ಭಾರತದ ಹೆಮ್ಮೆ ಹಿಮಾ ದಾಸ್ ಮೂಡಿಬರಲಿ ಇನ್ನಷ್ಟು ಪ್ರತಿಭೆ
Team Udayavani, Jul 16, 2018, 8:59 AM IST
ಫಿನ್‌ಲಾÂಂಡ್‌ನಲ್ಲಿ ಜರಗಿದ 20ರ ಕೆಳಹರೆಯದವರ ಐಎಎಫ್ ಜಾಗತಿಕ ಕ್ರೀಡಾಕೂಟದ 400 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಅಸ್ಸಾಮಿನ ಹುಡುಗಿ ಹಿಮಾ ದಾಸ್ ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ಧರಾಗಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಕೂಟದ ಓಟದ ಸ್ಪರ್ಧೆಗಳಲ್ಲಿ ಭಾರತದ ಮಹಿಳೆಯರು ಪ್ರಶಸ್ತಿ ಗೆದ್ದಿರುವುದು ಇದೇ ಮೊದಲು. ಹೀಗಾಗಿ ಹಿಮಾ ದಾಸ್ ಗೆದ್ದಿರುವ ಚಿನ್ನದ ಪದಕದ ತೂಕ ಇನ್ನೂ ಹೆಚ್ಚಾಗಿದೆ. ಇಡೀ ದೇಶ ಹೆಮ್ಮೆ ಪಡುವಂತಹ ಸಾಧನೆಯನ್ನು ಈ ಹಳ್ಳಿಗಾಡಿನ ಹುಡುಗಿ ಮಾಡಿದ್ದಾರೆ. ಪಿ.ಟಿ. ಉಷಾ ಹಾಗೂ ಇತರ ಕೆಲವು ಮಂದಿ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್‌ನಂಥ ಕ್ರೀಡಾಕೂಟಗಳಲ್ಲಿ ಪಾರಮ್ಯ ಸಾಧಿಸಿದ ದಿನಗಳಿದ್ದವು. ಆದರೆ ಈ ಒಂದು ತಲೆಮಾರಿನ ಓಟ ಮುಗಿದ ಬಳಿಕ ಭಾರತೀಯ ಅಥ್ಲೆಟಿಕ್ ಕಳಾಹೀನವಾಗಿತ್ತು. ಹಿಮಾ ದಾಸ್ ಸಾಧನೆ ಮತ್ತೂಮ್ಮೆ ದೇಶದ ಅಥ್ಲೆಟಿಕ್ಸ್‌ನಲ್ಲಿ ಮಿಂಚು ಹರಿಸಿದೆ.
ಒಂದು ವರ್ಷದ ಹಿಂದೆಯಷ್ಟೇ 400 ರೇಸ್ ಅಭ್ಯಾಸ ಪ್ರಾರಂಭಿಸಿದ ಹಿಮಾ ಮೊದಲ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲೇ ಚಿನ್ನ ಗೆಲ್ಲುವ ಸಾಧನೆ ಮಾಡಿರುವುದು ಬೆರಗು ಮೂಡಿಸಿದೆ. ಆರಂಭದಲ್ಲಿ ಹಿಮಾ 100 ಮತ್ತು 200 ಮೀಟರ್ ರೇಸ್‌ಗಳಲ್ಲಿ ಭಾಗವಹಿಸು ತ್ತಿ ದ್ದರು. ಆದರೆ ನಿಧಾನಗತಿಯಿಂದ ಓಟ ಪ್ರಾರಂ ಭಿಸಿ ಅಂತಿಕ ಕ್ಷಣದಲ್ಲಿ ವೇಗ ಪಡೆದುಕೊಳ್ಳುವ ಓಟದ ಶೈಲಿ ಈ ರೇಸ್‌ಗಳಿಗಿಂತ ಹೆಚ್ಚು 400 ಮೀಟರ್ ರೇಸ್‌ಗೆ ಸರಿ ಹೊಂದುತ್ತದೆ. ಕೋಚ್ ಈ ಅಂಶವನ್ನು ಗುರುತಿಸಿ 400 ಮೀ. ರೇಸ್‌ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ ಪರಿಣಾಮವಾಗಿ ದೇಶ ಅಪರೂಪದ ಕ್ರೀಡಾ ಸಾಧಕಿಯನ್ನು ಕಾಣುವಂತಾಗಿದೆ. ಹಿಮಾ ಸಾಧನೆಯ ಹಿಂದೆ ಕೋಚ್ ಪಾತ್ರವನ್ನು ಮರೆಯುವಂತಿಲ್ಲ. ಉಳಿದವರು ಓಟದ ಅಂತಿಮ ಚರಣಕ್ಕೆ ಬಂದಾಗ ಬಳಲುವುದು ಸಾಮಾನ್ಯ. ಆದರೆ ಹಿಮಾ ದಾಸ್ ಅಂತಿಮ ಚರಣದಲ್ಲೇ ಚೈತನ್ಯ ಪಡೆದುಕೊಳ್ಳುತ್ತಾರೆ. ಇದು ಅಪರೂಪದ ಸಾಮರ್ಥ್ಯ.
ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾರ್, ಕುಸ್ತಿಯ ಕಲಿ ಸಾಕ್ಷಿ ಮಲಿಕ್, ಆರ್ಚರಿ ಸಾಧಕಿ ದೀಪಿಕಾ ಕುಮಾರಿ, ಸ್ಕ್ವಾಶ್ ಆಟ ಗಾರ್ತಿ ದೀಪಿಕಾ ಪಳ್ಳಿಕ್ಕಲ್, ಟೆನಿಸ್ ಆಟಗಾರ್ತಿ ಸಿಂಧು ಹೀಗೆ ಅಂತರಾಷ್ಟ್ರೀ ಮಟ್ಟದಲ್ಲಿ ದೇಶಕ್ಕೆ ಕೀತಿ ತಂದುಕೊಡುತ್ತಿರುವ ಕುವರಿಯರ ಸಂಖ್ಯೆ ಹೆಚ್ಚುತ್ತಿದೆ. ಹೆಣ್ಣು ಮಗು ಹೊರೆ ಎಂಬ ಪರಂಪರಾಗತ ನಂಬಿಕೆಯಿನ್ನೂ ಜೀವಂತವಾಗಿರುವಾಗಲೇ ಇದನ್ನು ಸುಳ್ಳು ಮಾಡಲೋ ಎಂಬಂತೆ ಹೆಣ್ಣು ಮಕ್ಕಳು ಕ್ರೀಡೆಯೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದು ನಿಜ ವಾದ ಮಹಿಳಾ ಸಬಲೀಕರಣದಂತೆ ಕಾಣುತ್ತಿದೆ. ಒಂದೆಡೆ ಹೆಣ್ಣು ಭ್ರೂಣಗಳ ಹತ್ಯೆ ತಡೆಯಲು ಬೇಟಿ ಬಚಾವೊ ಬೇಟಿ ಪಢಾವೋ ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದ್ದರೆ ಇನ್ನೊಂದೆಡೆ ಅದೇ ಹೆಣ್ಣು ಮಕ್ಕಳು ದೇಶದ ಕೀರ್ತಿ ಪತಾಕೆಯನ್ನು ಜಗದೆಲ್ಲೆಡೆ ಹಾರಿಸುತ್ತಿರುವುದು ಒಂದು ರೀತಿಯಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯ ವಿಡಂಬನೆಯಂತೆಯೂ ಕಾಣಿಸುತ್ತಿದೆ.
ಚಿನ್ನದ ಪದಕ ಗೆದ್ದ ಬೆನ್ನಿಗೆ ಹಿಮಾ ದಾಸ್‌ಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ರಾಜ್ಯದ ಉಪಮುಖ್ಯಮಂತ್ರಿ ಡಾ| ಪರಮೇಶ್ವರ 10 ಲ. ರೂ. ಬಹುಮಾನ ಘೋಷಿಸಿದ್ದಾರೆ. ಇದೇ ರೀತಿ ಹಲವು ರಾಜ್ಯಗಳು ಬಹುಮಾನಗಳನ್ನು ಘೋಷಿಸಿವೆ. ಕೇಂದ್ರ ಸರಕಾರ 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ತನಕದ ಎಲ್ಲ ಖರ್ಚುವೆಚ್ಚವನ್ನು ಭರಿಸುವುದಾಗಿ ಹೇಳಿದೆ. ಆದರೆ ಇದೇ ವೇಳೆ ದೇಶದ ಹಳ್ಳಿಗಾಡುಗಳಲ್ಲಿ ಇರುವ ಅದೆಷ್ಟೋ ಹಿಮಾ ದಾಸ್‌ಗಳನ್ನು ಶೋಧಿಸುವ ಕೆಲಸವೂ ಆಗಬೇಕು. ಕ್ರೀಡಾ ಕ್ಷೇತ್ರದಲ್ಲಿ ನಮಗೆ ಗಮನಾರ್ಹವಾದ ಸಾಧನೆ ಮಾಡಲು ಸಾಧ್ಯವಾಗದಿರುವುದಕ್ಕೆ ಪ್ರೋತ್ಸಾಹ ಕೊರತೆಯೂ ಕಾರಣ ಎನ್ನುವುದು ಒಪ್ಪಿಕೊಳ್ಳಲೇ ಬೇಕಾದ ಸತ್ಯ.
ಪ್ರತಿಭಾವಂತ ಕ್ರೀಡಾಪಟುಗಳಿಗೆ ತರಬೇತಿ ನೀಡಲೆಂದೇ ಭಾರತೀಯ ಕ್ರೀಡಾ ಪ್ರಾಧಿಕಾರ ಇದ್ದರೂ ಇಲ್ಲಿ ತರಬೇತಿ ಪಡೆದವರಿಗಿಂತ ಹಿಮಾ ದಾಸ್ ಅವರಂತೇ ಹಳ್ಳಿಗಾಡುಗಳಲ್ಲಿ ಆಡಿ-ಓಡಿ ಅಭ್ಯಾಸ ಮಾಡಿದವರೇ ಪದಕ ಗೆಲ್ಲುವ ಸಾಧನೆ ಮಾಡುತ್ತಿದ್ದಾರೆ ಎನ್ನುವುದು ಗಮನಾರ್ಹ ಅಂಶ. ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಲು ನಮ್ಮ ಕ್ರೀಡಾ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.