ಪುಟಿನ್ ಪರ ಮಾತಿಗೆ ಟ್ರಂಪ್ ವಿರುದ್ಧ ಟೀಕೆ
Team Udayavani, Jul 18, 2018, 9:05 AM IST
ವಾಷಿಂಗ್ಟನ್: ಅಮೆರಿಕದಲ್ಲಿ 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಪಾತ್ರದ ಬಗ್ಗೆ ದೇಶದ ಗುಪ್ತಚರ ಸಂಸ್ಥೆಗಳು ನೀಡಿದ ವರದಿಯನ್ನು ಪುಷ್ಟೀಕರಿಸದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ಹೆಲ್ಸಿಂಕಿಯಲ್ಲಿ ಸೋಮವಾರ ನಡೆದಿದ್ದ ಐತಿಹಾಸಿಕ ಭೇಟಿಯಲ್ಲಿ ರಷ್ಯಾ ಯಾವುದೇ ರೀತಿಯಲ್ಲಿ ಅಧ್ಯಕ್ಷೀಯ ಚುನಾವಣೆ ವೇಳೆ ಪ್ರಭಾವ ಬೀರಿಲ್ಲ ಎಂದು ಹೇಳಿದ್ದರು.
ರಿಪಬ್ಲಿಕನ್ ಪಕ್ಷದಿಂದಲೇ ಟ್ರಂಪ್ ಹೇಳಿಕೆಗೆ ಅಸಮಾಧಾನ ವ್ಯಕ್ತವಾಗಿದೆ. ಅಮೆರಿಕ ಸಂಸತ್ನ ಸ್ಪೀಕರ್ ಪೌಲ್ ರಿಯಾನ್ ‘ರಷ್ಯಾ ನಮ್ಮ ಮಿತ್ರ ರಾಷ್ಟ್ರ ಅಲ್ಲ ಎನ್ನುವುದನ್ನು ಟ್ರಂಪ್ ಗಮನಿಸಬೇಕು’ ಎಂದಿದ್ದಾರೆ. ಇದರ ಜತೆಗೆ ನ್ಯಾಷನಲ್ ಇಂಟೆಲಿಜೆನ್ಸ್ನ ನಿರ್ದೇಶಕ ಡಾನ್ ಕೋಟ್ ಹೇಳಿಕೆ ನೀಡಿ ಚುನಾವಣೆಯಲ್ಲಿ ರಷ್ಯಾ ಪ್ರಭಾವ ಬೀರಿತ್ತು ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಅಧ್ಯಕ್ಷರ ಹೇಳಿಕೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿದಂತೆ ಎಂದಿದ್ದಾರೆ. ಇದರ ಜತೆಗೆ ಅಲ್ಲಿನ ಮಾಧ್ಯಮಗಳೂ ಕೂಡ ಆಕ್ಷೇಪ ಮಾಡಿವೆ. ‘ದ ನ್ಯೂಯಾರ್ಕ್ ಟೈಮ್ಸ್’ ತನ್ನ ಸಂಪಾದಕೀಯದಲ್ಲಿ ಟ್ರಂಪ್ ಅಮೆರಿಕಕ್ಕಾಗಿ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.