ಬಜೆಟ್ ತಾರತಮ್ಯ: ಮಹಿಳಾ ಮೀನು ಮಾರಾಟಗಾರರ ಪ್ರತಿಭಟನೆ
Team Udayavani, Jul 14, 2018, 6:00 AM IST
ಉಡುಪಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಮೀನುಗಾರರನ್ನು ಕಡೆಗಣಿಸಲಾಗಿದೆ. ಸಾಲಮನ್ನಾ, ಬಡ್ಡಿ ರಹಿತ ಸಾಲ ಸೇರಿದಂತೆ ಯಾವುದೇ ಪ್ರಯೋಜನ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಉಡುಪಿಯಲ್ಲಿ ಮೀನು ಮಾರಾಟಗಾರ ಮಹಿಳೆಯರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬೆಳಗ್ಗಿನಿಂದ ಸಂಜೆವರೆಗೂ ರಾಜ್ಯ ಸರಕಾರ, ಮುಖ್ಯಮಂತ್ರಿ ವಿರುದ್ಧದ ಘೋಷ ವಾಕ್ಯಗಳನ್ನು ಹೊಂದಿದ್ದ ಫಲಕಗಳನ್ನು ತಮ್ಮ ಮೀನಿನ ಬುಟ್ಟಿಗಳ ಪಕ್ಕ ಇಟ್ಟು ನೂರಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆ ಸಲ್ಲಿಸಿದರು.
ಸಾಲಮನ್ನಾ ಮಾಡಿ
ಮಾಧ್ಯಮದವರ ಜತೆ ಮಾತನಾಡಿದ ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್ ಅವರು “ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರರಿಗೆ ಯಾವುದೇ ಯೋಜನೆ, ಅನುದಾನ
ಘೋಷಿಸಿಲ್ಲ.
ರೈತರ ಸಾಲಮನ್ನಾ ಮಾಡಿರುವಂತೆ ಮೀನುಗಾರರ ಸಾಲಮನ್ನಾ ಮಾಡಬೇಕು. ಈ ಹಿಂದೆ ಘೋಷಿಸಿದಂತೆ ಶೇ.3ರ ಬಡ್ಡಿದರದಲ್ಲಿ ಸಾಲ ನೀಡಬೇಕು. ಬಡ್ಡಿರಹಿತ ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ಸಮುದ್ರ ಕೊರೆತ ತಡೆಗಟ್ಟಬೇಕು’ ಎಂದು ಹೇಳಿದರು.
ಕಡಲ ಮಕ್ಕಳ ಒಡಲು ಬಗೆದ ಸರಕಾರ
“ಕರಾವಳಿಗರ ಜತೆ ತಾರತಮ್ಯ ನಿಲ್ಲಲಿ’, “ಕಡಲ ಮಕ್ಕಳ ಒಡಲು ಬಗೆದ ಸರಕಾರ’, “ಮೂರು ಜಿಲ್ಲೆಗಳ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧಿಕ್ಕಾರ’,”ಮೀನುಗಾರರ ಸಮಸ್ಯೆಗೆ ಸ್ಪಂದಿಸದ, ಸಬ್ಸಿಡಿ ದರದಲ್ಲಿ ಡೀಸೆಲ್ ನೀಡದೇ, ಡೀಸೆಲ್ ಬೆಲೆ ಏರಿಸಿದ ಬಜೆಟ್ ನಮಗೆ ಬೇಕಿಲ್ಲ’, “ಕರಾವಳಿಯ ದೇವಸ್ಥಾನಗಳ ದುಡ್ಡು ಬೇಕು ಜನರು ಬೇಡವೆ?’, “ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಒದಗಿಸಿ’, “ಮೀನುಗಾರ ಮಹಿಳೆಯರ ಸಾಲ ಮನ್ನಾ ಯಾಕೆ ಮಾಡುತ್ತಿಲ್ಲ?’,”ನಾವು ಕರ್ನಾಟಕ ರಾಜ್ಯದಲ್ಲಿ ಇಲ್ಲವೆ? ಮೊದಲಾದ ಘೋಷವಾಕ್ಯಗಳಿದ್ದ ಫಲಕಗಳನ್ನು ಮೀನುಗಾರ ಮಹಿಳೆಯರು ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CongressVsAAP: ದಿಲ್ಲಿ ಪ್ಯಾರಿಸ್ ಆಗುತ್ತದೆ ಎಂದಿದ್ದ ಕೇಜ್ರಿ, ಏನೂ ಮಾಡಲಿಲ್ಲ: ರಾಹುಲ್
ICC: ಬುಮ್ರಾ “ಐಸಿಸಿ ತಿಂಗಳ ಕ್ರಿಕೆಟಿಗ’; ಅನ್ನಾಬೆಲ್‌ಗೆ ವನಿತಾ ವಿಭಾಗದ ಪ್ರಶಸ್ತಿ
School Threat: ಉಗ್ರನ ಬೆಂಬಲಿಸಿದ್ದ ಸಂಸ್ಥೆ ಜತೆ ವಿದ್ಯಾರ್ಥಿಗೆ ನಂಟು!
Mauro Morandi: 32 ವರ್ಷ ದ್ವೀಪದಲ್ಲಿದ್ದ ಇಟಲಿಗ ನಾಡಿಗೆ ಬಂದ 3 ವರ್ಷದಲ್ಲೇ ನಿಧನ!
Bengal: ಗಾಲಿಕುರ್ಚಿ ಅಲಭ್ಯತೆ: ಬೆನ್ನ ಮೇಲೆ ಪತಿಯ ಹೊತ್ತ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.