ಚೀನಾದಲ್ಲಿ ಮಿಂಚಿದ ಹುಬ್ಬಳ್ಳಿ ಯುವತಿ
Team Udayavani, Jul 14, 2018, 4:43 PM IST
ಹುಬ್ಬಳ್ಳಿ: ನಗರದ ಯುವತಿಯೊಬ್ಬರು ಚೀನಾದಲ್ಲಿ ನಡೆದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಭರತನಾಟ್ಯ ಪ್ರದರ್ಶಿಸಿ ಭೇಷ್ ಎನಿಸಿಕೊಂಡಿದ್ದಾರೆ. ಮೂರುಸಾವಿರ ಮಠದ ಮಹಿಳಾ ಕಾಲೇಜಿನ ಬಿಎ ಹಿಂದೂಸ್ಥಾನಿ ಸಂಗೀತ ಅಂತಿಮ ವರ್ಷದ ವಿದ್ಯಾರ್ಥಿನಿ ಸೌಜನ್ಯ ಕುಲಕರ್ಣಿ ಚೀನಾದಲ್ಲಿ ‘ಮಹಿಷಾಸುರ ಮರ್ದಿನಿ’ ಭರತನಾಟ್ಯ ಪ್ರದರ್ಶಿಸಿ ಹುಬ್ಬಳ್ಳಿಗೆ ಕೀರ್ತಿ ತಂದಿದ್ದಾರೆ. ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಶ್ರೇಯಸ್ಸು ಇವರದು.
ಚೀನಾದಲ್ಲಿ ಜು. 3ರಿಂದ 10ರ ವರೆಗೆ ನಡೆದ ಇಂಟರ್‌ನ್ಯಾಷನಲ್ ಯುಥ್ ಡೆಲಿಗೇಶನ್ ಪ್ರೋಗ್ರಾಮ್‌ನಲ್ಲಿ ಪಾಲ್ಗೊಂಡ ಸೌಜನ್ಯ ಅಲ್ಲಿನ ಬೀಜಿಂಗ್, ಕನ್ಮಿಂಗ್ ಹಾಗೂ ಗ್ಯಾಂಜ್‌ಜಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ಯಾಂಗ್‌ಜಾನ್‌ನ ಸಮುದ್ರ ಮಧ್ಯೆ ಕ್ರೂಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೀನಾ ಕಲಾವಿದರು ಅಲ್ಲಿನ ಜಾನಪದ ಕಲೆ ಪ್ರದರ್ಶನ ಮಾಡಿದರೆ, ಸೌಜನ್ಯ ನಮ್ಮ ಪ್ರಾಚೀನ ಕಲೆ ಭರತನಾಟ್ಯ ಪ್ರದರ್ಶಿಸಿದರು.
ಭರತನಾಟ್ಯ ಪ್ರದರ್ಶನದ ನಂತರ ಕಲೆ ಹಾಗೂ ಥೀಮ್ ಕುರಿತು ಅನುವಾದಕರ ನೆರವಿನಿಂದ ವಿವರಿಸಿದರು. ಕಲಾ ಪ್ರದರ್ಶನದಿಂದಾಗಿ ಜೂಲಿ, ರೇನಾ ಸೇರಿದಂತೆ ಹಲವು ಚೀನಿ ಸ್ನೇಹಿತೆಯರನ್ನೂ ಸಂಪಾದಿಸಿದರು. ಸಂಗೀತವನ್ನೂ ಕಲಿಯುತ್ತಿರುವುದರಿಂದ ಸೌಜನ್ಯ ಅವರಿಗೆ 2 ನಿಮಿಷಗಳ ಕಾಲ ಗಾಯನಕ್ಕೆ ಅವಕಾಶ ಲಭಿಸತ್ತು. ಹಿಂದೂಸ್ಥಾನಿ ಸಂಗೀತವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಚಿತ್ತ ಸೆಳೆದರು.
