ಆತ್ಮ ವದಂತಿಯ ಸವಾರಿ
Team Udayavani, Jul 13, 2018, 6:00 AM IST
ಹೊಸದಿಲ್ಲಿ: ದೆಹಲಿಯ ಬುರಾರಿಯಲ್ಲಿ ನಡೆದ ಒಂದೇ ಕುಟುಂಬದ 11 ಮಂದಿಯ ಆತ್ಮಹತ್ಯೆ ಪ್ರಕರಣ ಹಲವು ರೋಚಕ ತಿರುವು ಗಳನ್ನು ಪಡೆದುಕೊಂಡ ಬೆನ್ನಲ್ಲೇ, ಇದೀಗ ಆ ಮನೆಯ ಸುತ್ತಮುತ್ತ ಅವರ ಆತ್ಮಗಳು ಸಂಚರಿಸುತ್ತಿವೆ ಎಂಬ ವದಂತಿಗಳು ಕೇಳಿಬರ ತೊಡಗಿವೆ. ಇದು ಬುರಾರಿಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದ್ದು, ಹೆಣ್ಣು ಮಕ್ಕಳಂತೂ ಮನೆಯಿಂದ ಹೋರ ಬರಲು ಹೆದರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನೇ ದಿನೆ 11 ಮಂದಿಯ ಆತ್ಮ ಇಲ್ಲೇ ಸುತ್ತುತ್ತಿವೆ ಎಂಬ ಸುಳ್ಳು ಸುದ್ದಿಗಳು, ಆತ್ಮಹತ್ಯೆ ಕುರಿತ ವದಂತಿಗಳು ಹೆಚ್ಚುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಮಂದಿ ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ, ಬಾಡಿಗೆಗೂ ಯಾರೂ ಬರುತ್ತಿಲ್ಲ, ಕಟ್ಟಡ, ಅಪಾರ್ಟ್‌ಮೆಂಟ್‌ಗಳನ್ನು ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಆಟೋದವರೂ ಬರಲ್ಲ: ಸದಾ ಗಿಜಿಗುಡುತ್ತಿದ್ದ ಬುರಾರಿಯಲ್ಲೀಗ ಸ್ಮಶಾನ ಮೌನ, ಕ್ಷಣ ಕ್ಷಣವೂ ಭಯ ಆವರಿಸಿದೆ. ಆಟೋ, ಟ್ಯಾಕ್ಸಿಗಳೂ ಬುರಾರಿ ಎಂದ ಕೂಡಲೇ ಅಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಹೆದರಿ ಅನೇಕ ಮನೆಯವರು “ಶುದ್ಧೀಕರಣ ಕ್ರಿಯೆ,’ ಪೂಜೆ, ಹವನಗಳನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯ ಪ್ರಾಪರ್ಟಿ ಡೀಲರ್ ಪವನ್ ಕುಮಾರ್ ತ್ಯಾಗಿ ಹೇಳಿದ್ದಾರೆ. ಇದೇ ವೇಳೆ, ಕೆಲವು ರಿಯಲ್ ಎಸ್ಟೇಟ್ ಕುಳಗಳು ಇಂಥ ವದಂತಿ ಹಬ್ಬಿಸುತ್ತಿದ್ದು, ಆಸ್ತಿಗಳ ದರ ಕಡಿಮೆಯಾದರೆ, ಅದನ್ನು ತಾವೇ ಖರೀದಿಸಿ ಮಾರುವುದು ಅವರ ಉದ್ದೇಶ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್ಗೆ ಸರ್ಕಾರ!
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.