ಪಾಯಸ, ಪೀನಟ್ ಅಲ್ಲ, ಅದು ಆ್ಯಂಡ್ರಾಯ್ಡ “ಪಿಸ್ತಾಶಿಯೋ’!
Team Udayavani, Jul 13, 2018, 6:00 AM IST
ಹೊಸದಿಲ್ಲಿ: ಆ್ಯಂಡ್ರಾಯ್ಡ “ಪಿ’ ಅಂದ್ರೆ “ಪಿಸ್ತಾಶಿಯೋ’! ಆ್ಯಂಡ್ರಾಯ್ಡ ಒರಿಯೋ ನಂತರದ ವರ್ಷನ್ ಆಗಿರುವ ಆ್ಯಂಡ್ರಾಯ್ಡ ಒಎಸ್ “ಪಿ’ಗೆ ಭಾರತೀಯ ಮೂಲದ ತಿನಿಸುಗಳ ಹೆಸರಿಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸದ್ಯ “ಪಿಸ್ತಾಶಿಯೋ’ ಎಂಬ ಹೆಸರಿನ ಬಗ್ಗೆ ಸೋರಿಕೆಯಾಗಿದ್ದು, ಮುಂದಿನ ತಿಂಗಳು ಗೂಗಲ್ ಅಧಿಕೃತವಾಗಿ ಘೋಷಣೆ ಮಾಡಲಿದೆ.
ಸದ್ಯ ಆ್ಯಂಡ್ರಾಯ್ಡನ ಮಾತೃಸಂಸ್ಥೆ ಗೂಗಲ್‌ಗೆ ಭಾರತೀಯ ಮೂಲದ ಸಿಇಒ ಸುಂದರ್ ಪಿಚೈ ನೇತೃತ್ವ ವಹಿಸಿದ್ದಾರೆ. ಚೆನ್ನೈ ಮೂಲದ ಪಿಚೈ ಭಾರತದ ಭಾವನೆಗಳಿಗೆ ಪೂರಕವಾಗಿ ಆ್ಯಂಡ್ರಾಯ್ಡ “ಪಿ’ಗೆ ಭಾರತೀಯ ಮೂಲದ ಸಿಹಿ ತಿನಿಸಿನ ಹೆಸರಿ ಡಲಿ ದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಹುವಾಯಿ ಕಂಪನಿಯೊಂದರ ಕಸ್ಟಮರ್ ಕೇರ್ ಸಿಬ್ಬಂದಿಯೊಬ್ಬರು, ಗ್ರಾಹಕರೊಬ್ಬರಿಗೆ ಉತ್ತರ ನೀಡುವಾಗ ಆ್ಯಂಡ್ರಾಯ್ಡ ಪಿಸ್ತಾ ಶಿಯೋ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹುವಾಯಿ ಪಿ9 ಮೊಬೈಲ್‌ಗೆ ಆ್ಯಂಡ್ರಾಯ್ಡ ಒರಿಯೋ ಅಪ್‌ಡೇಟ್ ಆಗುತ್ತಾ ಎಂಬ ಪೊಲೆಂಡ್‌ನ ಗ್ರಾಹಕರ ಪ್ರಶ್ನೆಗೆ ಉತ್ತರಿಸಲು ಹೋಗಿ ಈ ಎಡವಟ್ಟು ಮಾಡಿದ್ದಾರೆ.
ಸಾಮಾನ್ಯವಾಗಿ ಗೂಗಲ್ ಆ್ಯಂಡ್ರಾಯ್ಡ ತನ್ನ ಮೊದಲ ವರ್ಷನ್‌ನಿಂದ ಇಲ್ಲಿವರೆಗೆ ಎಲ್ಲದಕ್ಕೂ ಜನಪ್ರಿಯ ಸಿಹಿ ತಿಂಡಿಯ ಹೆಸರಿಡುವುದನ್ನು ರೂಢಿ ಮಾಡಿಕೊಂಡಿದೆ. ಅದರಂತೆಯೇ ಲಾಲಿಪಪ್, ಮಾರ್ಷ್ ಮೆಲ್ಲೋ, ನೌಗಟ್, ಒರಿಯೋ ಹೆಸರುಗಳನ್ನು ಇರಿಸಿಕೊಂಡು ಬಂದಿದೆ.
ಹೆಸರು ಬದಲಾಗಬಹುದು: ಸದ್ಯಕ್ಕೆ ಪಿಸ್ತಾಶಿಯೋ ಹೆಸರು ಸೋರಿಕೆಯಾಗಿದ್ದರೂ, ಇದೇ ಅಂತಿಮವಾಗಬೇಕಾಗಿಲ್ಲ. ಮುಂದಿನ ತಿಂಗಳು ಅಧಿಕೃತವಾಗಿ ಘೋಷಣೆಯಾಗು ವಾಗ ಬದಲಾಗಬಹುದು. ಸದ್ಯಕ್ಕೆ ಇದನ್ನು ಡೆವಲಪ್ ಮಾಡುವಾಗ ಸಿಬ್ಬಂದಿ ನಡುವಿನ ಸಂವಹನಕ್ಕೆ ಬಳಕೆ ಮಾಡುತ್ತಿರಬಹುದು ಎಂಬ ಮಾತುಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.