ಮತ್ತೆ ಮತ್ತೆ ನೆನಪಾಗುವ ಕರ್ಕಿ ಕೃಷ್ಣ ಹಾಸ್ಯಗಾರರು
Team Udayavani, Jul 15, 2018, 6:00 AM IST
ಇತ್ತೀಚೆಗೆ ನಿಧನರಾದ ಕೃಷ್ಣ ಪರಮಯ್ಯ ಹಾಸ್ಯಗಾರರು ಅಥವಾ ಕೆ. ಪಿ. ಹಾಸ್ಯಗಾರರು ನನ್ನ ಸಣ್ಣಜ್ಜ. ನನ್ನ ಅಜ್ಜ ವರದ ಹಾಸ್ಯಗಾರರ ಎರಡನೆಯ ತಮ್ಮ, ಹಿರಿಯ ಪರಮಯ್ಯ ಹಾಸ್ಯಗಾರರ ಮೂರನೆಯ ಮಗ. ನಮ್ಮದು ಅವಿಭಕ್ತ ಕುಟುಂಬ. ಉದ್ಯೋಗದ ನಿಮಿತ್ತ ಕುಟುಂಬದ ಬಹುತೇಕ ಎಲ್ಲರೂ ಪರಸ್ಥಳ ಸೇರಿದರೂ ನಾವೆಲ್ಲ ಇಂದಿಗೂ ಹಬ್ಬ, ಹರಿದಿನ, ಮದುವೆ, ಉಪನಯನ, ದೇವಕಾರ್ಯ, ಹಳೆಯವರ ದಿನಗಳನ್ನು ನಮ್ಮ ಕರ್ಕಿಯ ಮೂಲಮನೆಯಲ್ಲಿ ಒಟ್ಟಾಗಿ ಮಾಡುತ್ತೇವೆ. ಹೀಗಾಗಿ, ನನಗೆ ಕೃಷ್ಣ ಹಾಸ್ಯಗಾರರ ಜೊತೆ ಕಳೆದ ದೀರ್ಘಕಾಲದ ಒಡನಾಟ, ಅವರನ್ನು ಅತೀ ಹತ್ತಿರದಿಂದ ನೋಡಿದ ಅನುಭವ ಹೇರಳವಾಗಿದೆ.
ಕೃಷ್ಣ ಹಾಸ್ಯಗಾರರಿಗೆ ಚಿತ್ರಕಲೆ ಹುಟ್ಟಿನಿಂದ ಬಂದ ವರ. ಪ್ರಾಥಮಿಕ ಶಾಲಾ ಜೀವನದಲ್ಲೇ ಚಿತ್ರಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ಎಲಿಮೆಂಟರಿ ಮತ್ತು ಇಂಟರ್‌ಮೀಡಿಯೇಟ್ ಡ್ರಾಯಿಂಗ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದರು. ಚಿತ್ರಕಲೆಯ ಮೇಲಿನ ಗಾಢವಾದ ಆಸಕ್ತಿ ಶಾಲೆಯ ಇತರ ವಿಷಯಗಳನ್ನು ಹಿಂದಕ್ಕೆ ಸರಿಸಿತು. ಇತರರ ಸಹಾಯ ಅಥವಾ ವಿಶೇಷ ತರಬೇತಿ ಇಲ್ಲದೆ ಕೇವಲ ಸ್ವಪ್ರಯತ್ನ ಮತ್ತು ಏಕಲವ್ಯ ಶ್ರದ್ಧೆಯ ಫಲವಾಗಿ ಎಂಟನೆಯ ತರಗತಿ ಓದುವಾಗ ಅದೇ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಹೊನ್ನಾವರದ ಸೈಂಟ್ ಥಾಮಸ್ ಪ್ರೌಢಶಾಲೆಯಲ್ಲಿ ಕೃಷ್ಣ ಹಾಸ್ಯಗಾರರ ಚಿತ್ರಕಲಾ ಶಿಕ್ಷಕ ಡಿ. ಎಂ. ಶೆಟ್ಟಿ ಮಾಸ್ತರರು ಸ್ವಇಚ್ಛೆಯಿಂದ ನಿವೃತ್ತರಾಗಿ ಮುಂಬಯಿಗೆ ತೆರಳುವಾಗ, ತನ್ನ ವಿದ್ಯಾರ್ಥಿ ಕೃಷ್ಣನಿಗೆ, “ನನ್ನ ಸ್ಥಾನ ನಿನಗೇ, ಮತö ಇಲ್ಲ’ ಎಂದು ಹರಸಿದ್ದರು. ತೆರವಾದ ಸ್ಥಾನಕ್ಕೆ ಆಗಿನ ಪ್ರಾಂಶುಪಾಲ ಸಿ. ಎಸ್. ಉಮನ್ ಅವರು ಎಳೆಯ ಕೃಷ್ಣ ಹಾಸ್ಯಗಾರರನ್ನು ಆಯ್ಕೆ ಮಾಡಿದರು. ವೃತ್ತಿ ಆರಂಭಿಸಿದ ನಂತರ ಉಮ್ಮನ್ ರೇ- ಚಿತ್ರಕಲಾ ಶಿಕ್ಷಕರಿಗೆ ಅಗತ್ಯವಾದ ಪದವಿ ಪಡೆಯಲು ಮುಂಬಯಿಯ ಜೆ. ಜೆ. ಆರ್ಟ್ಸ್ ಕಾಲೇಜ್‌ಗೆ ಕಳುಹಿಸಿದರು. ತನ್ನ ಸಹಪಾಠಿಗಳಿಗೆ ಅನಿರೀಕ್ಷಿತವಾಗಿ ಶಿಕ್ಷಕರಾಗಿ ತರಗತಿಯ ಕೊಠಡಿಗೆ ಪ್ರವೇಶಿಸುವಾಗ ಆರಂಭದ ದಿನಗಳಲ್ಲಿ ಶಾಲೆಯ ಸಿಪಾಯಿಯೂ ಅವರೊಂದಿಗೆ ಧೈರ್ಯಕ್ಕಾಗಿ ಹೋಗುತ್ತಿದ್ದನಂತೆ. ಹೀಗೆ, ಚಿತ್ರಕಲಾ ಶಿಕ್ಷಕರಾಗಬೇಕೆಂಬ ಯಾವುದೇ ಹಂಬಲವಿಲ್ಲದೆ ಸ್ವಂತ ಪ್ರತಿಭೆಯಿಂದ ಚಿತ್ರಕಲಾ ಶಿಕ್ಷಕರಾಗಿ ರೂಪುಗೊಂಡ ಕೃಷ್ಣ ಹಾಸ್ಯಗಾರರು ವಸ್ತುತಃ ಜನ್ಮಜಾತ ಕಲಾಕಾರ. ಅದೇ ಶಾಲೆಯಲ್ಲಿ ಆಗಲೇ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಅಣ್ಣ ವರದ ಹಾಸ್ಯಗಾರರು ಕೃಷ್ಣ ಹಾಸ್ಯಗಾರರ ವೃತ್ತಿ ಮತ್ತು ಕಲಾಜೀವನದುದ್ದಕ್ಕೂ ಮಾರ್ಗದರ್ಶಕರಾಗಿ ಒದಗಿಬಂದದ್ದು ಯೋಗಾಯೋಗವೇ ಸರಿ.