ಸವಾಲಿನ ಮೆಟ್ಟಿಲು: ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗುವುದು ಸುಲಭವಾಗಿರಲಿಲ್ಲ. ಕಾಲೇಜು, ವಿಶ್ವವಿದ್ಯಾಲಯ, ದಕ್ಷಿಣ ವಲಯ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವುದು ದೊಡ್ಡ ಸವಾಲಾಗಿತ್ತು. ಆದರೆ ಆತ್ಮಸ್ಥೈರ್ಯದಿಂದ ಸೌಜನ್ಯ ಅವಕಾಶ ಪಡೆದಿದ್ದರು. ಸೌಜನ್ಯ ಅವರ ತಾಯಿ ರೂಪಾ ಕುಲಕರ್ಣಿ ಅಂಗವಿಕಲರಾಗಿದ್ದು, ರೈಲ್ವೆ ಉದ್ಯೋಗಿಯಾಗಿದ್ದಾರೆ. ಪತಿ ತೀರಿ ಹೋಗಿದ್ದರಿಂದ ಅವರೇ ತಂದೆ ಹಾಗೂ ತಾಯಿಯಾಗಿ ಮಗಳನ್ನು ಬೆಳೆಸುತ್ತಿದ್ದಾರೆ. ಸಾಧನೆ ಮಾಡಲು ಮಗಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.
ಬಹುಮುಖ ಪ್ರತಿಭೆ: ನೃತ್ಯಪಟು ಹಾಗೂ ಗಾಯಕಿಯಾಗಿರುವ ಸೌಜನ್ಯ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಕಾರ್ಯಕರ್ತೆಯೂ ಹೌದು. ಜ. 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡ ಅವರು ಜ. 27 ಹಾಗೂ 28ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಎದುರು ಭರತನಾಟ್ಯ ಪ್ರದರ್ಶನ ನೀಡಿ ಶಭಾಷ್ ಎನಿಸಿಕೊಂಡಿದ್ದಾರೆ.
ಭರತನಾಟ್ಯ ಕಲಿಯಲು ಚೀನಿಯರ ಆಸಕ್ತಿ
ಚೀನಾದಲ್ಲಿ ಬಾಲಿವುಡ್ ಹಾಡುಗಳಿಗಿಂತ ಆಸಕ್ತಿಯಿಂದ ಶಾಸ್ತ್ರೀಯ ಸಂಗೀತ ಆಲಿಸುತ್ತಾರೆ. ಭರತನಾಟ್ಯಕ್ಕೆ ಈ ಮಟ್ಟಿಗೆ ಅಭಿಮಾನಿಗಳಿದ್ದಾರೆ ಎಂಬುದು ಗೊತ್ತಿರಲಿಲ್ಲ. ಪ್ರದರ್ಶನದ ನಂತರ ಅನೇಕರು ಬಂದು ಭರತನಾಟ್ಯದ ಬಗ್ಗೆ ಕೇಳಿ ತಿಳಿದುಕೊಂಡರು. ಕೆಲ ಯುವತಿಯರು ಕಲಿಯಲು ಆಸಕ್ತಿ ತೋರಿಸಿದರು. ಅನುವಾದಕರ ನೆರವಿನಿಂದ ಸಂವಾದ ಸಾಧ್ಯವಾಯಿತು ಎಂದು ಸೌಜನ್ಯ ಕುಲಕರ್ಣಿ ಹೇಳುತ್ತಾರೆ.
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಕೇವಲ ಕಲಾ ಪ್ರದರ್ಶನಕ್ಕೆ ಮಾತ್ರವಲ್ಲ, ದೇಶದ ಸಂಸ್ಕೃತಿ, ಸಂಪ್ರದಾಯ, ಆಹಾರ, ವಿಹಾರ, ವೈವಿಧ್ಯತೆ, ವಿಶೇಷತೆ ತಿಳಿದುಕೊಳ್ಳಲು ಪೂರಕವಾಗುತ್ತವೆ. ಕಾಲೇಜಿನ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸಹಕಾರ ಹಾಗೂ ತಾಯಿಯ ಪ್ರೋತ್ಸಾಹವೇ ಇದಕ್ಕೆ ಕಾರಣ.
ಸೌಜನ್ಯ ಕುಲಕರ್ಣಿ
ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.