ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ: ಸ್ಥಳೀಯರ ಎಚ್ಚರಿಕೆ
Team Udayavani, Jul 14, 2018, 2:20 AM IST
ಬಂಟ್ವಾಳ: ಕಳೆದ ಹದಿನೈದು ವರ್ಷಗಳಿಂದ ಡಾಮರು ಕಾಮಗಾರಿ ಆಗದ ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆ ಸಂಪರ್ಕ ರಸ್ತೆಗೆ ಚುನಾವಣೆ ಸಮಯದಲ್ಲಿ ದಿಢೀರ್ ಡಾಮರು ಹಾಕಲಾಗಿತ್ತು. ಈಗ ಎದ್ದು ಹೋಗಿದ್ದು, ದುರಸ್ತಿ ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ. ಚುನಾವಣೆಗೆ ಬೆರಳೆಣಿಕೆ ದಿನ ಇರುವಾಗ ಮಾಡಿದ ಕಾಮಗಾರಿ ಚುನಾವಣೆ ಮುಗಿದ ಬಳಿಕ ಕಣ್ಮರೆಯಾಗಿದ್ದು, ರಸ್ತೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಮಾರು ಹದಿನೈದು ವರ್ಷಗಳ ಬಳಿಕ ರಸ್ತೆಗೆ ಡಾಮರು ಹಾಕುವುದನ್ನು ಕಂಡು ಸಾರ್ವಜನಿಕರು ತೃಪ್ತಿ ವ್ಯಕ್ತಮಾಡಿದ್ದರು. ಆದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಜನಸಾಮಾನ್ಯರಿಗೆ ಯಾವ ಅನುಮಾನ ಬಂದಿತ್ತೋ ಅದು ನಿಜವಾಗಿದೆ. ಜೂನ್-ಜುಲೈ ಮಳೆಗೆ ರಸ್ತೆ ಚಿಂದಿ ಎದ್ದುಹೋಗಿದೆ. ಈಗ ಈ ರಸ್ತೆಯಲ್ಲಿ ನಡೆದು ಹೋಗಲೂ ಆಗದಂತಹ ಸ್ಥಿತಿ ನಿರ್ಮಾಣ ಆಗಿದೆ. ರಸ್ತೆ ದುಃಸ್ಥಿತಿ ಬಗ್ಗೆ ಗ್ರಾ.ಪಂ. ಆಡಳಿತವೇ ಮೌನವಾಗಿದೆ. ಇದರ ಬಗ್ಗೆ ಪಂಚಾಯತ್ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಮಳೆ ಕಡಿಮೆ ಆದ ಕೂಡಲೇ ಮರು ಡಾಮರು ಕಾಮಗಾರಿ ನಡೆಸಬೇಕು. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.