ರೊನಾಲ್ಡೊ ಟೀ ಶರ್ಟ್‌ಗಳನ್ನು ಮಾರಿ 420 ಕೋಟಿ ರೂ. ಗಳಿಕೆ
Team Udayavani, Jul 18, 2018, 6:00 AM IST
ರೋಮ್(ಇಟಲಿ): ಇತ್ತೀಚೆಗಷ್ಟೇ ವಿಶ್ವವಿಖ್ಯಾತ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 970 ಕೋಟಿ ರೂ.ಗೆ ಇಟಲಿಯ ಜ್ಯುವೆಂಟಸ್ ಕ್ಲಬ್‌ಗ ಮಾರಾಟಗೊಂಡಿದ್ದಾರೆ. ದೀರ್ಘಕಾಲ ರಿಯಲ್ ಮ್ಯಾಡ್ರಿಡ್‌ನಲ್ಲಿದ್ದ ರೊನಾಲ್ಡೊ ಜ್ಯುವೆಂಟಸ್‌ಗೆ ಹಾರಿದ್ದನ್ನು ಮರೆಯುವ ಮುನ್ನವೇ ಮತ್ತೂಂದು ಸುದ್ದಿ ಹೊರಬಿದ್ದಿದೆ.
ಜ್ಯುವೆಂಟಸ್ ಕ್ಲಬ್ ರೊನಾಲ್ಡೊ ಹೆಸರಿನ ಟೀಶರ್ಟ್ ಮಾರಿಯೇ 420 ಕೋಟಿ ರೂ. ಗಳಿಸಿದೆ. ಈ ಮೊತ್ತ ಮತ್ತಷ್ಟು ಏರಿಕೆಯಾಗಲಿದೆ! ಜ್ಯುವೆಂಟಸ್ ಸಿಆರ್7 ಹೆಸರಿನ ಟೀಶ ರ್ಟನ್ನು ಮಾರುಕಟ್ಟೆಗೆ ಬಿಟ್ಟಿದೆ. ಅಂತ ರ್ಜಾಲದಲ್ಲಿ 5 ಲಕ್ಷ ಟೀಶರ್ಟ್‌ಗಳು ಮಾರಾಟವಾಗಿದ್ದರೆ, ಮಳಿಗೆಗಳಲ್ಲಿ
ಕೆಲವೇ ಗಂಟೆಗಳಲ್ಲಿ 20 ಸಾವಿರ ಟೀಶರ್ಟ್ ಬಿಕರಿಯಾಗಿವೆ! ರೊನಾಲ್ಡೊ ಟೀಶರ್ಟ್‌ಗಾಗಿ ಬೇಡಿಕೆ ಸತತವಾಗಿ ಏರುತ್ತಲೇ ಇದೆ. ಆದ್ದರಿಂದ ಬಹುತೇಕ ರೊನಾಲ್ಡೊ ಖರೀದಿಗೆ ನೀಡಿದ ಮುಕ್ಕಾಲು ಭಾಗ ಹಣವನ್ನು ಟೀಶರ್ಟ್ ಮಾರಾಟ ಮೂಲಕವೇ ಜ್ಯುವೆಂಟಸ್ ಪಡೆದುಕೊಳ್ಳುವ ಸಾಧ್ಯತೆಯಿದೆ! ಪ್ರಾರಂಭದಲ್ಲಿ ರಿಯಲ್ ಮ್ಯಾಡ್ರಿಡ್ ನಿಂದ ರೊನಾಲ್ಡೊ ಮಾರಾಟ ಮೊತ್ತ ಅಂದಾಜು 2000 ಕೋಟಿ ರೂ. ಇತ್ತು.
ಈ ದುಬಾರಿ ಮೊತ್ತ ಪಾವತಿಸಲು ಫ್ರಾಂಚೈಸಿಗಳು ಹಿಂಜರಿದ ನಂತರ ಮ್ಯಾಡ್ರಿಡ್ ಮೊತ್ತವನ್ನು 1000 ಕೋಟಿ ರೂ.ಗಿಂತ ಕಡಿಮೆ ಮಾಡಿತ್ತು. ಅದಾದ ಮೇಲೆಯೇ ಜ್ಯುವೆಂಟಸ್ ರೊನಾಲ್ಡೊರನ್ನು ಖರೀದಿಸಿತ್ತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.