ಹೊಸಬರ ಕೌರ್ಯಕ್ಕೆ ಚಾಲನೆ, ಟೀಮ್ ಶಂಕರ್‌ನಾಗ್ ತಂಡದ ಹೊಸ ಚಿತ್ರ
Team Udayavani, Jul 16, 2018, 2:00 PM IST
ಈ ಹಿಂದೆ “ಟೀಮ್ ಶಂಕರ್‌ನಾಗ್’ ಹೆಸರಿನ ತಂಡವೊಂದು ಸಿನಿಮಾ ಸಂಬಂಧಿಸಿದ ಕೆಲ ಪ್ರಚಾರ ಕಾರ್ಯ ಶುರುವಿಟ್ಟುಕೊಳ್ಳುವ ಮೂಲಕ ಒಂದು ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿತ್ತು. ಆ ಕುರಿತು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಬರೋಬ್ಬರಿ ಮೂರು ವರ್ಷಗಳ ಬಳಿಕ ಟೀಮ್ ಶಂಕರ್‌ನಾಗ್ ತಂಡ ಹೀಗೊಂದು ಹೊಸ ಚಿತ್ರಕ್ಕೆ ಕೈ ಹಾಕಿದೆ. ಅಷ್ಟೇ ಅಲ್ಲ, ಸದ್ದಿಲ್ಲದೆ ಆ ಚಿತ್ರಕ್ಕೆ ಚಾಲನೆಯನ್ನೂ ಕೊಟ್ಟಿದೆ. ಆ ಚಿತ್ರದ ಹೆಸರು “ಕೌರ್ಯ’. ಈ ಚಿತ್ರದ ಮೂಲಕ ಅನಿಲ್ ನಿರ್ದೇಶಕರಾಗುತ್ತಿದ್ದಾರೆ.
ಕೈಯಲ್ಲಿದ್ದ ಕೆಲಸ ಬಿಟ್ಟು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವ ಅನಿಲ್ ಜೊತೆಗೆ ನಿರ್ದೇಶನದಲ್ಲಿ ಸುರೇಶ್ ಕೂಡ ಸಾಥ್ ನೀಡುತ್ತಿದ್ದಾರೆ. ಇನ್ನು, ನವೀನ್ ತೀರ್ಥಹಳ್ಳಿ ಈ ಚಿತ್ರದ ಹೀರೋ. ಹೊಸಬರ ಈ ತಂಡಕ್ಕೆ ಲೀಲ ಮೋಹನ್ ಬೆನ್ನೆಲುಬು. ಅಂದರೆ, “ಕೌರ್ಯ’ ಚಿತ್ರದ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರ. ರಾಬರಿ, ಮರ್ಡರ್ ಮಿಸ್ಟ್ರಿ ಕೂಡ ಇಲ್ಲಿರಲಿದೆ. ಪಕ್ಕಾ ಮಾಸ್ ಅಂಶಗಳೊಂದಿಗೆ ಚಿತ್ರ ಕಥೆ ಸಾಗಲಿದ್ದು, ಇಲ್ಲಿ ಸಾಕಷ್ಟು ಏರಿಳಿತಗಳು ಚಿತ್ರದ ಹೈಲೆಟ್. ಈಗಿನ ಜನರೇಷನ್‌ಗೆ ತಕ್ಕ ಕಥೆ ಇಲ್ಲಿದೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರ ಮಾಡಬೇಕು ಅಂತ ನಿರ್ದೇಶಕರು ಮೂರು ವರ್ಷಗಳಿಂದಲೂ ತಯಾರಿ ನಡೆಸುತ್ತಲೇ ಇದ್ದದ್ದಕ್ಕೆ ಈಗ ಆ ಕಾಲ ಕೂಡಿಬಂದಿದೆ. ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶಂಕರ್‌ನಾಗ್ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ಅಥವಾ ಟ್ರೇಲರ್ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
ಈ ಚಿತ್ರದ ನಾಯಕ ನವೀನ್ ತೀರ್ಥಹಳ್ಳಿ ಇದಕ್ಕಾಗಿಯೇ ಸಾಕಷ್ಟು ಶ್ರಮಪಟ್ಟಿದ್ದಾರಂತೆ. ಮಾರ್ಷಲ್ ಆರ್ಟ್ಸ್ ತರಬೇತಿಯಲ್ಲಿ ಪಕ್ವಗೊಂಡು, ಚಿತ್ರಕ್ಕೆ ಅಣಿಯಾಗಿದ್ದಾರೆ.
“ಕೌರ್ಯ’ ತಡವಾದರೂ, ಪ್ರಯತ್ನ ಬಿಡದ ನವೀನ್ ತೀರ್ಥಹಳ್ಳಿ, ಈಗ ಒಳ್ಳೆಯ ತಂಡದ ಜೊತೆ ಕೆಲಸ ಮಾಡಲು ಉತ್ಸುಕತೆಯಲ್ಲಿದ್ದಾರೆ. ಇನ್ನು, ಈ ಚಿತ್ರಕ್ಕೆ ನೈನಾ (ನಯನಾ) ನಾಯಕಿ. ಇವರಿಗೆ ಇದು ಮೊದಲ ಚಿತ್ರ. ಈಗಷ್ಟೇ ಪದವಿ ಮುಗಿಸಿರುವ ಅವರಿಗೆ ಇದು ಹೊಸ ಅನುಭವ. ಚಿತ್ರಕ್ಕೆ ಪೌಲ್ ಛಾಯಾಗ್ರಹಣ ಮಾಡಿದರೆ, ವಿನೋದ್ ಮತ್ತು ಸುದಾನ್ ಸಂಗೀತ ನೀಡುತ್ತಿದ್ದಾರೆ.
ಚಿತ್ರದಲ್ಲಿ ಶಶಾಂಕ್ ಎಂಬ ಹೊಸ ಪ್ರತಿಭೆ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಚಿತ್ರದ ಬರವಣಿಗೆಯಲ್ಲಿ ಪೂಜಾ, ಶ್ರೀನಿವಾಸ್, ರಮ್ಯಾ, ಕೈಫ್ ಅವರ ಸಹಕಾರವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.