ಲಿಂಚಿಂಗ್‌ ವಿರುದ್ಧ ಕಾನೂನು ತ್ವರಿತವಾಗಿ ಪಾಲನೆಯಾಗಲಿ


Team Udayavani, Jul 19, 2018, 6:00 AM IST

10.jpg

ನ್ಯಾಯ ನೀಡುವುದು ಕಾನೂನಿನ ಕೆಲಸವೇ ಹೊರತು ಉದ್ರಿಕ್ತ ಗುಂಪಿನ ಕೆಲಸವಲ್ಲ ಎನ್ನುವುದನ್ನು ಥಳಿಸುವವರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಸಭ್ಯ ಭಾಷೆಯಲ್ಲಿ ಹೇಳಿದಾಗ ಅರ್ಥವಾಗದಿದ್ದರೆ ಕಠಿನವಾಗಿ ವರ್ತಿಸುವುದು ಅನಿವಾರ್ಯ. 

ಅಕ್ರಮ ಗೋ ಸಾಗಣೆ ಮತ್ತು ಮಕ್ಕಳ ಕಳ್ಳರು ಎಂದು ಶಂಕಿಸಿ ಅಮಾಯಕರನ್ನು ಥಳಿಸಿ ಸಾಯಿಸುವ ಭೀಕರ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಸಕಾಲಿಕವೂ, ಸಮುಚಿತವೂ ಹೌದು. ಕಳೆದ ಕೆಲ ವರ್ಷಗಳಿಂದೀಚೆಗೆ ಜನರ ಗುಂಪು ವದಂತಿಗಳನ್ನು ನಂಬಿ ಅಮಾಯಕರನ್ನು ಬಡಿದು ಸಾಯಿಸುವ ಪ್ರಕರಣಗಳು ಕಳವಳಕಾರಿಯಾಗಿ ಹೆಚ್ಚಿದ್ದು, ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ದೇಶ ತಲೆತಗ್ಗಿಸುವಂತಾಗಿದೆ. ಇಂಗ್ಲೀಶ್‌ನಲ್ಲಿ ಲಿಂಚಿಂಗ್‌ ಎಂಬುದಾಗಿ ಕರೆಯಲಾಗುವ ಈ ಕೃತ್ಯದ ಹಿಂದಿರುವುದು ಅಸಹನೆ ಮತ್ತು ಆತಂಕ. ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ ಈ ಮಾದರಿಯ ಕೃತ್ಯಗಳು ಸಂಭವಿಸಿವೆ. ಅದರಲ್ಲೂ ಮಹಾರಾಷ್ಟ್ರದ ಧುಳೆ ಜಿಲ್ಲೆಯಲ್ಲಿ ಐದು ಮಂದಿಯನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಥಳಿಸಿ ಕೊಂದಿರುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ. 

ಸಾಮೂಹಿಕವಾಗಿ ಥಳಿಸಿ ಕೊಲ್ಲುವುದನ್ನು ಸರ್ವೋತ್ಛ ನ್ಯಾಯಾಲಯ° ಭಯಾನಕ ಕೃತ್ಯ ಎಂಬುದಾಗಿ ವ್ಯಾಖ್ಯಾನಿಸಿರುವುದು ಪರಿಸ್ಥಿಯ ಗಂಭೀರತೆಯನ್ನು ತಿಳಿಸುತ್ತದೆ. ಇಂಥ ಕೃತ್ಯಗಳನ್ನು ನಿಯಂತ್ರಿಸದಿದ್ದರೆ ಅದು ಬಿರುಗಾಳಿಯಂತೆ ದೇಶಾದ್ಯಂತ ಹರಡಬಹುದು ಎಂದು ಸಕಾಲಿಕವಾದ ಎಚ್ಚರಿಕೆಯನ್ನು ಇದೇ ವೇಳೆ ನೀಡಿದೆ. ಇಂತಹ ಘಟನೆಗಳನ್ನು ತಡೆಯಲು ಕೇಂದ್ರವಾಗಲಿ, ರಾಜ್ಯ ಸರಕಾರಗಳಾಗಲಿ ಸಮರ್ಪಕ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಉಲ್ಲೇಖೀಸಿದೆ. ದೇಶದ ಪ್ರಜೆಗಳ ಪ್ರಾಣ ಮತ್ತು ಸೊತ್ತುಗಳನ್ನು ರಕ್ಷಿಸಬೇಕಾದದ್ದು ಚುನಾಯಿತ ಸರಕಾರಗಳ ಆದ್ಯ ಕರ್ತವ್ಯ. ಲಿಂಚಿಂಗ್‌ ತಡೆಯಲು ವಿಫ‌ಲವಾಗುವುದು ಎಂದರೆ ಸರಕಾರ ಈ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫ‌ಲವಾಗಿದೆ ಎಂದೇ ಅರ್ಥ. ಹೀಗಾಗಿ ಸರಕಾರಗಳು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಗಂಭೀರವಾಗಿ ಪರಿಗಣಿಸಬೇಕು. 