ಪರಮಯ್ಯ ಹಾಸ್ಯಗಾರರ ಪರಂಪರೆ
ಕೆ. ಪಿ. ಹಾಸ್ಯಗಾರರು ಬೆಳೆದದ್ದು ಯಕ್ಷಗಾನದ ಪರಿಸರದಲ್ಲಿ, ಗಟ್ಟಿ ಯಕ್ಷಗಾನದ ಹಿನ್ನೆಲೆ ಇತ್ತು. ತಂದೆ ಹಿರಿಯ ಪರಮಯ್ಯ ಹಾಸ್ಯಗಾರರು ಆಗಿನ ಬಡಾಬಡಗು ತಿಟ್ಟಿನ ಪ್ರಖ್ಯಾತ ಕಲಾವಿದರು. ಯಕ್ಷ ಗುರುವೂ ಹೌದು. ತಂದೆಯಿಂದ ನೇರವಾಗಿ ಕಲಿತದ್ದಕ್ಕಿಂತ ಕೃಷ್ಣ ಹಾಸ್ಯಗಾರರು ನೋಡಿ ಕಲಿತದ್ದೇ ಹೆಚ್ಚು. ಪರಮಯ್ಯ ಹಾಸ್ಯಗಾರರು 1940ರ ಸಮಯದಲ್ಲಿ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಕರ್ಕಿ ಮೇಳಕ್ಕೆ ಕಾಯಕಲ್ಪ ನೀಡಿದರು. ನಾಯಕ, ಪ್ರತಿನಾಯಕ, ಸ್ತ್ರೀವೇಷ, ಪೋಷಕ ಪಾತ್ರಗಳಿಗೆ ಮಕ್ಕಳು, ಮೊಮ್ಮಕ್ಕಳಲ್ಲಿ ಒಬ್ಬೊಬ್ಬರನ್ನು ತಯಾರು ಮಾಡಿದರು. ಆರಂಭದಲ್ಲಿ ಕೃಷ್ಣ ಹಾಸ್ಯಗಾರರು ಸಖೀ, ಸುದೇಷ್ಣೆ, ಶಬರಿ ಇತ್ಯಾದಿ ಪೋಷಕ ಸ್ತ್ರೀಪಾತ್ರಗಳು, ಹಾಸ್ಯವೇಷಗಳ ಮೂಲಕ ರಂಗಪ್ರವೇಶ ಮಾಡಿದರು. ಬಣ್ಣಗಾರಿಕೆಯಲ್ಲಿ ವಿಶೇಷ ಆಸಕ್ತಿ ಇದ್ದ ಕಾರಣ ಬಣ್ಣದ ವೇಷದ ಕಡೆಗೆ ಆಕರ್ಷಿತರಾಗಿ, ಅದರÇÉೇ ಆಸಕ್ತಿ ತಳೆದರು. ಅವರ ಎತ್ತರದ ಕಾಯ, ಬಣ್ಣದ ವೇಷಕ್ಕೆ ಬೇಕಾದ ಸ್ವರ, ತೀಕ್ಷ್ಣವಾದ ಪರಿಣಾಮಕಾರಿಯಾದ ಕಣ್ಣುಗಳು ಅವರ ಆಸೆಗೆ ಪೂರಕವಾಗಿದ್ದುವು. ಆಗ ಬಾಡದ ನಾರಾಯಣ ಹೆಗಡೆಯವರು ಕರ್ಕಿ ಮೇಳದ ಬಣ್ಣದ ವೇಷದ ಕಲಾವಿದರಾಗಿದ್ದರು. ಅವರು ಬಣ್ಣದ ವೇಷದಲ್ಲಿ ಆ ಕಾಲದಲ್ಲಿ ಪರಿಣಿತರು. ಅವರಿಗೆ ಅದರಲ್ಲಿ ಹೆಸರೂ ಇತ್ತು. ಹೀಗಿರುವಾಗ ಕೃಷ್ಣ ಹಾಸ್ಯಗಾರರಿಗೆ ಬಣ್ಣದ ವೇಷಕ್ಕೆ ಭಡ್ತಿ ಹೊಂದುವುದು ಕಷ್ಟವಾಗಿತ್ತು. ತಂದೆ ಪರಮಯ್ಯ ಹಾಸ್ಯಗಾರರೂ ಒಪ್ಪುತ್ತಿರಲಿಲ್ಲ. ಒಮ್ಮೆ ಬಾಡದ ನಾರಾಯಣ ಹೆಗಡೆಯವರ ಪ್ರೋತ್ಸಾಹದಿಂದ ಪ್ರೇರೇಪಿತರಾಗಿ ಬಣ್ಣದ ವೇಷಕ್ಕೆ ಕುಳಿತಾಗ ತಂದೆಯಿಂದ ಬೈಸಿಕೊಂಡದ್ದೂ ಆಯಿತು. ಮುಂದೆ ನರಸಿಂಹನ ಪಾತ್ರದ ಮೂಲಕ ತಂದೆಯನ್ನು ಮೆಚ್ಚಿಸಿ, ಬಣ್ಣದವೇಷದ ಕಲಾವಿದರಾಗಿ ಖಾಯಂ ಆದರು. ಕರ್ಕಿ ಮೇಳದ ಅಧಿಕೃತ ಬಣ್ಣದ ವೇಷದ ಕಲಾವಿದ ಎಂಬ ನೆಗೆಳೆ¤ಗೆ ಪಾತ್ರರಾದರು. ಹಾಸ್ಯ ಪಾತ್ರಗಳನ್ನೂ ಮುಂದುವರಿಸಿದರು. ಬಕಾಸುರ, ಕಿಮ್ಮಿàರ, ರಾವಣ, ಹಿಡಿಂಬಾಸುರ, ವೀರಭದ್ರ- ಇತ್ಯಾದಿ ಗಂಡು ಬಣ್ಣದ ವೇಷಗಳು, ಜರೆ, ಶೂರ್ಪನಖೀ, ಹಿಡಿಂಬಿ, ವೃತ್ತಜ್ವಾಲೆ, ಲಂಕಿಣಿ ಇತ್ಯಾದಿ ಹೆಣ್ಣು ಬಣ್ಣದ ವೇಷಗಳು, ನರಸಿಂಹ, ಪುರುಷಮೃಗ ಇತ್ಯಾದಿ ಪರಂಪರೆಯ ವಿಶಿಷ್ಟ ಪಾತ್ರಗಳು ಇವರಿಗೆ ಪ್ರಸಿಧಿªಯನ್ನು ತಂದಿದ್ದುವು. ಸುಜ್ಯೋತಿ, ಬ್ರಾಹ್ಮಣ, ವನಪಾಲಕ, ಕಾಶಿಮಾಣಿ ಮುಂತಾದ ಹಾಸ್ಯ ಪಾತ್ರಗಳಲ್ಲಿ ಜನರನ್ನು ರಂಜಿಸಿದ್ದರು. ಉತ್ತರಗೋಗ್ರಹಣದ ಉತ್ತರ, ಕೃಷ್ಣಾರ್ಜುನದ ದಾರುಕ ಇತ್ಯಾದಿ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು.
ಕೃಷ್ಣ ಹಾಸ್ಯಗಾರರು 1955-56 ರ ಸುಮಾರಿಗೆ ಸೈಂಟ್ ಥಾಮಸ್ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಪ್ರಾಂಶುಪಾಲರ ಆಶಯದಂತೆ ಮೊದಲ ಸಲ ಸಿಂಹನೃತ್ಯ ಮಾಡಿದರು. ಕಾರ್ಯಕ್ರಮದ ಅತಿಥಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಮೃಗಾಲಯದ ಸಿಂಹವೇ ಎಂದು ಆಶ್ಚರ್ಯ ಚಕಿತರಾದರು. ನಂತರ ಮೈಸೂರು ಮೃಗಾಲಯಕ್ಕೂ ಹೋಗಿ ಸಿಂಹದ ಚಲನವಲನ, ಘರ್ಜನೆ, ಲಕ್ಷಣ, ಮುಖಚರ್ಯೆ ಇತ್ಯಾದಿಗಳನ್ನು ಅಭ್ಯಸಿಸಿ ಪರಿಷ್ಕರಣಗೊಳಿಸಿದರು. ಸ್ಯಮಂತಕರತ್ನ, ಶಬರಾರ್ಜುನ, ಚಿತ್ರಾಕ್ಷಿ ಕಲ್ಯಾಣ, ದೇವಿ ಮಹಾತೆ¾ ಮುಂತಾದ ಪ್ರಸಂಗಳಲ್ಲಿ ಸಿಂಹದ ಅಗತ್ಯತೆ ಇ¨ªೆಡೆ ಸಿಂಹನೃತ್ಯ ಪ್ರಸಂಗದೊಳಗೆ ಸಹಜವಾಗಿ ಸೇರ್ಪಡೆಯಾಯಿತು. ಅದೇ ರೀತಿ ಪ್ರೇತನೃತ್ಯವೂ ಕೃಷ್ಣ ಹಾಸ್ಯಗಾರರ ಮತ್ತೂಂದು ಅಮೋಘ ಆವಿಷ್ಕಾರ. ಸಿಂಹನೃತ್ಯ, ಪ್ರೇತನೃತ್ಯಗಳು ಅವರ ಚಿಂತನೆ ಮತ್ತು ಬಣ್ಣಗಾರಿಕೆಗಳ ಬೆಸುಗೆಯಿಂದ ಜನಿಸಿದ ಹೊಸಸೃಷ್ಟಿ. ಕಲಾವಿದನ ಸೃಜನಶೀಲತೆಗೆ ಉತ್ತಮ ಉದಾಹರಣೆ. ಪ್ರೇತನೃತ್ಯವು ಗದಾಪರ್ವ, ಶ್ವೇತಕುಮಾರ, ಇಂದ್ರಜಿತು ಕಾಳಗ ಇತ್ಯಾದಿ ಪ್ರಸಂಗಗಳಿಗೆ ಅನಿವಾರ್ಯವಾಯಿತು. ಸಿಂಹ ಮತ್ತು ಪ್ರೇತನೃತ್ಯಗಳು ಅನೇಕ ಕಾರ್ಯಕ್ರಮಗಳಲ್ಲಿ ಬಿಡಿಯಾಗಿಯೂ ಸಾವಿರಾರು ಕಡೆ ಪ್ರದರ್ಶನಗೊಂಡವು. ಎಷ್ಟರಮಟ್ಟಿಗೆ ಇವು ಕೃಷ್ಣ ಹಾಸ್ಯಗಾರರಿಗೆ ಪ್ರಸಿದ್ಧಿಯನ್ನು ತಂದವು ಎಂದರೆ, ಅವರು ಮೂಲತಃ ಪರಂಪರೆಯ ಬಣ್ಣದವೇಷ ಮತ್ತು ಹಾಸ್ಯ ಕಲಾವಿದರು ಎಂಬುದನ್ನೂ ಕೆಲವೊಮ್ಮೆ ಜನರು ಮರೆತಂತಿತ್ತು. ಆಮೇಲೆ ಅನೇಕ ಕಲಾವಿದರು ಸಿಂಹ ಮತ್ತು ಪ್ರೇತ ಪಾತ್ರಗಳನ್ನು ಮಾಡಿದರೂ ಕೃಷ್ಣ ಹಾಸ್ಯಗಾರರ ಮೂಲ ಪ್ರತಿಯಂತೆ ಆಗಿರದೆ ನಕಲಿಯೇ ಆಗಿರುತ್ತಿತ್ತು ಎನ್ನುವುದು ಹಲವರ ಅಭಿಪ್ರಾಯ. ಅವರ ಮತ್ತೂಂದು ಪ್ರಯೋಗ ಬೇತಾಳ ನೃತ್ಯ. ಇದು ಎಲುಬಿನ ಹಂದರವಾಗಿರದೆ ಕೆದರಿದ ಕೂದಲು, ಗಡ್ಡ ಇತ್ಯಾದಿ ಹೊಂದಿ ಭೂತವೆಂಬ ಪರಿಕಲ್ಪನೆಯಲ್ಲಿತ್ತು. ಪ್ರೇತನೃತ್ಯ ಬಳಸುವೆಡೆ ಕೆಲ ಪ್ರಸಂಗಗಳಲ್ಲಿ ಅವರು ಬೇತಾಳವನ್ನು ಪ್ರದರ್ಶಿಸಿದ್ದಿದೆ.
ಕರ್ಕಿ ಆನಂದ ಹಾಸ್ಯಗಾರ, ಅಮೆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.