ರೈತರು ಸರಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ
Team Udayavani, Jul 16, 2018, 4:52 PM IST
ಅಮೀನಗಡ: ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ರೈತರು ಅದರ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಬಲಾಡ್ಯರಾಗಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. ಪಟ್ಟಣದ ರೈತ ಸಂಪರ್ಕದ ಕೇಂದ್ರ ಆವರಣದಲ್ಲಿ ರವಿವಾರ ನಡೆದ 2018-19 ಸಾಲಿನ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಇಂದಿನ ಆಧುನಿಕ ಯುಗಕ್ಕೆ ಹೊಸ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಇದರ ಪ್ರಯೋಜನ ಪಡೆಯಬೇಕು. ರೈತರಿಗೆ ಅನುಕೂಲವಾಗವಂತ ಕಾರ್ಯಕ್ರಮವನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ರಾಜ್ಯ ಸರ್ಕಾರ ಮೊನ್ನೆ ಜಾರಿ ಮಾಡಿರುವ ಸಾಲಮನ್ನಾ ಗೊಂದಲಮಯವಾಗಿದೆ. ಸಕಾಲದಲ್ಲಿ ರೈತರಿಗೆ ನೀರು ಮತ್ತು ವಿದ್ಯುತ್ ನೀಡಿದರೆ ಯಾವ ರೈತರು ಕೂಡಾ ಸಾಲಮನ್ನಾ ಮಾಡಿ ಎಂದು ಬೇಡಿಕೆ ಇಡುತ್ತಿದ್ದಿಲ್ಲಾ ಹಾಗೂ ಸಾಲಮನ್ನಾ ಮಾಡುವ ಪ್ರಸ್ತಾಪವೇ ನಿರ್ಮಾಣ ಆಗುತ್ತಿದ್ದಿಲ್ಲ. ಅದು ಸರಿಯಾಗಿ ನೀಡಿಲ್ಲ. ಇದರಿಂದ ಸಮಸ್ಯೆ ಉದ್ಬವಿಸಿದೆ. ಇಂತಹ ಸಮಸ್ಯೆಯಲ್ಲೂ ಕೂಡಾ ಕೃಷಿ ನಡಿತಾಯಿದೆ. ಆದರೆ ಈ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರೈತರಿಗೆ ಎರಡು ಅತಿದೊಡ್ಡ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮುಖ್ಯವಾಗಿ ಫಸಲು ವಿಮಾ ಯೋಜನೆ ಅದರಲ್ಲಿ ಜಿಲ್ಲೆಗೆ 122 ಕೋಟಿ ಬಂದಿದೆ. ಇದರಲ್ಲಿ 78 ಕೋಟಿ ಬಿಡುಗಡೆಯಾಗಿದೆ. ಇನ್ನು ಎರಡನೇ ಕಂತು ಬಿಡುಗಡೆಯಾಗುವ ಹಂತದಲ್ಲಿದೆ ಫಸಲ್ ಬಿಮಾ ಯೋಜನೆಯಿಂದ ರೈತರು ಆರ್ಥಿಕವಾಗಿ ಬೆಳವಣಿಗೆಯಾಗಲು ಅನುಕೂಲವಾಗಿದೆ ಎಂದರು.
ಕೇಂದ್ರ ಸರ್ಕಾರ ರೈತರ ಸುಮಾರು ಧಾನ್ಯಗಳ ಬೆಂಬಲ ಬೆಲೆ ಹೆಚ್ಚು ಮಾಡಿದೆ. ಅದು 200 ರೂ.ನಿಂದ 1800 ರೂ.ವರೆಗೆ ಹೆಚ್ಚಿಸಿದೆ. ಅದರಲ್ಲಿ ಕೆಲವು ಧಾನ್ಯಗಳ ಬೆಲೆ ದ್ವಿಗುಣ ಆಗಿದೆ. ಒಟ್ಟಾರೆ 14 ರಿಂದ 18 ಬೆಳೆಗಳ ನಿಗದಿತ ಬೆಂಬಲ ಬೆಲೆ ನಿಗದಿ ಮಾಡಿದ. ಆ ರೀತಿ ಬೆಂಬಲ ಪ್ರಕಾರ ರೈತರ ಬೆಳಗಳನ್ನು ಖರೀದಿ ಮಾಡಿ ಇಟ್ಟರೆ. ಈ ಫಸಲ ವಿಮಾ ಯೋಜನೆ ಸರಿಯಾಗಿ ರೈತರಿಗೆ ಮುಟ್ಟಿದರೆ ಅದು ರೈತರಿಗೆ ಅನುಕೂಲವಾಗಬಹುದು ಎಂಬ ಉದ್ದೇಶದಿಂದ ಇಡೀ ದೇಶದಲ್ಲಿ ಕೇಂದ್ರ ಸರ್ಕಾರ ಗೋದಾಮುಗಳನ್ನು ಹೆಚ್ಚು ಮಾಡುವುದಕ್ಕೆ ರೈತರ ಬೆಳೆಗಳನ್ನು ಖರೀದಿ ಮಾಡಲಾಗುತ್ತಿದೆ. ಆದರಿಂದ ಇಂತಹ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ರಮೇಶ ಕುಮಾರ ಮಾತನಾಡಿದರು. ತಾಪಂ ಅಧ್ಯಕ್ಷ ಅರವಿಂದ ಈಟಿ, ಕೆಎಂಎಫ್ ಅಧ್ಯಕ್ಷ ಸಂಗಣ್ಣ ಹಂಡಿ, ಹುನಗುಂದ ಎಪಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ನಾಲತ್ತವಾಡ, ತಾಪಂ ಸದಸ್ಯ ಮಂಜುನಾಥ ಗೌಡರ, ಹೊಳಿಯಪ್ಪಗೌಡ ಗೌಡ್ರ, ಎಪಿಎಂಸಿ ನಿರ್ದೇಶಕರಾದ ಮಾನಪ್ಪ ಚಿಗರನ್ನವರ, ಆಶಾದೇವಿ ಚಾಪಿ, ಪಪಂ ಸದಸ್ಯ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಶೇಖಪ್ಪ ಲಮಾಣಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.