ರಾಜಕೀಯ


Team Udayavani, Jul 15, 2018, 6:00 AM IST

10.jpg

ನಾನು ದಿನಾಲೂ ಬೆಳಗ್ಗೆ ಕೊನೆಯ ರೈಲ್ವೇ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅವನೂ ಇಳಿಯುತ್ತಿದ್ದ. ಮತ್ತೆ ಅಲ್ಲಿಂದ ಕಾಲ್ನಡಿಗೆಯಲ್ಲಿ ಆಫೀಸಿಗೆ ಹೋಗುತ್ತಿದ್ದಾಗಲೂ ಸಹ ಅವನು ನನ್ನ ದಾರಿಯಲ್ಲೇ ನಡೆಯುತ್ತಿದ್ದ. ಹೀಗೆ ದಿನಾಲೂ ಒಬ್ಬರನ್ನೊಬ್ಬರು ನೋಡುತ್ತಿದ್ದುದರಿಂದ ಸಹಜವಾಗಿಯೇ ಮುಗುಳ್ನಕ್ಕು ಪರಿಚಯ ಮಾಡಿಕೊಂಡೆವು. ಮಾತಾಡುತ್ತಿದ್ದಾಗ, ಅವನ ಮನೆ, ನನ್ನ ಮನೆಯ ಹತ್ತಿರವೇ ಇದ್ದಿತ್ತು, ಅಲ್ಲದೆ ಆಫೀಸ್‌ ಕೂಡ ನನ್ನ ಬಿಲ್ಡಿಂಗ್‌ನಲ್ಲಿಯೇ ಇದ್ದಿತ್ತು ಎಂದು ತಿಳಿಯಿತು. ನಾವು ಪರಿಚಯವಾದಾಗಿನಿಂದಲೂ ಹೆಚ್ಚಾಗಿ ಜೊತೆಯಾಗಿಯೇ ಕೆಲಸಕ್ಕೆ ಹೋಗಿ ಬರುತ್ತಿ¨ªೆವು. ಮಧ್ಯಾಹ್ನದ ಲಂಚ್‌ ಟೈಮ್‌ನಲ್ಲಿ ಅವನ ಆಫೀಸಿಗೆ ಹೋಗಿದ್ದಾಗ ಅವನ ಸಹೋದ್ಯೋಗಿಗಳಿಗೂ ನನ್ನನ್ನು ಪರಿಚಯಿಸಿದ್ದ. ನಾನೂ ಅವನನ್ನು ಅದೇ ರೀತಿ ಬರಮಾಡಿ ಗೌರವಿಸಿದ್ದೆ. ನಾವು ಪ್ರತಿದಿನ ನಡೆಯುವಾಗಲೂ, ರೈಲಿನಲ್ಲಿ ಜೊತೆಯಾಗಿ ಪ್ರಯಾಣಿಸುವಾಗಲೂ ಒಂದೊಂದು ವಿಷಯದ ಬಗ್ಗೆ ಚರ್ಚಿಸುತ್ತಿದ್ದೆವು. ಅದು ವೈಯಕ್ತಿಕ ಅಥವಾ ಸಾಮಾಜಿಕ, ರಾಜಕೀಯ ಮತ್ತು ಇನ್ನಿತರ ಯಾವುದೇ ವಿಷಯಗಳಾಗಿರಬಹುದು, ನಮ್ಮ ಮಾತು ಹೆಚ್ಚಾಗಿ ಹಾಸ್ಯ ಚಟಾಕಿಯೊಂದಿಗೆ ಕೂಡಿರುತ್ತಿತ್ತು. 

