ದ.ಕ.ಕ್ಕೆ 4 ವರ್ಷದಲ್ಲಿ ಕೇಂದ್ರದಿಂದ 14 ಸಾವಿರ ಕೋ.ರೂ. ಅನುದಾನ
Team Udayavani, Jul 15, 2018, 12:23 PM IST
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 4 ವರ್ಷಗಳಲ್ಲಿ ದ.ಕ. ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 14,000 ಕೋ.ರೂ. ಮಂಜೂರು ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ಅವರು ಶನಿವಾರ ಮಂಗಳೂರು ಆಕಾಶವಾಣಿ ಕೇಂದ್ರದ “ಚಾವಡಿ ಮದಿಪು’ ತಿಂಗಳ ಫೋನ್- ಇನ್ ಕಾರ್ಯಕ್ರಮದಲ್ಲಿ ಹೇಳಿದರು. ಹೆದ್ದಾರಿಗಳ ಅಭಿವೃದ್ಧಿಗೆ 7646 ಕೋ.ರೂ, ರೈಲ್ವೇ ಯೋಜನೆಗಳಿಗೆ 1,243 ಕೋ.ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಮಂಗಳೂರಿಗೆ ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಯೋಜನೆಗಳು ಮಂಜೂರಾಗಿವೆ ಎಂದರು.
ಉಜ್ವಲ ಯೋಜನೆಯಡಿ 18,000 ಗ್ಯಾಸ್ ಸಂಪರ್ಕ ನೀಡಲಾಗಿದೆ. 50,000 ಜನರಿಗೆ ಮುದ್ರಾ ಯೋಜನೆಯಲ್ಲಿ 800 ಕೋ.ರೂ ಸಾಲ ವಿತರಿಸಲಾಗಿದೆ. ಜಿಲ್ಲೆಯಲ್ಲಿ 3.68 ಲಕ್ಷ ಜನಧನ್ ಖಾತೆಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು. ಕೇಂದ್ರ ಸರಕಾರವು ಜಿಲ್ಲೆಗೆ ಗ್ರಾಮ ಸಡಕ್ ಯೋಜನೆಯಡಿ 64 ಕೋಟಿ ರೂ. ಅನುದಾನ ನೀಡಿದೆ. ಅಕ್ಷರ ದಾಸೋಹಕ್ಕೆ 92 ಕೋ.ರೂ., ಶಿಕ್ಷಣ ಕ್ಷೇತ್ರಕ್ಕೆ 35.28 ಕೋ.ರೂ., ಆರೋಗ್ಯ ಕ್ಷೇತ್ರಕ್ಕೆ 22 ಕೋ.ರೂ. ಹಾಗೂ ವಿವಿಧ ಯೋಜನೆಗಳ ಜಾರಿಗೆ ಜಿ. ಪಂ.ಗೆ 346 ಕೋ.ರೂ. ನೆರವು ಒದಗಿಸಿದೆ ಎಂದರು. 100 ಜೆನರಿಕ್ ಔಷಧ ಕೇಂದ್ರ,ಬಡತನ ನಿರ್ಮೂಲನೆ ಉದ್ದೇಶದ ಮಿಷನ್ ಅಂತ್ಯೋದಯ ಯೋಜನೆಗೆ ಜಿಲ್ಲೆಯ 97 ಗ್ರಾಮ ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಳಿನ್ ತಿಳಿಸಿದರು. ಸರ್ವ ಶಿûಾ ಅಭಿಯಾನಕ್ಕೆ 6.28 ಕೋಟಿ ರೂ., ಮಾಧ್ಯಮಿಕ ಶಿಕ್ಷಣಕ್ಕೆ 29 ಕೋಟಿ ರೂ., ಅಕ್ಷರ ದಾಸೋಹಕ್ಕೆ 92 ಕೋಟಿ ನೀಡಲಾಗಿದೆ. ಕುಲಶೇಖರ-ಗುರುಪುರ-ಕಾರ್ಕಳ ರಾ.ಹೆ. ನಿರ್ಮಾಣಕ್ಕೆ ಟೆಂಡರ್ ಆಗಿದೆ ಎಂದು ಸಂಸದರು ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.