೆಟ್ವರ್ಕ್ ಸಂಸ್ಥೆ ಅರಿಸ್ಟಾ ನೆಟ್ವರ್ಕ್ ನ ಸಿಇಒ ಮತ್ತು ಅಧ್ಯಕ್ಷರಾಗಿದ್ದಾರೆ. ಅವರು ಒಟ್ಟು 1.3 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಲಂಡನ್ನಲ್ಲಿ ಜನಿಸಿರುವ ಉಳ್ಳಾಲ್ ನವದೆಹಲಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಆರಿಸ್ಟಾದ ಶೇ.5ರಷ್ಟು ಸಂಪತ್ತನ್ನು ಉಳ್ಳಾಲ್ ಹೊಂದಿದ್ದು, ಅದನ್ನು ತಮ್ಮ ಇಬ್ಬರು ಮಕ್ಕಳು ಮತ್ತು ಸೋದರ ಸೊಸೆ ಮತ್ತು ಸೋದರ ಸಂಬಂಧಿ ಹೆಸರಿಗೆ ಬರೆದಿದ್ದಾರೆ ಎಂದು ಫೋಬ್ಸ್ì ಹೇಳಿದೆ.
ನೀರಜ ಸೇಥಿ ಸಿಂಟೆಲ್ ಎಂಬ ಸಂಸ್ಥೆ ಯನ್ನು 1980ರಲ್ಲಿ ಪತಿ ಭರತ್ ದೇಸಾಯಿ ಜತೆಗೂಡಿ ಮಿಚಿಗನ್ನಲ್ಲಿ ಆರಂಭಿಸಿದ್ದರು. ಆರಂಭದಲ್ಲಿ ಕೇವಲ 2 ಸಾವಿರ ಡಾಲರ್ನಿಂ ದ ಆರಂಭಿಸಿದ್ದ ಕಂಪನಿ 2017ರಲ್ಲಿ 924 ದಶಲಕ್ಷ ಡಾಲರ್ ಆದಾಯ ಗಳಿಸಿತ್ತು. ಸಂಸ್ಥೆ ಯ 23 ಸಾವಿರ ಉದ್ಯೋಗಿಗಳ ಪೈಕಿ ಶೇ.80 ರಷ್ಟು ಮಂದಿ ಭಾರತೀಯರೇ.
ಪಟ್ಟಿಯಲ್ಲಿ ಅತ್ಯಂತ ಕಿರಿಯವರೆಂದರೆ ರೂಪದರ್ಶಿ ಕಿಮ್ ಕರ್ದಾಶಿಯನ್ರ ಮಲ ಸಹೋದರಿ ಕೈಲಿ ಜೆನ್ನರ್. ಮುಂದಿನ ತಿಂಗಳು ಅವರು 21ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.