 ಕೆಲವೊಮ್ಮೆ ರಜಾ ದಿನಗಳಲ್ಲಿ ಸಾಯಂಕಾಲ ಸಾರ್ವಜನಿಕ ಉದ್ಯಾನಗಳಲ್ಲಿ ಅಥವಾ ಸಮುದ್ರ ತಟದಲ್ಲಿ ಕುಳಿತು ಹರಟೆ ಹೊಡೆಯುತ್ತಿ¨ªೆವು. ಕೆಲವೊಮ್ಮೆ ಮಾತಿನ ಭರದಲ್ಲಿ ಸಮಯ ಹೋದದ್ದೇ ತಿಳಿಯುವುದಿಲ್ಲ, ಮನೆಯವರಿಂದ ಮೊಬೈಲ್‌ ಕರೆ ಬಂದಾಗಲೇ ಎಚ್ಚರವಾಗುವುದು. ನಾವು ಮಾತಿಗಿಳಿದರೆ ಕೊನೆಯೇ ಇರುವುದಿಲ್ಲವೆಂದು ನಮ್ಮಿಬ್ಬರ ಮನೆಯವರಿಗೂ ಚೆನ್ನಾಗಿ ಗೊತ್ತಿತ್ತು, ನಮ್ಮಿಬ್ಬರ ಸ್ವಭಾವವು ಇಬ್ಬರ ಮನೆಯವರಿಗೂ ಗೊತ್ತಿದ್ದರಿಂದ ಯಾರ ಅಭ್ಯಂತರವೂ ಇರಲಿಲ್ಲ. ನನ್ನ ಮನೆಯಲ್ಲಿ ಏನಾದರೂ ವಿಶೇಷ ಇದ್ದರೆ ಸಾವಂತ್‌ನನ್ನು ಕರೆಯುತ್ತಿದ್ದೆ. ಅವನು ಕುಟುಂಬಸಮೇತ ತಪ್ಪದೇ ಬರುತ್ತಿದ್ದ. ನಾನೂ ಅವನ ಸುಖ-ದುಃಖದಲ್ಲಿ ಭಾಗಿಯಾಗುತ್ತಿದ್ದೆ. ಅವನು ಸ್ಥಳೀಯನಾಗಿದ್ದರೆ, ನಾನು ಹೊಟ್ಟೆಪಾಡಿಗಾಗಿ ಇಲ್ಲಿ ಬಂದು ನೆಲೆಸಿದವನು. ಆದರೂ ನಮ್ಮಿಬ್ಬರ ನಡುವೆ ಯಾವ ಭೇದಭಾವವೂ ಇರಲಿಲ್ಲ. ಇಬ್ಬರೂ ಒಂದೇ ಕುಟುಂಬದ ಸದಸ್ಯರಂತೆ ಇದ್ದೆವು.      

ಅವನನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಒಂದೇ, ವರ್ಟಿಗೋ. ಪರಿಣತ ವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿ, ಮದ್ದು ಮಾಡಿದರೂ ಅದು ಪೂರ್ಣ ಸ್ವರೂಪದಲ್ಲಿ ಗುಣಮುಖವಾಗಿರಲಿಲ್ಲ. ಇಲ್ಲ ಎಂದರೆ ವರ್ಷ ಕಳೆದರೂ ಬಾಧಿಸುವುದಿಲ್ಲ. ಆದರೆ, ಒಮ್ಮೆ ಶುರುವಾಯಿತೆಂದರೆ ಪದೇ ಪದೇ ತೊಂದರೆ ಕೊಡುತ್ತಿರುತ್ತದೆ. ಅದರ ತೀವ್ರತೆ ಹೆಚ್ಚಾಯಿತೆಂದರೆ ಕೆಲವೊಮ್ಮೆ ಕೆಲಸಕ್ಕೂ ಹೋಗಲು ಸಾಧ್ಯವಾಗುವುದಿಲ್ಲ. ಅವನು ಈ ವಿಷಯವನ್ನು ನನ್ನಲ್ಲಿ ಚರ್ಚಿಸಿದಾಗ ಇದಕ್ಕೆ “ಯೋಗ’ ಸೂಕ್ತ ಮದ್ದು ಎಂದು ನನಗನಿಸುತ್ತದೆ ಎಂದಿದ್ದೆ. ಯಾಕೆಂದರೆ, ಯೋಗಶಿಬಿರದಲ್ಲೊಮ್ಮೆ ನಾನು ಪಾಲ್ಗೊಂಡಿದ್ದಾಗ, ಕೆಲವು ಶಿಬಿರಾರ್ಥಿಗಳು, ಯೋಗದಿಂದ ವರ್ಟಿಗೋ, ಮೈಗ್ರೇನ್‌ ಸಮಸ್ಯೆಯಿಂದ ಪ್ರಯೋಜನ ಪಡೆದದ್ದನ್ನು ಸ್ಮರಿಸಿದ್ದರು. ಆದರೂ, ಇವನು ಇವನ್ನೆಲ್ಲ ಬಹಳ ಸುಲಭವಾಗಿ ನಂಬುವ ವ್ಯಕ್ತಿ ಆಗಿರಲಿಲ್ಲ. ಹಾಗೂ-ಹೀಗೂ ಅವನ ಮನವೊಲಿಸಿ ಯೋಗ ಮಾಡಿಸುವಲ್ಲಿ ಸಫ‌ಲನಾದೆ. ಕೊನೆಗೂ ಒಂದು ವಾರದ ಕೋರ್ಸ್‌ ಮಾಡಿ ಮುಗಿಸಿ ಬಂದವನೇ ಧನ್ಯತೆಯ ಭಾವ ವ್ಯಕ್ತ ಪಡಿಸಿದ್ದಕ್ಕೆ ನನಗೆ ನೆಮ್ಮದಿಯಾಗಿತ್ತು. ಮತ್ತೆ ದಿನಾಲೂ ನಿಯಮಿತವಾಗಿ ಯೋಗ ಮಾಡಿ ತನ್ನ ಆರೋಗ್ಯವನ್ನು ಸುಧಾರಿಸಿಕೊಂಡ ಬಗೆಯನ್ನು ವಿವರಿಸುತ್ತಿದ್ದ.

 ಈ ನಡುವೆ ಇಲ್ಲಿ ಚುನಾವಣೆಯ ಗಾಳಿ ಬೀಸತೊಡಗಿತು. ಎಲ್ಲಾ ಪಕ್ಷದವರು ಮೈ ಕೊಡವಿ ಪ್ರಚಾರಕ್ಕೆ ನಿಂತರು. ಅದರಲ್ಲೂ ಪ್ರಾದೇಶಿಕ ಪಕ್ಷದವರ ಅಬ್ಬರ ಜೋರಾಗಿತ್ತು. ನಮ್ಮ ನೆಲದಲ್ಲೇ ನಾವು ಪರಕೀಯರಾಗಿದ್ದೇವೆ, ನಮ್ಮ ಮಕ್ಕಳಿಗೆ ಸರಿಯಾದ ಉದ್ಯೋಗ, ಮನೆ ಸಿಗುತ್ತಿಲ್ಲ, ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದರೆ ಬಹಳ ಕಷ್ಟ. ಹಾಗಾಗಿ, ಮಣ್ಣಿನ ಮಕ್ಕಳ ರಕ್ಷಣೆ, ಉಳಿವಿಗಾಗಿ ನಾವೆಲ್ಲ ಒಗ್ಗಟ್ಟಾಗಿ ಹೋರಾಡ ಬೇಕಾಗಿದೆ, ಅದಕ್ಕಾಗಿ ನಮ್ಮನ್ನು ಬೆಂಬಲಿಸ ಬೇಕೆಂದು ಪ್ರಚೋದಿಸಿ ಮಾಡಿದ ಭಾಷಣದಿಂದ ಹೆಚ್ಚಿನ ಸ್ಥಾನಿಕರು  ಪ್ರಭಾವಿತರಾದರು. ಸಾವಂತನೂ ಇವರ ಮಾತಿನ ಮೋಡಿಗೆ ಆಕರ್ಷಿತನಾದುದರಲ್ಲಿ ಆಶ್ಚರ್ಯ ಇಲ್ಲ. ತಮ್ಮ ಮಣ್ಣಿನ ಹಿತರಕ್ಷಣೆಗಾಗಿ ಯಾರಾದರೂ ಹೋರಾಡುವುದು ಸಹಜ. ಆದರೆ, ಪ್ರಚೋದಿಸುವವರಿಗೆ ಈ ನೆನಪು ಬರೀ ಮತದಾನದ ಸಮಯದಲ್ಲೇ ಏಕೆ ಬರುತ್ತದೆಂದು ತಿಳಿಯುವುದಿಲ್ಲ. ಒಟ್ಟಾರೆ ಜನರನ್ನು ವಿಭಜಿಸಿ ಓಟು ಗಿಟ್ಟಿಸಿಕೊಳ್ಳುವುದರ ಹೊರತು, ಇವರಲ್ಲಿ ಮಣ್ಣಿನ ಮಕ್ಕಳ ಬಗ್ಗೆ ಯಾವ ಕಾಳಜಿಯೂ ಇದ್ದಂತಿರಲಿಲ್ಲ. ಸಾವಂತ್‌ಗೆ ಯಾಕೋ ಏನೋ ಮೊದಲಿನಿಂದಲೂ ಉತ್ತರ ಭಾರತೀಯರು ಎಂದರೆ ಒಂದು ರೀತಿಯ ಅಲರ್ಜಿ ಇತ್ತು. ಅಲ್ಲದೆ, ಅವನ ಸಹೋದ್ಯೋಗಿಯೊಬ್ಬ , ನಾವು ಮಣ್ಣಿನ ಮಕ್ಕಳು ಜಾಗ್ರತರಾಗಬೇಕೆಂದು ಪದೇ ಪದೇ ಸಾವಂತ್‌ನನ್ನು ಪ್ರಚೋದಿಸುತ್ತಿದ್ದ.  

ಮೊದಲು ಸಾವಂತನಿಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ, ಬದಲಾದ ರಾಜಕೀಯದ ಸನ್ನಿವೇಶದಲ್ಲಿ ಪ್ರೇರಿತನಾದ. ಮತದಾನದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಂತೂ ರಾಜಕೀಯದ ಅಬ್ಬರದ, ವಿರೋಧಾಭಾಸದ, ಒಬ್ಬರನ್ನೊಬ್ಬರ ಕೆಸರೆರೆಚಾಟದ ಸಂದೇಶಗಳೇ ಹೆಚ್ಚಾಗಿ ಓಡಾಡ ತೊಡಗಿದವು. ಒಬ್ಬ ಒಂದು ಪಕ್ಷದ ಪರವಾಗಿ ಸಂದೇಶ ಕಳಿಸಿದರೆ, ಇನ್ನೊಬ್ಬ ಅದಕ್ಕೆ ಪ್ರತಿಯಾಗಿ ಐದಾರು ಸಂದೇಶಗಳನ್ನು ಕಳಿಸುತ್ತಿದ್ದ. ವಾಟ್ಸಾಪ್‌ ಗ್ರೂಪ್‌ಗ್ಳಲ್ಲಿಯಂತೂ ಈ ತರದ ಭರಾಟೆಯ ರಾಜಕೀಯದ ಸಂದೇಶಗಳಲ್ಲಂತೂ ಮನಸ್ಸು ಚಿಟ್ಟು ಹೊಡೆದಿತ್ತು. ಮೊದಲು ಜೀವನ, ಆರೋಗ್ಯ, ಶಿಕ್ಷಣ, ಮಾಹಿತಿಗೆ ಸಂಬಂಧಪಟ್ಟ ಉಪಯುಕ್ತ ಸಂದೇಶಗಳನ್ನು ಕಳಿಸುತ್ತಿದ್ದ ಸಾವಂತ್‌, ಈಗ ರಾಜಕೀಯಕ್ಕೆ ಸಂಬಂಧಪಟ್ಟ ಸಂದೇಶಗಳಿಗೆ ಆದ್ಯತೆ ಕೊಟ್ಟ. ನಾನು ಅದಕ್ಕೆ ಯಾವ ಪ್ರತಿಕ್ರಿಯೆಯೂ ಕೊಡಲಿಲ್ಲ. ವಿಷಯದ ಸತ್ಯಾಂಶ ತಿಳಿಯದೆ, ಬಂದ¨ªೆಲ್ಲವನ್ನೂ ಫಾರ್ವರ್ಡ್‌ ಮಾಡುವ, ಅದರಲ್ಲೂ ಕ್ಷುಲ್ಲಕ, ಅವಹೇಳನಕಾರಿ, ಅಶ್ಲೀಲ, ಪ್ರಚೋದನಕಾರಿ, ಸುಳ್ಳು, ಅತಿರೇಕದ ಸಂದೇಶಗಳಿಂದ ಮತ್ತೆ ಮೌನ ಕಾಪಾಡಲು ಮನಸ್ಸು ಕೇಳಲಿಲ್ಲ. ಕಮೆಂಟ್ಸ… ಬರೆದು ಪ್ರತಿಕ್ರಿಯೆ ಮಾಡಿದಾಗ ಸಾವಂತನಿಗೆ ಹಿಡಿಸಲಿಲ್ಲ. 

