ಅಯೋಗ್ಯನ ಮುಖದಲ್ಲಿ ನಗು
Team Udayavani, Jul 18, 2018, 2:32 PM IST
ಸತೀಶ್ ನೀನಾಸಂ ನಾಯಕರಾಗಿ ನಟಿಸಿರುವ “ಅಯೋಗ್ಯ’ ಚಿತ್ರದ ಸದ್ದು ಆರಂಭವಾಗಿದೆ. ಈಗಾಗಲೇ ಚಿತ್ರತಂಡ “ಏನಮ್ಮಿ ಏನಮ್ಮಿ’ ಎಂಬ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಅದರ ಪರಿಣಾಮವಾಗಿ ಈಗ ಚಿತ್ರದ ಹಾಡು ಒಂದು ಮಿಲಿಯನ್ ಹಿಟ್ಸ್ ಆಗಿದೆ. ಈ ಮೂಲಕ ಚಿತ್ರತಂಡ ಖುಷಿಯಾಗಿದೆ.
ವಾರದ ಹಿಂದೆ ಬಿಡುಗಡೆಯಾದ ಹಾಡು, ಯೂಟ್ಯೂಬ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವುದರಿಂದ ಚಿತ್ರತಂಡಕ್ಕೆ ಸಿನಿಮಾ ಮೇಲಿನ ವಿಶ್ವಾಸ ಹೆಚ್ಚಿದೆ. ಜೊತೆಗೆ ಈ ಹಾಡಿನ ಕುರಿತಾದ ಡಬ್‌ಸ್ಮಾಶ್‌ಗಳು ಕೂಡಾ ಓಡಾಡುತ್ತಿವೆ. ಇವೆಲ್ಲದರಿಂದ ನಾಯಕ ಸತೀಶ್ ಖುಷಿಯಾಗಿದ್ದು, ದೊಡ್ಡ ಮಟ್ಟದ ಬ್ರೇಕ್ ಸಿಗುವ ವಿಶ್ವಾಸದಲ್ಲಿದ್ದಾರೆ. “ಏನಮ್ಮಿ ಏನಮ್ಮಿ’ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.
ಇದು ಒಂದು ವಿಚಾರವಾದರೆ ತಮಿಳಿನ ಖ್ಯಾತ ಗಾಯಕ ಅಂಥೋನಿ ದಾಸ್ “ಅಯೋಗ್ಯ’ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. “ಟಗರು’ ಸಿನಿಮಾದ “ಟಗರು ಬಂತು ಟಗರು’ ಹಾಡನ್ನು ನೆನೆಸಿಕೊಂಡರೆ ನಿಮಗೆ ಅಂಥೋನಿ ದಾಸ್ ಅವರ ಧ್ವನಿ ಕಿವಿಯಲ್ಲಿ ಗುಂಯ್‌ಗಾಡುತ್ತದೆ.
ಈಗ ಅಂಥೋನಿ ಮತ್ತೂಂದು ಕನ್ನಡ ಸಿನಿಮಾದಲ್ಲಿ ಹಾಡಿದ್ದಾರೆ. ಅದು “ಅಯೋಗ್ಯ’. ಹೌದು, “ಅಯೋಗ್ಯ’ ಚಿತ್ರದ ಹಾಡೊಂದನ್ನು ಅಂಥೋನಿ ದಾಸ್ ಹಾಡಿದ್ದಾರೆ. ಆ ಹಾಡಿಗೆ ಬೇರೆ ತರಹದ ಧ್ವನಿ ಬೇಕಾದ ಕಾರಣ ಚಿತ್ರತಂಡ, ಅಂಥೋನಿ ದಾಸ್ ಅವರಿಂದ ಹಾಡಿಸಿದೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಬ್ಯಾನರ್‌ನಡಿ ಚಂದ್ರಶೇಖರ್ ನಿರ್ಮಿಸಿದ್ದಾರೆ.
ಈ ಹಿಂದೆ “ಚಮಕ್’ ಚಿತ್ರ ಮಾಡಿರುವ ಚಂದ್ರಶೇಖರ್ ಈಗ “ಅಯೋಗ್ಯ’ನ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.