113 ಕೆಜಿಯಿಂದ 63 ಕೆಜಿವರೆಗೆ ಕಾರ್ಕಳದ ರಜತ್ ಶೆಣೈ ಯಶೋಗಾಥೆ
Team Udayavani, Jul 19, 2018, 10:29 AM IST
‘ಮನಸ್ಸಿದ್ದರೆ ಮಾರ್ಗ…’ ಎಂಬ ಆಡುಮಾತಿಗೆ ಸರಿಹೊಂದುವಂತಹ ವಿಚಾರವಿದು. ಕಾರ್ಕಳ ಎಂಬ ಪುಟ್ಟ ಊರಿನ ರಜತ್ ಶೆಣೈ ಎಂಬ 23 ವರ್ಷದ ಯುವಕ ಬರೋಬ್ಬರಿ 113 ಕೆ.ಜಿ.ಗಳಿಂದ 63 ಕೆ.ಜಿಗಳಿಗೆ ತನ್ನ ದೇಹವನ್ನು ಮಾರ್ಪಾಡುಮಾಡಿಕೊಂಡಿರುವ ಹಿಂದೆ ರೋಚಕ ವಿಷಯಗಳಿವೆ. ಒಂದೂವರೆ ವರ್ಷಗಳ ಅವಧಿಯಲ್ಲಿ ರಜತ್ ಅವರ ಕಠಿಣ ಪರಿಶ್ರಮ ಇಂದು ಅವರನ್ನು ‘ಫಿಟ್’ ವ್ಯಕ್ತಿಯನ್ನಾಗಿಸಿದೆ. ಮತ್ತು ತನ್ನ ದೇಹ ಮಾರ್ಪಾಡು ವಿಧಾನಕ್ಕೆ ರಜತ್ ಆರಿಸಿಕೊಂಡಿದ್ದು ನೈಸರ್ಗಿಕ ವಿಧಾನಗಳನ್ನಷ್ಟೆ. ಇವುಗಳಲ್ಲಿ ಈಜು, ಸೈಕ್ಲಿಂಗ್, ಸರಿಯಾದ ರೀತಿಯ ದೇಹ ವ್ಯಾಯಾಮ ಮತ್ತು ಸಮಂಜಸ ಆಹಾರ ಪದ್ಧತಿ ಸೇರಿದೆ. ಹಾಗಾದರೆ ರಜತ್ ಅವರ ಈ ಕಠಿಣ ಪರಿಶ್ರಮದ ಹಿಂದಿದ್ದ ಅಂಶಗಳೇನು ಎಂಬುದನ್ನು ನಾವೀಗ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಒಂದೂವರೆ ವರ್ಷಗಳ ಹಿಂದೆ…
113 ಕೆ.ಜಿ.ಗಳ ದೇಹ ತೂಕವನ್ನು ಹೊತ್ತುಕೊಂಡು ವಿಧವಿಧವಾಗಿ ಬವಣೆಪಡುತ್ತಿದ್ದ ರಜತ್ ಅವರಿಗೆ ಎಲ್ಲರಂತೆಯೇ ಸ್ಲಿಮ್ ಆ್ಯಂಡ್ ಟ್ರಿಮ್ ಆಗಿರಬೇಕು ಎಂಬ ಕನಸಿದ್ದುದು ಸುಳ್ಳಲ್ಲ. ಆದರೆ ಆ ಸಮಯದಲ್ಲಿ ಅವರ ದೇಹದಲ್ಲಿದ್ದ ಕೊಬ್ಬಿನಾಂಶ 52 ರಿಂದ 55%! ಇಷ್ಟು ಅಗಾಧ ಪ್ರಮಾಣದ ಕೊಬ್ಬನ್ನು ಕರಗಿಸುವ ವಿಧಾನವಾದರೂ ಯಾವುದು? ಜಿಮ್ ಗೆ ಹೋಗುವುದೇ, ತಿನ್ನುವುದನ್ನು ಬಿಡುವುದೇ ಅಥವಾ ಕೊಬ್ಬನ್ನು ಕರಗಿಸುವ ಔಷಧಿಗಳನ್ನ ತೆಗೆದುಕೊಳ್ಳುವುದೇ… ಹೀಗೆ ಗೊಂದಲದಲ್ಲಿದ್ದ ರಜತ್ ಅವರ ಸಹಾಯಕ್ಕೆ ಬಂದಿದ್ದು ಬಾಲಿವುಡ್ ನಟ ಅಮೀರ್ ಖಾನ್. ಹೌದು, ನಟ ಅಮೀರ್ ಖಾನ್ ಅವರು ತಮ್ಮ ‘ದಂಗಲ್’ ಚಿತ್ರದಲ್ಲಿ ಎರಡು ಶೇಡ್ ಗಳ ಪಾತ್ರವನ್ನು ನಿರ್ವಹಿಸಿದ್ದು ಚಿತ್ರಪ್ರೇಮಿಗಳಿಗೆ ತಿಳಿದಿರುವ ವಿಚಾರವೇ. ಅಲ್ಲಿ ಅಮೀರ್ ಖಾನ್ ಬಾಡಿ ಫಾರ್ಮೇಶನ್ ಗೆ ಒಳಗಾಗಿದ್ದರು. ಇದರಿಂದ ಪ್ರೇರೇಪಿತರಾದ ರಜತ್ ಅವರು ದೇಹ ಸ್ವರೂಪ ಬದಲಾವಣೆ ಸಂಬಂಧಿತ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಅದೊಂದು ದಿನ ದೃಢ ನಿರ್ಧಾರಕ್ಕೆ ಬಂದೇ ಬಿಟ್ಟರು.
ಶುರುವಾಯ್ತು ಕೊಬ್ಬು ಕರಗಿಸುವ ಮಹಾಯಜ್ಞ!
ತನ್ನ ದೇಹಕ್ಕೊಂದು ಸುಂದರ ರೂಪ ನೀಡಲೇಬೇಕೆಂಬ ಹಠಕ್ಕೆ ಬಿದ್ದ ರಜತ್ ಶೆಣೈ ಬಾಡಿ ಫಾರ್ಮೇಶನ್ ಕಾರ್ಯಕ್ಕೆ ಇಳಿದೇ ಬಿಡುತ್ತಾರೆ. ಬೆಳಿಗ್ಗೆ ಐದೂವರೆಯಿಂದ ಪ್ರಾರಂಭಗೊಂಡ ಅವರ ದಿನಚರಿ ಬಿಸಿನೀರಿನ ಸೇವನೆಯ ಬಳಿಕ, ಒಂದುಗಂಟೆಗಳ ಈಜು, ಬಳಿಕ ಜಿಮ್ ನಲ್ಲಿ ಸರೀಯಾದ ರೀತಿಯ ವರ್ಕೌಟ್, ದಿನಕ್ಕೆ ಕನಿಷ್ಠ 30 ಕಿ,ಮೀ.ಗಳ ಸೈಕಲ್ ಸವಾರಿ, ಪ್ರತೀ 2 ಗಂಟೆಗಳಿಗೊಮ್ಮೆ ಆರೋಗ್ಯಕರ ಆಹಾರ ಸೇವನೆ… ಹೀಗೆ ತನ್ನ ದಿನಚರಿಗೊಂದು ನಿರ್ಧಿಷ್ಠ ಚೌಕಟ್ಟನ್ನು ಹಾಕಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದ ರಜತ್ ಅವರಿಗೆ ಪ್ರಾರಂಭದಲ್ಲಿ ಅಷ್ಟೇನೂ ಯಶಸ್ಸು ಸಿಗದಿದ್ದರೂ ಹೀಗೆ ಮಾಡಿದರೆ ತನ್ನ ದೇಹ ಬಗ್ಗುತ್ತದೆ ಎಂಬ ವಿಶ್ವಾಸ ಮೂಡಲು ಪ್ರಾರಂಭವಾದದ್ದು ಮಾತ್ರ ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.