ಒಂದು ದಿನ ಮಧ್ಯಾಹ್ನ ಲಂಚ್‌ ಟೈಮ್‌ನಲ್ಲಿ ಸಾವಂತ್‌ ಸಿಕ್ಕಿದಾಗ ಗಂಭೀರನಾಗಿದ್ದ, ಬೇಕು ಬೇಕೆಂದೇ ವಿಷಯವನ್ನು ರಾಜಕೀಯದತ್ತ ಸೆಳೆದ. ನಾನು ಹಲವಾರು ಭಾರಿ ಅದರಿಂದ ತಪ್ಪಿಸಲು ಪ್ರಯತ್ನಪಟ್ಟರೂ ಅವನು ನನ್ನನ್ನು ಎಳೆದು ತರುತ್ತಿದ್ದ. ನನಗೆ ಗೊತ್ತಿತ್ತು, ರಾಜಕೀಯದ ವಿಷಯದಿಂದ ನಮಗಂತೂ ಏನೂ ಪ್ರಯೋಜನ ಇಲ್ಲ, ಬದಲು ನಮ್ಮ ಸಮಯ, ಶಕ್ತಿಯ ವ್ಯರ್ಥ ಹಾಳು, ಅಲ್ಲದೆ ಭಾವನಾತ್ಮಕ ಸಂಬಂಧದಲ್ಲೂ ವಿನಾಕಾರಣ ಬಿರುಕು ಹುಟ್ಟುತ್ತದೆನ್ನುವ ಅಳುಕು ಇದ್ದಿತ್ತು. ಆದರೆ ಅವನಿಗದು ಅರ್ಥವಾಗಲಿಲ್ಲ. ಗೆಳೆಯ ಎನ್ನುವುದನ್ನು ಮರೆತು, ಮನಸ್ಸಿನಲ್ಲಿ ಭೂತ ಹೊಕ್ಕವನಂತೆ ಮಾತಾಡುತ್ತಿದ್ದ. ಬೇಡ ಎಂದರೂ ಅವನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ನನಗೆ ಅನಿವಾರ್ಯವಾಗಿತ್ತು. ಹಾಗಾಗಿ ಮಾತಿಗೆ ಮಾತು ಬೆಳೆದು ಜೋರಾಯ್ತು. ನಾನು ಅವನನ್ನು ಸಮಾಧಾನಿಸಲು ಪ್ರಯತ್ನಪಟ್ಟೆ. ನೋಡು, ನಮಗೆ ರಾಜಕೀಯದ ಪ್ರಜ್ಞೆ ಬೇಡ ಅಂತ ಹೇಳುವುದಿಲ್ಲ. ಹಾಗಂತ ಕಣ್ಣಿದ್ದು ಕುರುಡರಂತೆ ವರ್ತಿಸುವುದೂ ಸರಿಯಲ್ಲವಲ್ಲಾ! ಯಾರು ಏನೋ ಹೇಳುತ್ತಾರೆಂದು ವಿವೇಚನೆ ಮಾಡದೆ ಅದನ್ನು ಪ್ರತಿಪಾದಿಸುವುದರಲ್ಲಿ ಅರ್ಥ ಇಲ್ಲ, ವಿಷಯದ ಆಳಕ್ಕಿಳಿದು ನೋಡಿದಾಗ ಅಥವಾ ಪಕ್ಷದಿಂದ ಮೇಲೆದ್ದು ನಿಂತು ವಿಷಯವನ್ನು ಗ್ರಹಿಸಿದಾಗ ಮಾತ್ರ ವಸ್ತುಸ್ಥಿತಿ ಏನೂಂತ ತಿಳಿಯುವುದು. ಅದನ್ನು ಬಿಟ್ಟು ನಾವು ಮೂರ್ಖರಾಗಿ ನಮ್ಮನ್ನು ನಾವು ಕಳೆದುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ನಾವು ಪ್ರಜ್ಞಾವಂತರಾದಾಗ ಮಾತ್ರ ರಾಷ್ಟ್ರಕಟ್ಟುವಲ್ಲಿ ಸಾಧ್ಯವಾಗುತ್ತದೆ. ಜೊತೆಗೆ ರಾಷ್ಟ್ರಪ್ರೇಮ ಬೆಳೆಸಿಕೊಳ್ಳ ಬೇಕು. ನಮ್ಮಲ್ಲಿರುವ ಸಂಕುಚಿತತೆಯನ್ನು ಬಿಟ್ಟು ನಾವೆಲ್ಲರೂ ಒಂದೇ ಮಾತೆಯ ಮಕ್ಕಳೆನ್ನುವ ಹೃದಯ ವೈಶಾಲ್ಯತೆ ಬೆಳೆಸಬೇಕು. ಆ ಮೂಲಕ ದೇಶದ ಸಮಗ್ರತೆ, ಏಕತೆ, ಅಖಂಡತೆಯನ್ನು ಮೆರೆಸಿ, ಗೌರವಿಸಿ, ಉಳಿಸಲು ಸಾಧ್ಯ. ನಾವು ದೇಶದ ಸರ್ವಾಂಗೀಣ ಪ್ರಗತಿಯ ಬಗ್ಗೆ ಚಿಂತನೆ, ಮಾತುಕತೆ, ಜನಜಾಗ್ರತಿ ನಡೆಸಬೇಕು. ಅದನ್ನು ಬಿಟ್ಟು ನಾವು ಇನ್ನೂ ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿಯ ಹೆಸರಲ್ಲಿ ಕೊಸರಾಡುವಂತಾಗಬಾರದು. ನನ್ನ ನೇರ ಮಾತುಗಳನ್ನು ಕೇಳಲು ಸಾವಂತ್‌ನಲ್ಲಿ ಯಾವ ವ್ಯವಧಾನವೂ ಇರಲಿಲ್ಲ, ಅಲ್ಲಿಂದ ಹೊರಟು ಬಿಟ್ಟ.

 ಆ ಬಳಿಕ ಸಾವಂತ್‌ ನನ್ನ ಜತೆಗಿನ ಒಡನಾಟವನ್ನು ನಿಲ್ಲಿಸಿದ. ಅವನು ಬೇರೆ ರೈಲು ಹಿಡಿದು ಕೆಲಸಕ್ಕೆ ಹೋಗಿ ಬರುತ್ತಿದ್ದುದನ್ನು ಗಮನಿಸಿದೆ. ಮತ್ತೆ ಅವನಿಂದ ವಿಫ‌ುಲವಾಗಿ ಬರುತ್ತಿದ್ದ ವಾಟ್ಸಾಪ್‌  ಸಂದೇಶಗಳಿಗೆ ತೆರೆ ಬಿದ್ದಿತು. ನಾನು ಮೊಬೈಲಲ್ಲಿ ಕರೆ ಮಾಡಿದರೂ ಸ್ವೀಕೃತ ಮಾಡಲಿಲ್ಲ. ಸಂದೇಶ ಕಳಿಸಿದರೂ ಪ್ರತಿಕ್ರಿಯಿಸಲಿಲ್ಲ. ನನಗೂ ಅವನ ವರ್ತನೆ ವಿಚಿತ್ರ ಎನಿಸಿತು. ಇವನಿಗೆ ಮಾನವ ಸ್ಪರ್ಶಕ್ಕಿಂತಲೂ ರಾಜಕೀಯದ ಸ್ಪರ್ಶವೇ ಹೆಚ್ಚಾಯ್ತಲ್ಲ ಎಂದು ಬೇಸರವಾಯ್ತು. ಸಮಯ ಬಂದಾಗ ಎಲ್ಲವೂ ಸರಿ ಹೊಂದುತ್ತದೆಂದು ಮೌನಗೊಂಡೆ.  

