ದಾಖಲೆಯ ಹೊಸ ಎತ್ತರ ಏರಿ ದಿನಾಂತ್ಯಕ್ಕೆ ಕೆಳಗಿಳಿದ ಮುಂಬಯಿ ಶೇರು
Team Udayavani, Jul 13, 2018, 5:06 PM IST
ಮುಂಬಯಿ : ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಹೊಸ ಎತ್ತರವನ್ನು ಕಂಡು ಬಳಿಕ ಅಲ್ಲಿಂದ ಕೆಳಗಿಳಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು ಕೇವಲ 6.78 ಅಂಕಗಳ ಮುನ್ನಡೆಯೊಂದಿಗೆ 36,541.63 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿ ನಿರಾಶೆ ಉಂಟುಮಾಡಿತು.
ನಿರಾಶೆ ಉಂಟುಮಾಡಿದ ದೇಶದ ಆರ್ಥಿಕಾಭಿವೃದ್ಧಿಯ ಸ್ಥೂಲ ಅಂಕಿ ಅಂಶಗಳು, ಮತ್ತೆ ನಿರಂತರ ಹೊರ ಹರಿವು ಕಂಡಿರುವ ವಿದೇಶಿ ಬಂಡವಾಳ, ವಹಿವಾಟುದಾರರಿಂದ ನಡೆದ ಲಾಭ ನಗದೀಕರಣದ ಶೇರು ಮಾರಾಟ ಇವೇ ಮುಂತಾದ ಕಾರಣಗಳು ಸೆನ್ಸೆಕ್ಸ್ ಹಿನ್ನಡೆಗೆ ಕಾರಣವಾದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ 36,635.14 ಅಂಕಗಳ ಹೊಸ ದಾಖಲೆಯ ಎತ್ತರವನ್ನು ಕಂಡಿದ್ದ ಸೆನ್ಸೆಕ್ಸ್ ಅನಂತರ 36,740.07 ಅಂಕಗಳ ಮಟ್ಟದ ವರೆಗೂ ಮುನ್ನಡೆದಿತ್ತು. ಏಶ್ಯನ್ ಶೇರು ಪೇಟೆಗಳಲ್ಲಿ ಕಂಡು ಬಂದಿದ್ದ ತೇಜಿಯೇ ಇದಕ್ಕೆ ಕಾರಣವಾಗಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 4.30 ಅಂಕಗಳ ಅಲ್ಪ ಏರಿಕೆಯನ್ನು ದಾಖಲಿಸಿ 11,018.90 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಕಳೆದ ಜೂನ್ ತಿಂಗಳಲ್ಲಿ ಐದು ತಿಂಗಳ ಗರಿಷ್ಠ ಮಟ್ಟ ತಲುಪಿರುವುದು ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಕಳೆದ ಮೇ ತಿಂಗಳಲ್ಲಿ ಏಳು ತಿಂಗಳ ಕನಿಷ್ಠ ಮಟ್ಟವಾಗಿ ಶೇ.3.2ಕ್ಕೆ ಕುಸಿದಿರುವುದು ಶೇರು ಮಾರುಕಟ್ಟೆಯ ಉತ್ಸಾಹಕ್ಕೆ ತಣ್ಣೀರೆರಚಿತು.
ಒಎನ್ಜಿಸಿ, ಎಕ್ಸಿಸ್ ಬ್ಯಾಂಕ್, ಐಟಿಸಿ, ಎಸ್ಬಿಐ, ಐಸಿಐಸಿಐ ಬ್ಯಾಂಕ್, ಎನ್ಟಿಪಿಸಿ, ಹೀರೋ ಮೋಟೋ ಕಾರ್ಪ್, ಸನ್ ಫಾರ್ಮಾ, ಭಾರ್ತಿ ಏರ್ಟೆಲ್ ಶೇರುಗಳು ಇಂದು ಶೇ.2.80 ಪ್ರಮಾಣದಲ್ಲಿ ಕುಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.