ಕಸದ ರಾಶಿ, ನೀರಿನ ಸಂಪಿನಲ್ಲಿ ಕ್ರಿಮಿಗಳು
Team Udayavani, Jul 15, 2018, 11:19 AM IST
ಹಳೆಯಂಗಡಿ : ಮೂಲೆಯಲ್ಲಿ ಕಸದ ರಾಶಿ, ತೆರಿದಿಟ್ಟ ಚರಂಡಿ, ನೀರಿನ ಸಂಪಿನಲ್ಲಿ ಕೊಳೆತ ವಾಸನೆ ಜತೆಗೆ ಕ್ರಿಮಿಕೀಟ ಇದು ಹಳೆಯಂಗಡಿ ಮಾರುಕಟ್ಟೆಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಭೇಟಿ ನೀಡಿದಾಗ ಕಂಡುಬಂದ ದೃಶ್ಯಗಳು..!
ಹಳೆಯಂಗಡಿಯ ಒಳಪೇಟೆಯಲ್ಲಿರುವ ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಜು. 14ರಂದು ದಿಢೀರ್ ಭೇಟಿ ನೀಡಿದ ಶಾಸಕರು ಅಲ್ಲಿನ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಕಂಡು ಪತ್ರಕರ್ತರಿಗೆ ಪ್ರತಿಕ್ರಿಯಿಸಿ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸ್ಥಳೀಯವಾಗಿ ನಿರ್ವಹಣೆಯನ್ನು ಹೊತ್ತಿರುವ ಗ್ರಾಮ ಪಂಚಾಯತ್‌ನ ಜವಾಬ್ದಾರಿ ಎತ್ತಿ ತೋರಿಸುತ್ತಿದೆ. ವ್ಯವಸ್ಥಿತವಾದ ಮಾರುಕಟ್ಟೆ ಇರಬೇಕಾದ ಇಲ್ಲಿನ ಪರಿಸ್ಥಿತಿಗೆ ಕಾರಣರಾದವರ ಬಗ್ಗೆ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದರು.
ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾ.ಪಂ. ಸದಸ್ಯ ವಿನೋದ್‌ಕುಮಾರ್ ಕೊಳುವೈಲು, ಪಿಸಿಎ ಬ್ಯಾಂಕ್‌ನ ನಿರ್ದೇಶಕ ಹಿಮಕರ್ ಕದಿಕೆ, ಎಚ್.ರಾಮಚಂದ್ರ ಶೆಣೈ, ಮನೋಜ್ ಕುಮಾರ್, ಅನಿಲ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಅವ್ಯವಸೆ; ದೂರು
ಅಂಗಡಿ ಮಾಲಕರು ಶಾಸಕರಲ್ಲಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ದೂರುಗಳನ್ನು ನೀಡಿದರಲ್ಲದೆ, ಮೀನು ಮಾರುಕಟ್ಟೆಯಾಗಿರಬೇಕಾದ ವ್ಯವಸ್ಥೆ ಇಲ್ಲದಿರುವುದರಿಂದಲೇ ಮೀನು ಮಾರಾಟಗಾರರು ಪೇಟೆಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪಂಚಾಯತ್‌ಗೂ ತಿಳಿಸಿದ್ದರೂ ಪ್ರಯೋಜನ ಇಲ್ಲ ಎಂದು ದೂರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.