ಸುಮಾರು ಒಂದು ವಾರದ ಬಳಿಕ ನನ್ನ ಮೊಬೈಲ್‌ಗೆ ಸಾವಂತ್‌ನಿಂದ ಕರೆ ಬಂತು. ನಾನಾವಾಗ ಆಫೀಸಿನಲ್ಲಿ ತುರ್ತು ಮೀಟಿಂಗ್‌ನಲ್ಲಿ¨ªೆ. ಕರೆ ಸ್ವೀಕೃತ ಮಾಡದಿದ್ದರೆ ಅವನು ಅಪಾರ್ಥ ಮಾಡಿಕೊಳ್ಳುತ್ತಾನೆಂದು ಕೂಡಲೇ ಹೊರಬಂದು ಕರೆ ಸ್ವೀಕರಿಸಿದೆ. ಭಾವುಕನಾಗಿ, “ಹೇಳು ಸಾವಂತ್‌, ಹೇಗಿದ್ದೀಯಾ?’ ಎಂದಾಗ ಎದುರಿನಿಂದ ಹೆಣ್ಣಿನ ಸ್ವರ ಕೇಳಿ ಬಂತು, ನನಗೆ ಕೊಂಚ ಗಾಬರಿಯಾಯ್ತು. ಅವಳು, “ನಾನು ಶ್ವೇತ, ಸಾವಂತ್‌ನ ಆಫೀಸಿನಿಂದ ಮಾತಾಡುತ್ತಿದ್ದೇನೆ. ಸಾವಂತ್‌ನ ಆರೋಗ್ಯ ಒಳ್ಳೆಯದಿಲ್ಲ, ನೀವು ಅವನ ಆತ್ಮೀಯ ಗೆಳೆಯರಲ್ಲವೆ, ಅದಕ್ಕಾಗಿ  ಫೋನ್‌ ಮಾಡಿ ತಿಳಿಸಿದೆ’ ಎಂದಳು.

ನಾನು ಕೂಡಲೇ ಮೀಟಿಂಗ್‌ ಬಿಟ್ಟು ಅವನ ಆಫೀಸಿಗೆ ಓಡಿದೆ. ಅಲ್ಲಿ ಸಾವಂತ್‌ ಕ್ಯಾಬಿನ್‌ನ ಸೋಫಾದಲ್ಲಿ ಅಂಗಾತ ಮಲಗಿದ್ದ. ವರ್ಟಿಗೋದಿಂದ ಹೊರಳಾಡುತ್ತ ನರಳುತ್ತಿದ್ದುದನ್ನು ತಿಳಿದು ವ್ಯಥೆಯಾಯ್ತು. ಯೋಗ ಶುರುಮಾಡಿದ ಬಳಿಕ ಸಾವಂತ್‌ ಯಾವತ್ತೂ ಈ ತರದ ವರ್ಟಿಗೋ ಸಮಸ್ಯೆಯಿಂದ ಬಳಲಿದ್ದನ್ನು ಹೇಳಲಿಲ್ಲ. ಅವನ ಸಹೋದ್ಯೋಗಿಗಳು, “ಸಾವಂತ್‌, ಕೆಲವು ದಿನಗಳಿಂದ ಟೆನ್ಸ್ನ್‌ನಲ್ಲಿದ್ದ, ವಿಷಯ ಏನೆಂದು ಗೊತ್ತಿಲ್ಲ’ ಎಂದರು. ನಾನು ಅವನ ಬಳಿಯಲ್ಲಿದ್ದು ಉಪಚರಿಸುತ್ತಿದ್ದೆ, ಅವನು ಮಾತ್ರೆಯನ್ನು ಮೊದಲೇ ತೆಗೆದುಕೊಂಡಿದ್ದರಿಂದ, ವರ್ಟಿಗೋ ತೀವ್ರತೆ ಸ್ವಲ್ಪ ಮಟ್ಟಿಗೆ ಇಳಿಮುಖವಾಯ್ತು. ಆದರೂ, ಅವನು