ಆರಂಭದಲ್ಲೇ ಕಠಿನ ಕ್ರಮ ಕೈಗೊಂಡಿದ್ದರೆ ಜನರಿಗೆ ಕಾನೂನಿನ ಭಯ ಮೂಡುತ್ತಿತ್ತು. ಅಂದರೆ ತತ್‌ಕ್ಷಣ ಸರಕಾರ ಪ್ರತಿಸ್ಪಂದಿಸಿ ಆರೋಪಿಗಳನ್ನು ಹಿಡಿದು ಕಠಿನ ಸಂದೇಶ ರವಾನಿಸುವ ಕೆಲಸವನ್ನು ಮಾಡಬೇಕಿತ್ತು.ಆದರೆ ಗುಂಪು ಸೇರಿ ಸಾಯಿಸುವ ಕೃತ್ಯಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಸಮರ್ಪಕವಾದ ಕಾನೂನೇ ಇಲ್ಲ. ಪ್ರಸ್ತುತ ಭಾರತೀಯ ದಂಡಸಂಹಿತೆಯ 302 ಮತ್ತು 34ನೇ ಸೆಕ್ಷನ್‌ ಪ್ರಕಾರ ಈ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿನ ಭಯ ಇಲ್ಲ ಎಂದಾದರೆ ಜನರು ತಾವು ಮಾಡಿದ್ದೇ ಸರಿ ಎಂದು ಭಾವಿಸುವ ಅಪಾಯವಿದೆ. ಸಮಾಜ ಈ ಹಂತಕ್ಕೆ ತಲುಪಿದರೆ ಅದು ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ನ್ಯಾಯ ನೀಡುವುದು ಕಾನೂನಿನ ಕೆಲಸವೇ ಹೊರತು ಉದ್ರಿಕ್ತ ಗುಂಪಿನ ಕೆಲಸವಲ್ಲ ಎನ್ನುವುದನ್ನು ಥಳಿಸುವವರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಸಭ್ಯ ಭಾಷೆಯಲ್ಲಿ ಹೇಳಿದಾಗ ಅರ್ಥವಾಗದಿದ್ದರೆ ಕಠಿನವಾಗಿ ವರ್ತಿಸುವುದು ಅನಿವಾರ್ಯ.ಇಷ್ಟರ ತನಕ ಸರಕಾರ ಇಂಥ ಕಾಠಿನ್ಯವನ್ನು ತೋರಿಸದಿರುವುದೇ ಪರಿಸ್ಥಿತಿ ಉಲ್ಬಣಿಸಲು ಕಾರಣ. ಈ ಕಠಿನತೆಯನ್ನೀಗ ಆಳುವವರು ತೋರಬೇಕಾಗಿದೆ. ನ್ಯಾಯಾಲಯವೂ ಇದೇ ದಾಟಿಯಲ್ಲಿ ಸರಕಾರಕ್ಕೆ ಚಾಟಿ ಬೀಸಿದೆ. 

ಲಿಂಚಿಂಗ್‌ ತಡೆಯಲು ಸಂಸತ್‌ನಲ್ಲಿ ವಿಶೇಷ ಕಾನೂನು ರಚನೆಯಾಗ ಬೇಕೆಂದು ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ವಿಳಂಬವಿಲ್ಲದೆ ಪಾಲಿಸುವ ವಿವೇಚನೆಯನ್ನು ಸರಕಾರ ತೋರಬೇಕು. ಸಮೂಹದಲ್ಲಿ ಸೇರಿ ಹೊಡೆದು ಸಾಯಿಸಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಭಂಡ ಧೈರ್ಯ ಮೂಡಿದರೆ ಕಾನೂನು ಅರ್ಥ ಕಳೆದುಕೊಳ್ಳುತ್ತದೆ. ಸಾಯಿಸುವವರು ಮತ್ತು ಸಾಯಿಸಲು ಕುಮ್ಮಕ್ಕು ನೀಡುವವರು ಇಬ್ಬರನ್ನೂ ಗುರುತಿಸಿ ಶಿಕ್ಷಿಸುವ ಕಾನೂನು ರಚನೆಯಾಗುಬೇಕಿರುವುದು ಸದ್ಯದ ಅಗತ್ಯ. ನಾಗರಿಕ ಸಮಾಜದಲ್ಲಿ ಒಂದು ಲಿಂಚಿಂಗ್‌ ಘಟನೆಯೇ ಎಚ್ಚೆತ್ತುಕೊಳ್ಳಲು ಸಾಕು. ಆದರೆ ನಾವು ಪದೇ ಪದೇ ಲಿಂಚಿಂಗ್‌ ಸಂಭವಿಸಿದರೂ ಎಚ್ಚೆತ್ತುಕೊಳ್ಳಲಿಲ್ಲ ಎನ್ನುವುದೇ ನಮ್ಮ ರಾಜಕೀಯ ಇಚ್ಛಾಶಕ್ತಿಯ ಎದುರು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಇಡುತ್ತದೆ. ಇದರಲ್ಲಿ ಪೊಲೀಸರ ಪಾಲೂ ಇದೆ. ಹಲವು ಘಟನೆಗಳು ಪೊಲೀಸರ ಕಣ್ಮುಂದೆಯೇ ನಡೆದಿವೆ. ಕೃತ್ಯವನ್ನು ತಡೆಯುವುದಾಗಲಿ, ಆರೋಪಿಗಳನ್ನು ಬಂಧಿಸುವುದಾಗಲಿ ಸಾಧ್ಯವಾಗಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.