ಮನೆಗೆ ಒಬ್ಬನೇ ಹೋಗುವ ಸ್ಥಿತಿಯಲ್ಲಿರಲಿಲ್ಲ. ಅಂತಹ ಸಂದರ್ಭದಲ್ಲಿ ಅವನೊಡನೆ ಯಾವ ಸಹೋದ್ಯೋಗಿ ಜತೆಗೂಡುತ್ತಾರೆಂದು ಯೋಚಿಸುತ್ತಿದ್ದೆ. ಮೇಲ್ನೋಟಕ್ಕೆ ಎಲ್ಲರೂ ಕಾಳಜಿ ಇದ್ದವರಂತೆ ತೋರಿದರೂ, ಯಾರೂ ಜೊತೆಗೂಡುವ ಸೂಚನೆ ಕಂಡುಬರಲಿಲ್ಲ. ಸಾವಂತ್‌ನ ಮನೆ ನನ್ನ ಮನೆಯ ಹತ್ತಿರವೇ ಇದ್ದುದರಿಂದ ಅವನ ಜತೆಗೂಡಲು ಅವನ ಸಹೋದ್ಯೋಗಿ ನನಗೆ ವಿಷಯ ತಿಳಿಸಿ¨ªೆಂದು ಕೊನೆಗೆ ಅರ್ಥವಾಯ್ತು. ಅದಾಗಲೇ ಆಫೀಸು ಬಿಡುವ ಸಮಯವಾದ್ದರಿಂದ ಎಲ್ಲರೂ ತಮ್ಮ ತಮ್ಮ ಮನೆಗೆ ಹೊರಡುವ ಆತುರದಲ್ಲಿದ್ದರು. ಮಣ್ಣಿನ ಮಕ್ಕಳೆಂದು ರಾಗ ಎಳೆದು ಪ್ರಚೋದಿಸುತ್ತಿದ್ದ ಸಾವಂತ್‌ನ ಸಹೋದ್ಯೋಗಿ ಕೂಡ ಸಹಾಯಕ್ಕೆ ಬರಲಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ನಾನು ಉಬರ್‌ ಬುಕ್‌ ಮಾಡಿ ಸಾವಂತ್‌ನನ್ನು ಮನೆಗೆ ತಲುಪಿಸಿ ಬಂದೆ, ಆವಾಗ ರಾತ್ರಿ ಹನ್ನೆರಡರ ಮೇಲಾಗಿತ್ತು.  

ಮರುದಿನ ಎಂದಿನಂತೆ ಬೆಳಗ್ಗೆ ರೈಲು ಹಿಡಿಯಲು ರೈಲು ನಿಲ್ದಾಣದ ತಲುಪಿದಾಗ ಸಾವಂತ್‌ ಮೊದಲೇ ಅಲ್ಲಿ ಬಂದು ನಿಂತಿದ್ದ. ನನ್ನನ್ನು ನೋಡಿದವನೇ ಹತ್ತಿರ ಬಂದು ನನ್ನನ್ನು ಅಪ್ಪಿ ಹಿಡಿದು “ತಪ್ಪಾಯ್ತು, ಕ್ಷಮಿಸು’ ಎಂದ! ಆಗ ಅವನ ಕಣ್ಣಂಚಿನಲ್ಲಿ  ನೀರು ಹನಿಗೂಡಿದನ್ನು ಗಮನಿಸಿದೆ!           
ಮೋಹನ ಕುಂದರ್‌

ಟಾಪ್ ನ್ಯೂಸ್

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.